Crime News

ಒಟಿಪಿ ಪಡೆದು ವಂಚನೆ

     ಅಪರಿಚಿತ ವ್ಯಕ್ತಿಯೊಬ್ಬರು ಮಡಿಕೇರಿ ತಾಲೋಕು, ಕಗ್ಗೋಡ್ಲು ಗ್ರಾಮದ ನಿವಾಸಿ ಕೆ.ಎ. ರಾಧ ಎಂಬವರಿಗೆ  ದೂರವಾಣಿ ಮೂಲಕ ಕರೆಮಾಡಿ ತಾನು ವಿಜಯ ಬ್ಯಾಂಕ್ ವ್ಯವಸ್ಥಾಪಕ ಎಂದು ಹೇಳಿ  ಕೊರೊನಾ ವೈರಸ್‍ ಸಂಬಂಧ ಕೇಂದ್ರ ಸರಕಾರ ಲಾಕ್‍ಡೌನ್‍ ಮಾಡಿದ ನಿಟ್ಟಿನಲ್ಲಿ ಹಣವನ್ನು ನೀಡುವ ಸಂಬಂಧ  ಮೊಬೈಲ್‍ ನಂಬರಿಗೆ ಬಂದ ಒಟಿಪಿ ಸಂಖ್ಯೆಯನ್ನು ನೀಡುವಂತೆ ಕೇಳಿದ್ದು, ಅದರಂತೆ  ಕೆ.ಎ. ರಾಧರವರು ಒಟಿಪಿ ಸಂಖ್ಯೆಯನ್ನು ಸದರಿ ವ್ಯಕ್ತಿಗೆ  ನೀಡಿದ್ದು, ಸದರಿ ಕೆ.ಎ. ರಾಧರವರ ಅರಿವಿಗೆ ಬಾರದಂತೆ ಅವರ ಖಾತೆಯಿಂದ ರೂ.21,000/-ಗಳನ್ನು ಡ್ರಾ ಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೊಡಗು ಜಿಲ್ಲಾ ಸಿಇಎನ್‍ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಾನುವಾರು ಕಳವು ಪ್ರಕರಣ

ಸಿದ್ದಾಪುರ ಠಾಣಾ ಸರಹದ್ದಿನ  ಅಮ್ಮತ್ತಿ ರಸ್ತೆ, ಸಿದ್ದಾಪುರ ನಿವಾಸಿ ಕೆ.ಎಂ. ಅಂದು ಎಂಬವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ದಿನಾಂಕ 7-4-2020 ರಂದು  ಕಟ್ಟಿಹಾಕಿದ್ದ 2 ಜರ್ಸಿ ಕರುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸಿದ್ದಾರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೌಚಾಲಯ ನಿರ್ಮಿಸುವ ವಿಷಯದಲ್ಲಿ ಜಗಳ

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮದ ನಿವಾಸಿ ಶ್ರೀಮತಿ ಶೋಭಾ ಎಂಬವರು ತಮ್ಮ ಮನೆಯ ಬಳಿ ದಿನಾಂಕ 5-4-2020 ರಂದು ಶೌಚಾಲಯ ನಿರ್ಮಿಸುವ ಸಂಬಂಧ ಗುಂಡಿಯನ್ನು ತೆಗೆಸುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ನಿವಾಸಿಗಳಾದ ರಾಜು, ಲಕ್ಷ್ಮಮ್ಮ ಮತ್ತು ಮೂರ್ತಿ ಎಂಬವರುಗಳು ಅಲ್ಲಿಗೆ ಬಂದು ಹೊಲ ಹೂಳುವ ಸಮಯದಲ್ಲಿ ಟ್ರಾಕ್ಟರ್‍ ಹೋಗಲು ತೊಂದರೆಯಾಗುತ್ತದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಶ್ರೀಮತಿ ಶೋಭಾರವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.