Crime News

ಅಕ್ರಮ ಕಳ್ಳಬಟ್ಟಿ ಪ್ರಕರಣ:  

ದಿನಾಂಕ 14.04.2020 ರಂದು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ  ಸಿಬ್ಬಂದಿಯವರೊಂದಿಗೆ ಕೊಡ್ಲಿಪೇಟೆ ಉಪ ಠಾಣಾ ಸರಹದ್ದಿನ ಊರುಗುತ್ತಿ ಗ್ರಾಮದ  ರಘು ಎಂಬವರ ಮನೆಯ ಹಿಂಭಾಗ ದಾಳಿ ಮಾಡಿದ್ದು, ಸದರಿ ರಘುರವರು ಅಕ್ರಮವಾಗಿ ತಮ್ಮ ಮನೆಯ ಹಿಂಭಾಗದ ಶೇಡ್ ನಲ್ಲಿ ಸೌದೆ ಓಲೆ ಹಾಕಿಕೊಂಡು ಅಲ್ಯೂಮಿನಿಯಂ ಪಾತ್ರೆಗಳಿಂದ ಕಳ್ಳಭಟ್ಟಿ ಸಾರಾಯಿಯನ್ನು ತಯಾರು ಮಾಡುತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ದಸ್ತಗಿರಿ ಮಾಡಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಉಪಯೋಗಿಸಿದ  ಸಲಕರಣೆಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.