Crime News

ಲಾಕ್ ಡೌನ್ ಆದೇಶ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮ:

                ಕೋವಿಡ್-19 ಸಂಬಂದ ಸರ್ಕಾರದ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮೈದಾನದಲ್ಲಿ ಗುಂಪು ಸೇರಿದ್ದ ವ್ಯಕ್ತಿಗಳ ವಿರುದ್ದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿರುತ್ತಾರೆ.         

                ಸಾಂಕ್ರಾಮಿಕವಾಗಿರುವ ಕೋವಿಡ್ -19 ಹರಡುವಿಕೆ ತಡೆಗಟ್ಟಲು ಸರ್ಕಾರವು ಲಾಕ್ ಡೌನ್ ಆದೇಶ ಹೊರಡಿಸಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಗುಂಪು ಸೇರದಂತೆ ಜಿಲ್ಲಾ ದಂಡಾಧಿಕಾರಿಗಳ ಆದೇಶವಿದ್ದರೂ ಸಹಾ  ದಿನಾಂಕ: 12-04-2020 ರಂದು ಮಡಿಕೇರಿ ತಾಲ್ಲೂಕು ಕಡಗದಾಳು ಗ್ರಾಮದ ಕತ್ತಲೆಕಾಡು ಪೈಸಾರಿಯ ಮಾದೇಟ್ಟಿರ ಕುಟುಂಬಸ್ಥರಿಗೆ ಸೇರಿದ ಮೈದಾನಕ್ಕೆ ಬೈಕ್ ಗಳಲ್ಲಿ ಹೋಗಿ ಫೈರ್ ಕ್ಯಾಂಪ್ ಹಾಕಿ ಕೇಕೆ ಹಾಕಿಕೊಂಡು ಮನೋರಂಜನೆಗಾಗಿ ಖಾಲಿ ಬಿಯರ್ ಬಾಟಲಿಗಳನ್ನು ಮರಕ್ಕೆ ಕಟ್ಟಿಕೊಂಡು ಅದಕ್ಕೆ ಕಲ್ಲು ಹೊಡೆಯುತ್ತಾ ಗುಂಪು ಸೇರಿಕೊಂಡಿದ್ದ ಕಡಗದಾಳು ಗ್ರಾಮ, ಕತ್ತಲೆಕಾಡು ಪೈಸಾರಿ ನಿವಾಸಿಗಳಾದ ಅಭಿಲಾಷ್, ನವೀನ್, ಅಶ್ವಥ್, ಅಕ್ಷಯ್, ಅಶೋಕ್ ,ರಾಜೇಶ್ ಎಂಬುವವರ ವಿರುದ್ದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕಲಂ: 188, 269, 271 ಐ.ಪಿ.ಸಿ ಮತ್ತು 51(ಬಿ) ಡಿಸಾಸ್ಟರ್ ಮೇನೇಜ್ಮೆಂಟ್ ಆಕ್ಟ್ ರೀತ್ಯಾ ಕಾನೂನು ಕ್ರಮ ಜರುಗಿಸಿ ಆರೋಪಿಗಳಿಗೆ ಸೇರಿದ ಬೈಕ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ, ಐ.ಪಿ.ಎಸ್, ರವರ ನಿರ್ದೇಶನದಂತೆ ಮಡಿಕೇರಿ ಉಪವಿಭಾಗದ ಉಪಅಧೀಕ್ಷಕರಾದ ಶ್ರೀ ಬಿ.ಪಿ ದಿನೇಶ್ ಕುಮಾರ್ ಮತ್ತು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕಾರದ ಶ್ರೀ ಸಿ.ಎನ್ ದಿವಾಕರ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀ ಚಂದ್ರಶೇಖರ್ ಮತ್ತು ಸಿಬ್ಬಂದಿಯವಾರದ ಶ್ರೀ ದಿನೇಶ್ ಮತ್ತು ಪ್ರವೀಣ್ ರವರು ಮಾಹಿತಿ ಬಂದ ಕೂಡಲೇ ಸೂಕ್ತ ಸಮಯದಲ್ಲಿ ಸ್ಥಳಕ್ಕೆ ತೆರಳಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಡಿಕೇರ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ  ರಂಗಸಮುದ್ರದ ಕಬ್ಬಿನ ಗದ್ದೆ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಮಂಜುಳ ಎಂಬವರ ಪತಿ 37 ವರ್ಷದ ಲೋಕೇಶ್ ಎಂಬವರು ದಿನಾಂಕ 11-4-2020 ರಂದು  ತಮ್ಮ ಹಸುಗಳನ್ನು ಹೊಡೆದುಕೊಂಡು ಬರುತ್ತಿದ್ದಾ ಕಾಡಾನೆಯೊಂದ ಅವರ ಮೇಲೆ ದಾಳಿ ಮಾಡಿದ್ದು ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸದರಿ ಲೋಕೇಶ್ ರವರು ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಶವ ಪತ್ತೆ

ವಿರಾಜಪೇಟೆ ತಾಲೋಕು, ಬೆಟೋಳಿ ಗ್ರಾಮದ ನಿವಾಸಿ ಮೂಸ ಎಂಬವರು ಕಾಣೆಯಾದ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಿನಾಂಕ 11-4-2020 ರಂದು ಕಾಣೆಯಾದ ವ್ಯಕ್ತಿ ಮೂಸ ರವರ ಮೃತ ದೇಹವು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆ.ಬೈಗೋಡು ಗ್ರಾಮದ ಕೇಳಪಂಡ ಬೋಜಕ್ಕಿ ಎಂಬವರ ಬಾಪ್ತು ಖಾಲಿ ಜಾಗದಲ್ಲಿ ದೊರೆತಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.