Crime News

ಮನುಷ್ಯ ಕಾಣೆ:

ಮಡಿಕೇರಿ ನಗರದ ಮಂಗಳಾದೇವಿ ನಗರ ನಿವಾಸಿ ನೆಣವತ್ ಲೋಕೇಶ್ ನಾಯ್ಕ ಎಂಬವರು ಮಡಿಕೇರಿ ಕೆ.ಎಸ್‍.ಆರ್.ಟಿ.ಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 15-5-2018 ರಂದು ತನ್ನ ಸ್ವಂತ ಊರಾದ ಬಳ್ಳಾರಿ ಜಿಲ್ಲೆಯ ಬಂಡೆಬಸಪುರ ಗ್ರಾಮಕ್ಕೆ ಹೋಗಿ ಬಂದು ನಂತರ ಕರ್ತವ್ಯಕ್ಕೂ ಹೋಗದೆ ಕಾಣೆಯಾಗಿರುತ್ತಾರೆಂದು ಕಾಣೆಯಾದ ವ್ಯಕ್ತಿಯ ಅಣ್ಣ ಗೋವಿಂದ ನಾಯ್ಕರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.

ದಾರಿ ದೀಪದ ಸೋಲಾರ್ ಪ್ಯಾನಲ್ ಮತ್ತು ಬ್ಯಾಟರಿ ಕಳವು:

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ತಾವೂರು ಗ್ರಾಮದ ಕಾವೇರಿ ಕಾಲೇಜು ಬಳಿ ಅಳವಡಿಸಿದ ಸುಮಾರು 40,000 ರೂ. ಮೌಲ್ಯದ ಸೋಲಾರ್ ಬೀದಿ ದೀಪದ ಪ್ಯಾನಲ್ ಬೋರ್ಡ್ ನ್ನು ಮತ್ತು ಅದರ ಬ್ಯಾಟರಿಯನ್ನು ದಿನಾಂಕ 6-6-2018ರ ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಭಾಗಮಂಡಲ ಪಾಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಲಾರಿ ಡಿಕ್ಕಿ:

ಮಡಿಕೇರಿ ತಾಲೋಕು ಬೇಂಗೂರು ಗ್ರಾಮದ ನಿವಾಸಿ ಮೇದಪ್ಪ ಎಂಬವರು ದಿನಾಂಕ 8-6-2018 ರಂದು ತಮ್ಮ ಬಾಪ್ತು ಕಾರಿನಲ್ಲಿ ಮಂಗಳೂರಿನ ಕಡೆಗೆ ಹೋಗುತ್ತಿದ್ದಾಗ ಮದೆನಾಡು ಗ್ರಾಮದ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಫಿರ್ಯಾದಿ ಮೇದಪ್ಪನವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮೇದಪ್ಪನವರ ಮಗಳಾದ ಸಾಕ್ಷ್ಯಳಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಶೇಖರ ಎನ್.ಎ ಎಂಬವರು ದಿನಾಂಕ 8-6-2018 ರಂದು ತನ್ನ ಪತ್ನಿಯೊಂದಿಗೆ ನಾಗೇಶ್ ಎಂಬವರ ಆಟೋ ರಿಕ್ಷಾದಲ್ಲಿ ಮಕ್ಕಂದೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಮಕ್ಕಂದೂರು ಗ್ರಾಮದ ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ಟೋಯೋಟಾ ಇಟಿಯಾಸ್ ಕಾರು ಆಟೋರಿಕ್ಷಾಕ್ಕೆ ಡಿಕ್ಕಿಯಾಗ ಪರಿಣಾಮ ಸದರಿ ಆಟೋ ರಿಕ್ಷಾ ರಸ್ತೆ ಮೇಲೆ ಮಗುಚಿಬಿದ್ದು ಎನ್.ಎ ಶೇಖರ್ ರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವ್ಯಕ್ತಿಯಿಂದ ಕೊಲೆ ಬೆದರಿಕೆ:

ಮಡಿಕೇರಿ ತಾಲೋಕು ಬಾವಲಿ ಗ್ರಾಮದ ನಿವಾಸಿ ಶ್ರೀಮತಿ ತಾರಾಮಣಿ ಎಂಬವರು ದಿನಾಂಕ 6-6-2018 ರಂದು ಅಪರಾಹ್ನ 5-45 ಗಂಟೆ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ಇರುವಾಗ್ಗೆ ಅವರ ಗಂಡನ ತಮ್ಮನಾದ ಪಿ.ಪಿ. ಸೋಮಯ್ಯ ಎಂಬವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಕು ತಾರಾಮಣಿಯವರನ್ನು ಹಾಗು ಆಕೆಯ ಗಂಡ ಪಿ.ಪಿ.ನಾಣಯ್ಯನವರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿಚಾರದಲ್ಲಿ ಜಗಳ, ಹಲ್ಲೆ:

ಸೋಮವಾರಪೇಟೆ ತಾಲೋಕು ಹೆಬ್ಬಾಲೆ ಗ್ರಾಮದ ಹೆಚ್.ಎನ್. ಸತೀಶ್ ಎಂಬವರು ದಿನಾಂಕ 8-6-2018 ರಂದು 15-00 ಗಂಟೆ ಸಮಯದಲ್ಲಿ ಹೆಬ್ಬಾಲೆ ಗ್ರಾಮದಲ್ಲಿರುವ ತಮ್ಮ 2 ಏಕರೆ ಜಮೀನನಲ್ಲಿ ತನ್ನ ಪತ್ನಿ ಮತ್ತು ಮಗನೊಂದಿಗೆ ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿಗಳಾದ ಅದೇ ಗ್ರಾಮದ ಕುಮಾರ, ನಾಗೇಶ ಮತ್ತು ಮಣಿ ರವರುಗಳು ಅಲ್ಲಿಗೆ ಬಂದು ಜಾಗದ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ಹೆಚ್.ಎನ್. ಸತೀಶರವರ ಮಗನಾದ ಪ್ರವೀಣ ರವರ ತಲೆಗೆ ಕಡಿದು ಗಾಯಪಡಿಸಿ ಅಲ್ಲದೆ ಸತೀಶ್ ರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಪತ್ನಿ ಮಂಜುಳಾ ರವರ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಶನಿವಾರಸಂತೆ ಠಾಣಾ ಸರಹದ್ದಿನ ಮಣಗಲಿ ಗ್ರಾಮದ ನಿವಾಸಿ ಎಂ.ಜಿ. ಕೀರ್ತಿ ಎಂಬವರ ತಂದೆ 50 ವರ್ಷ ಪ್ರಾಯದ ಗಣಪತಿ ಎಂಬವರು ದಿನಾಂಕ 29-5-2018 ರಂದು ಬೆಳಗ್ಗೆ ಹಂಡ್ಲಿ ಗ್ರಾಮದ ಸಹಕಾರಿ ಸಂಘಕ್ಕೆ ಹೋಗಿ 20,000 ರೂ ಹಣ ಡ್ರಾ ಮಾಡಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಎಂ.ಜಿ. ಕೀರ್ತಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.