Crime News
ಹಲ್ಲೆ ಪ್ರಕರಣ
ದಿನಾಂಕ: 06-04-2020 ರಂದು ವಿರಾಜಪೇಟೆ ತಾಲ್ಲೂಕು ಮುಗುಟಗೇರಿ
ಗ್ರಾಮದ ನಿವಾಸಿ ಬೋಪಣ್ಣ ಎಂಬುವವರು ಮನೆಗೆ ಹೋಗುತ್ತಿರುವಾಗ ಅವರ ತಂಗಿ
ಅಕ್ಕಮ್ಮ ಮತ್ತು ಬಾವ ಬೋಪಯ್ಯ ಎಂಬುವವರು ವ್ಯಾಜ್ಯವಿದ್ದ ಸ್ಥಳದ ಬಾವಿಯ ಹತ್ತಿರ ಕೆಲಸ ಮಾಡಿಸುತ್ತಿರುವುದನ್ನು
ಕೇಳಿದಾಗ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ
ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.