Crime News

ಹಲ್ಲೆ ಪ್ರಕರಣ

ದಿನಾಂಕ 13/04/2020ರಂದು ಮೂರ್ನಾಡು ಪಟ್ಟಣದ ಗಾಂದಿನಗರದ ಬಳಿ ಎಂ.ಎಂ.ಸುಹೈಲ್ ಎಂಬವರು ವ್ಯಾಪಾರ ಮಾಡುತ್ತಿರುವಾಗ ಪಕ್ಕದ ವ್ಯಾಪಾರಿ ಎಂ.ಎಂ.ಸಾದಿಕ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಚಾಕುವಿನಿಂದ ಸುಹೈಲ್‌ರವರ ಕೈಗೆ ಚುಚ್ಚಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 13/04/2020ರಂದು ಕುಶಾಲನಗರ ಬಳಿಯ ಹಾರಂಗಿ ನಿವಾಸಿ ನಾಗರಾಜು ಎಂಬವರು ಅವರ ಸ್ಕೂಟರಿನಲ್ಲಿ ಕುಶಾಲನಗರದಿಂದ ತರಕಾರಿ ತೆಗೆದುಕೊಂಡು ಮರಳಿ ಮನೆಗೆ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕುಶಾಲನಗರದ ಮಹಮದ್ ತಾಸಿನ್ ಎಂಬವರು ಅವರ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಗರಾಜುರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ನಾಗರಾಜು ಹಾಗೂ ಮಹಮದ್ ತಾಸಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಕಳ್ಳಬಟ್ಟಿ ಮಾರಾಟ

ದಿನಾಂಕ 13/04/2020ರಂದು ಕೊಡ್ಲಿಪೇಟೆ ಬಳಿಯ ದೊಡ್ಡಕುಂದ ಗ್ರಾಮದ ಬಳಿ ನಂದೀಶ ಮತ್ತು ಕೀರ್ತಿ ಎಂಬವರುಗಳು ಅಕ್ರಮವಾಗಿ ಕಳ್ಳ ಬಟ್ಟಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಪ್ರೊ. ಪಿಎಸ್‌ಐ ಮಂಜುನಾಥ್, ಸಿಬ್ಬಂದಿಗಳಾದ ಧನಂಜಯ, ಬಿ.ವೈ.ಡಿಂಪಲ್ ರವರು ಸ್ಥಳಕ್ಕೆ ತೆರಳಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದ ಕೊಡ್ಲಿಪೇಟೆಯ ಹಾಲೇಶ ಎಂಬವರನ್ನು ಬಂಧಿಸಿ ಅವರಿಂದ ಸುಮಾರು ಎರಡು ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 13/04/2020ರಂದು ನಾಪೋಕ್ಲು ಬಳಿಯ ನಾಲಡಿ ಗ್ರಾಮದ ನಿವಾಸಿ ಬಿ.ಪಿ ಅಪ್ಪಣ್ಣ ಎಂಬವರು ತೋಟದಲ್ಲಿ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದು ಆರ್ಥಿಕ ಮುಗ್ಗಟ್ಟಿನಿಂದಾಗಿ ಅಪ್ಪಣ್ಣರವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.