Crime News

ಕಾಳು ಮೆಣಸು ಕಳವು ಪ್ರಕರಣ

                ದಿನಾಂಕ: 02-04-2020 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು ದೊಡ್ಡಹಣಕೋಡು ಗ್ರಾಮದ ನಿವಾಸಿ ಕೆ.ಡಿ ಬಿದ್ದಪ್ಪ ರವರ ಮನೆಯ ಪಕ್ಕದ ಗೋದಾಮಿನಲ್ಲಿ ಒಣಗಿಸಿ ಸಂಗ್ರಹಿಸಿ ಇಟ್ಟಿದ್ದ ಅಂದಾಜು 48,000 ರೂ ಬೆಲೆಯ 250 ಕೆ.ಜಿ ಕಾಳು ಮೆಣಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

                ದಿನಾಂಕ: 03-04-2020 ರಂದು ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮದ ನಿವಾಸಿ  ಪ್ರಶಾಂತ್ ಎಂಬುವರ ಮನೆಗೆ ಅವರ ಅಣ್ಣ ಪಿರಿಯಾಪಟ್ಟಣ ತಾಲ್ಲೂಕು ಅಳ್ಳೂರು ಕಾಲೋನಿ ನಿವಾಸಿ ರಾಜು ಎಂಬುವರು ಬಂದಿದ್ದು ಸ್ನಾನ ಮಾಡುವ ಸಲುವಾಗಿ ಮನೆಯ ಬಳಿ ಇದ್ದ ಕೆರೆಗೆ ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ಪ್ರಶಾಂತ್ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.