Crime News

ಪೊಲೀಸ್‌ ಸಿಬ್ಬಂದಿಗಳಿಗೆ ವೈದ್ಯಕೀಯ ಪರೀಕ್ಷೆ.

ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳಿನಿಂದ ಕೋವಿಡ್ – 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದ ವಿಧಿಸಲಾದ ಲಾಕ್‌ಡೌನ್ ಆದೇಶವನ್ನು ಜಾರಿಗೊಳಿಸಲು ಕೊಡಗು ಜಿಲ್ಲೆಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ನಿರಂತರವಾಗಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೋನಾ ವೈರಸ್ ಸೋಂಕಿಗೆ ಒಳಗಾಗುವ ಭೀತಿ ಇದ್ದು ಈ ಸಂಬಂಧ  ಜಿಲ್ಲೆಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೊಡಗು ಜಿಲ್ಲೆಯ ರಾಜ ರಾಜೇಶ್ವರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ಸಿ.ನವೀನ್‌ ಕುಮಾರ್ ಮತ್ತು ಅವರ ವೈದ್ಯರ ತಂಡವು ದಿನಾಂಕ 06/04/2020 ರಿಂದ 14/04/2020ರ ವರೆಗೆ ಜಿಲ್ಲೆಯ ವಿವಿದೆಡೆಗಳಲ್ಲಿ  ವೈದ್ಯಕೀಯ ಶಿಬಿರವನ್ನು ಏರ್ಪಡಿಸಿ ವೈದ್ಯಕೀಯ  ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ದಿನಾಂಕ 06/04/2020ರಂದು ಮಡಿಕೇರಿಯ ಮೈತ್ರಿ ಪೊಲೀಸ್‌ ಸಮುದಾಯ ಭವನದಲ್ಲಿ ಪ್ರಾರಂಭಿಸಲಾದ ಪ್ರಥಮ ಶಿಬಿರದಲ್ಲಿ ಸುಮಾರು 146 ಮಂದಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡು ವೈದ್ಯಕೀಯ ಪರೀಕ್ಷೆಗೊಳಗಾಗಿರುತ್ತಾರೆ.

          ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಪೊಲೀಸ್‌ ಇಲಾಖೆಯೂ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ರೀತಿಯಲ್ಲಿಯೇ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳೂ ಸಹಾ ಜನರ ನಡುವೆ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ರೀತಿಯ ಸೋಂಕಿಗೆ ಒಳಗಾಗದ ಹಾಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ ಮೂರೂ ಉಪ ವಿಭಾಗಗಳಲ್ಲಿ ದಿನಾಂಕ 14/04/2020ರ ವರೆಗೆ ವೈದ್ಯಕೀಯ ಪರೀಕ್ಷೆ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.

ವಿದ್ಯುತ್ ಆಕಸ್ಮಿಕ, ವ್ಯಕ್ತಿ ಸಾವು

ದಿನಾಂಕ 07/04/2020ರಂದು ಸೋಮವಾರಪೇಟೆ ಬಳಿಯ ಬಾಣಾವರ ಗ್ರಾಮದ ನಿವಾಸಿ ಬಸವರಾಜು ಎಂಬವರು ಎರಪಾರೆ ಗ್ರಾಮದ ಚಂದ್ರಪ್ಪ ಎಂಬವರ ತೋಟದಲ್ಲಿ ಸಿಲ್ವರ್ ಓಕ್ ಮರಕ್ಕೆ ಅಲ್ಯುಮಿನಿಯಂ ಏಣಿಯನ್ನು ಹಾಕಿ ಮರಗಸಿ ಮಾಡುತ್ತಿರುವಾಗ ಏಣಿಯು ಆಕಸ್ಮಿಕವಾಗಿ ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿ ಕೆಲಸ ಮಾಡುತ್ತಿದ್ದ ಬಸವರಾಜುರವರಿಗೆ ವಿದ್ಯುತ್ ಆಘಾತ ಉಂಟಾಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ದಿನಾಂಕ 07/04/2020ರಂದು ನಾಪೋಕ್ಲು ಬಳಿಯ ಚೇಲಾವರ ನಿವಾಸಿ ಈರಪ್ಪ ಎಂಬವರಿಗೆ ರಾಹುಲ್ ಶರ್ಮಾ ಎಂಬವರು ತಾನು ವಿಜಯಾ ಬ್ಯಾಂಕ್ ವ್ಯವಸ್ಥಾಪಕ ಎಂಬುದಾಗಿ ಪರಿಚಯಿಸಿಕೊಂಡು ಮೊಬೈಲ್ ಕರೆ ಮಾಡಿ ಈರಪ್ಪರವರ ಬ್ಯಾಂಕ್ ಖಾತೆಯನ್ನು ಅಪ್‌ಡೇಟ್ ಮಾಡಬೇಕಾಗಿದ್ದು ಈರಪ್ಪನವರ ಮೊಬೈಲಿಗೆ ಬಂದ ಒಟಿಪಿ ಸಂಖ್ಯೆಯನ್ನು ನೀಡುವಂತೆ ಕೇಳಿದ್ದು ಈರಪ್ಪನವರು ಒಟಿಪಿ ಸಂಖ್ಯೆಯನ್ನು ನೀಡಿದ ನಂತರ ರಾಹುಲ್ ಶರ್ಮಾ ಈರಪ್ಪನವರ ಖಾತೆಯಲ್ಲಿದ್ದ ರೂ. 50,000/- ಹಣವನ್ನು ಆತನ ಖಾತೆಗೆ ವಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕುಸಿದು ಬಿದ್ದು ವ್ಯಕ್ತಿ ಸಾವು

ದಿನಾಂಕ 06/04/2020ರ ಸಂಜೆ ವೇಳೆಯಲ್ಲಿ ವಿರಾಜಫೇಟೆ ಬಳಿಯ ಬಾಳುಗೋಡು ನಿವಾಸಿ ಟಿ.ಟಿ. ಪ್ರಕಾಶ ಎಂಬವರ ತಂದೆ ತಮ್ಮಯ್ಯ ಎಂಬವರು ಮನೆಯ ಪಕ್ಕದ ತೊಟದಲ್ಲಿ ಮಗುಚಿ ಬಿದ್ದು ಮೃತರಾಗಿದ್ದು ಮೃತ ತಮ್ಮಯ್ಯನವರಿಗೆ ರಕ್ತದೊತ್ತಡ, ಮಧುಮೇಹ ಮತ್ತು ಅಸ್ತಮಾ ಕಾಯಿಲೆ ಇದ್ದು ಈ ಕಾರಣದಿಂದ ಕುಸುದು ಬಿದ್ದು ಸಾವಿಗೀಡಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 07/04/2020ರಂದು ಕುಟ್ಟ ಬಳಿಯ ಕೋತೂರು ನಿವಾಸಿ ವಿ.ಎಸ್.ವೇದಾವತಿ ಎಂಬವರ ಮಗಳು ಗಾನವಿ ಎಂಬಾಕೆಯು ಆಕೆಯ ಬೈಸಿಕಲಿನಲ್ಲಿ ಕಾನೂರಿನಿಂದ ಹಾಲು ತೆಗೆದುಕೊಂಡು ಬರುತ್ತಿರುವಾಗ ಕೋತೂರಿನ ಮನ್ನಕಮನೆ ಉಮೇಶ ಎಂಬವರ ಮನೆಯ ಬಳಿಯ ರಸ್ತೆಯಲ್ಲಿ ಎದುರಿನಿಂದ ಮನ್ನಕಮನೆ ಪ್ರಕಾಶ ಎಂಬವರು ಅವರ ಜೀಪನ್ನು ಅತಿ ವೇಗ ಮ್ತತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಾನವಿಯ ಬೈಸಿಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಗಾನವಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.