Crime News

ಹಲ್ಲೆ ಪ್ರಕರಣ; ಕೊಲೆ ಯತ್ನ

ದಿನಾಂಕ 04/04/2020ರಂದು ನಾಪೋಕ್ಲು ಬಳಿಯ ಕೋಕೇರಿ ಗ್ರಾಮದ ಕಿಕ್ಕರೆ ನಿವಾಸಿ ಕೆ.ಎ.ಅಬ್ದುಲ್ ರಜಾಕ್ ಎಂಬವರು ಅವರ ತಮ್ಮ ಹ್ಯಾರಿಸ್ ಮತ್ತು ತಂದೆ ಆಲಿರವರೊಂದಿಗೆ ತೋಟಕ್ಕೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಅಬ್ದುಲ್ಲಾ ಮತ್ತು ಅವರ ಪತ್ನಿ ಬೀಬಿ ಎಂಬವರು ಹಳೆ ವೈಷಮ್ಯದಿಂದ ಜಗಳವಾಡಿ ಅಬ್ದುಲ್ ರಜಾಕ್ ಮತ್ತು ಹ್ಯಾರಿಸ್‌ರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವುದಾಗಿ ದೂರು ನೀಡಿದ್ದು, ಅದೇ ರೀತಿ ಅಬ್ದುಲ್ ರಜಾಕ್, ಅವರ ತಮ್ಮ ಹ್ಯಾರಿಸ್ ಮತ್ತು ತಂದೆ ಆಲಿರವರು ರಸ್ತೆ ವಿಚಾರದಲ್ಲಿ ಕ.ಎಸ್.ಅಬ್ದುಲ್ಲಾರವರ ಜೊತೆ ಜಗಳವಾಡಿ ಹ್ಯಾರಿಸ್‌ರವರು ಮತ್ತು ಅಬ್ದುಲ್ ರಜಾಕರವರು  ಅಬ್ದುಲ್ಲರವರ ಮೇಲೆ ಕಬ್ಬಿಣದ ರಾಡಿನಿಂದ ಹೊಡೆದು ಮತ್ತು ಕತ್ತಿಯಿಂದ ಕಡಿದು ಹಲ್ಲೆ ಕೊಲೆಯತ್ನ ಮಾಡಿದ್ದು ಆಲಿರವರು ಕೋವಿ ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಖಿರುವುದಾಗಿ ಕೆ.ಎಸ್. ಅಬ್ದುಲ್ಲಾರವರು ಪ್ರತಿ ದೂರು ನೀಡಿದ್ದು ನಾಪೋಕ್ಲು ಪೊಲೀಸರು ಎರಡೂ ದೂರುಗಳ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.