Crime News

ಅಕ್ರಮ ಮರಳು ಸಾಗಾಟ ಪ್ರಕರಣ:

            ದಿನಾಂಕ: 12-04-2020 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು ಗ್ರಾಮದ ಬಳಿ ಹರಿಯುವ ತೊಡಿನಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

            ಸೋಮವಾರಪೇಟೆ ಠಾಣೆಯ ಪ್ರೊ. ಪಿ.ಎಸ್.ಐ ಕರಿಬಸಪ್ಪ ಮತ್ತು ಸಿಬ್ಬಂದಿಯವರಾದ ನವೀನ್ ಕುಮಾರ್ ಮತ್ತು ಜಗದೀಶ್ ರವರು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದಾಗ ಪಿಕ್ ಅಪ್ ಗೆ ಮರಳು ತುಂಬಿಸುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಮರಳು ಹಾಗೂ ಕೆ ಎ-45-6025 ರ ಪಿಕ್ಅಪ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಲಾಕ್ ಡೌನ್ ಆದೇಶ ಉಲ್ಲಂಘನೆ, ಪ್ರಕರಣ ದಾಖಲು:

               ದಿನಾಂಕ: 12-04-2020 ರಂದು ಕೊಡಗು ಜಿಲ್ಲಾ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರಿಸಾರ್ಟ್ ನಲ್ಲಿ ಮೋಜು-ಮಸ್ತಿ ನಡೆಯುತ್ತಿರುವುದರ ಬಗ್ಗೆ, ದೊರೆತ ಮಾಹಿತಿಯ ಅನ್ವಯ ಪಿಡಿಒ ರವೀಶ್ ರವರೊಂದಿಗೆ ಪೊಲೀಸರು ಪರಿಶೀಲಿಸಲಾಗಿ, ಚಿಕ್ಲಿಹೊಳೆ ರಸ್ತೆಯಲ್ಲಿ ಒಂದು ಜೀಪ್ ನಂಬರ್ ಕೆಎ 12ಪಿ 1953 ರಲ್ಲಿ ಸುಮಾರು 6 ಜನರು ಸುಂಟಿಕೊಪ್ಪ ಕಡೆ ಬರುತ್ತಿದ್ದು, ಅವರನ್ನು ನಿಲ್ಲಿಸಿ ವಿಚಾರ ಮಾಡಲಾಗಿ ಅವರು ಒಂದು ಕುಟುಂಬದವರಾಗಿದ್ದು ಲಾಕ್ ಡೌನ್ ಗಿಂತ ಮುಂಚತವಾಗಿಯೇ ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದು ಈ ದಿನ ಚಿಲ್ಲಿ ಹೊಳೆ ಕಡೆಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದ್ದು ಸದರಿಯವರು ಮಾನ್ಯ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಈ ಬಗ್ಗೆ ಸದರಿ ಜೀಪ್ ಚಾಲಕ ಸ್ವಾಮಿ, ಕಾರ್ತಿಕ್, ಅರುಣ, ಚೇತನ್ ಮತ್ತು ರಂಜಿತ್ ರವರನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಕಾಲಂ 188 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ:

             ಕೋವಿಡ್ -19 ಸಂಬಂಧ ಸರ್ಕಾರದ ಲಾಕ್ ಡೌನ್ ಅದೇಶಾನುಸಾರ ಮಾನ್ಯ ಕೊಡಗು ಜಿಲ್ಲಾ ದಂಡಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅನಾವಶ್ಯಕವಾಗಿ ಓಡಾಡುವುದು ಮತ್ತು ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಮಾಡಿದ್ದರೂ ಸಹಾ ಆದೇಶ ಉಲ್ಲಂಘಿಸಿ ದಿನಾಂಕ: 12-04-2020 ರಂದು ವಿರಾಜಪೇಟೆ ತಾಲ್ಲೂಕು ಮಾಯಮುಡಿ ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್   ಅಂದರ್  ಬಾಹರ್  ಜೂಜಾಟವನ್ನು ಆಡುತ್ತಿದ್ದ ಪ್ರಕರಣವನ್ನು  ಗೋಣಿಕೊಪ್ಪ ಠಾಣೆ ಪಿ.ಎಸ್.ಐ ಸುರೇಶ್ ಬೋಪಣ್ಣ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರೋನಾ ವೈರಸ್  ಸಾಂಕ್ರಾಮಿಕವಾಗಿ ಹರಡುವ ರೋಗ ಎಂದು  ತಿಳಿದಿದ್ದರೂ ಸಹ  ಅನಾವಶ್ಯಕವಾಗಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ  ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷತನದಿಂದ ಹಾಗೂ ಉದ್ದೇಶ ಪೂರ್ವಕವಾಗಿ  ಲಾಕ್ ಡೌನ್ ಆದೇಶ ಉಲ್ಲಂಘನೆ  ಮಾಡಿ ಗುಂಪು ಸೇರಿಕೊಂಡು ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ತಿತಿಮತಿ ಗ್ರಾಮದ ನಿವಾಸಿಗಳಾದ ವಿಶ್ವನಾಥ, ಲಕ್ಷ್ಮಣ, ನಂದೀಶ್, ಪ್ರಕಾಶ್ ಮತ್ತು ಮಾಯಮುಡಿ ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.