Crime News

ಅಕ್ರಮ ಜಾನುವಾರು ಸಾಗಾಟ

ಮಡಿಕೇರಿ ಗ್ರಾಮಾಂತರ ಠಾಣಾ ಪಿ.ಎಸ್‍.ಐ. ಹೆಚ್.ವಿ. ಚಂದ್ರಶೇಖರ್ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಮಡಿಕೇರಿ ತಾಲೋಕು, ಹೊದ್ದೂರು ಗ್ರಾಮದ ವಾಟೆಕಾಡು ಎಂಬಲ್ಲಿ ರಜಾಕ್, ಕೊಟ್ಟಮುಡಿ ಗ್ರಾಮ, ಹ್ಯಾರೀಸ್, ಹೊದ್ದೂರು ಗ್ರಾಮ ಮತ್ತು ಸಿದ್ದಿಕ್, ಪಾಲೆಮಾಡು ಇವರುಗಳು ಸರಕಾರದ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ  ಒಂದು ಹೋರಿಯನ್ನು ಪಿಕ್‍ಅಪ್ ವಾಹನದಲ್ಲಿ ಸಾಗಾಟಮಾಡುತ್ತಿದ್ದುದನ್ನು ಸಿಬ್ಬಂದಿಯೊಂದಿಗೆ ಪತ್ತೆಹಚ್ಚಿ  ಹೋರಿ ಸಮೇತ ವಾಹನವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಹಣ ಹೂಡಿಕೆ ವಿಚಾರದಲ್ಲಿ ಭಾರೀ ವಂಚನೆ

ಹೆಚ್ಚಿನ ಲಾಭವನ್ನು ಗಳಿಸುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಸಂಸ್ಥೆಯೊಂದರಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಪ್ರಕರಣ ಜಿಲ್ಲಾ ಸಿಇಎನ್‍ ಪೊಲೀಸ್‍ ಠಾಣೆಯಲ್ಲಿ ವರದಿಯಾಗಿದೆ.  ಮಡಿಕೇರಿ ತಾಲೋಕು ಬಲ್ಲಮಾವಟಿ ಗ್ರಾಮದ ನಿವಾಸಿ ಕೆ.ಪಿ ಪ್ರಸಾದ್‍ಕುಮಾರ್ ಎಂಬುವರು ಅದೇ ಗ್ರಾಮದ  ಕೆ.ಎಂ. ಸುಬ್ಬಯ್ಯ ಎಂಬವರಿಗೆ  ಸಂಸ್ಥೆಯೊಂದರಲ್ಲಿ  ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಬರುತ್ತದೆ,  ತಾನು ಸಹ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದೇನೆ, 38 ಲಕ್ಷ ಹಣ ಹೂಡಿಕೆ ಮಾಡಿದರೆ 5 ಕೋಟಿ ಹಣ ಸಿಗುವುದಾಗಿ ತಿಳಿಸಿದ್ದು ಅದನ್ನು ನಂಬಿದ ಕೆ.ಎಂ.ಸುಬ್ಬಯ್ಯನವರು  ರೂ. 38 ಲಕ್ಷ ಹಣವನ್ನು ತಮ್ಮ ಬ್ಯಾಂಕ್‍ ಖಾತೆಯ ಮೂಲಕ ಕೆ.ಪಿ ಪ್ರಸಾದ್‍ಕುಮಾರ್ರವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ನಂತರ 3 ತಿಂಗಳಾದರೂ ಯಾವುದೇ ಹಣವನ್ನು ಮರಳಿಸದೇ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಿಇಎನ್‍ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.