Crime News

ವ್ಯಕ್ತಿ ಕಾಣೆ ಪ್ರಕರಣ

ಗೋಣಿಕೊಪ್ಪ ಬಳಿಯ ಮಾಯಮುಡಿ ಗ್ರಾಮದ ಮಡಿಕೆಬೀಡು ನಿವಾಸಿ ಪಣಿ ಎರವರ ಕರ್ಕು ಎಂಬಾತನು ದಿನಾಂಕ 13/04/2020ರಂದು ಗೋಣಿಕೊಪ್ಪ ನಗರಕ್ಕೆ ಹೋದವರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 15/04/2020ರಂದು ವಿರಾಜಪೇಟೆ ನಗರದ ಗಾಂದಿನಗರ ನಿವಾಸಿ ಕೆ.ಎಂ.ಕಾವೇರಮ್ಮ ಎಂಬವರ ಮನೆಗೆ ಮುಂಡ್ಯೋಳಂಡ ಕುಟ್ಟಪ್ಪ, ಬೋಪಯ್ಯ ಮತ್ತು ಯಶೋದ ಎಂಬವರು ಅಕ್ರಮ ಪ್ರವೇಶ ಮಾಡಿ ಮನೆಯ ಬೇಲಿಯನ್ನು ಕಡಿದು ಹಾಕಿದುದನ್ನು ಪ್ರಶ್ನಿಸಿದ ಕಾರಣಕ್ಕೆ ಮೂವರೂ ಸೇರಿಕೊಂಡು ಕಾವೇರಮ್ಮನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ  ದೂರು ನೀಡಿದ್ದು ಅದೇ ರೀತಿ ಮುಂಡ್ಯೋಳಂಡ ಬೋಪಯ್ಯ ಮತ್ತು ಅವರ ಮಗ ಕುಟ್ಟಪ್ಪ ರಸ್ತೆಗೆ ಅಡ್ಡವಾಗಿರುವ ಬೇಲಿಯನ್ನು ಕಡಿಯುತ್ತಿರುವಾಗ ಅಲ್ಲಿಗೆ ಬಂದ ಕೆ.ಎಂ.ಕಾವೇರಮ್ಮನವರು ಬೋಪಯ್ಯರವರನ್ನು ಕುರಿತು ಅಶ್ಲೀಲವಾಗಿ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಲ್ಲದೆ ಕಾವೇರಮ್ಮನವರ ಅಣ್ಣ ಸುಬ್ರಮಣಿರವರು ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ವಿರಾಜಪೇಟೆ ನಗರ ಪೊಲೀಸರು ಎರಡೂ ದೂರುಗಳನ್ನು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 15/04/2020ರಂದು ವಿರಾಜಪೇಟೆಯ ಆರ್ಜಿ ಗ್ರಾಮದ ನಿವಾಸಿ ಜುನೈದ್ ಎಂಬವರು ಅವರ ರಿಕ್ಷಾದಲ್ಲಿ ಮೂರ್ನಾಡು ಬಳಿಯ ಕೊಂಡಂಗೇರಿಯ ಕಿಶೋರ್ ಎಂಬವರ ಅಂಗಡಿಗೆ ಮಸಾಲೆ ವಸ್ತುಗಳನ್ನು ಸರಬರಾಜು ಮಾಡುತ್ತಿರುವಾಗ ಅಲ್ಲಿಗೆ ಕೆಎ-12-ಎಂಎ-4986ರ ಮಾರುತಿ ವ್ಯಾನಿನಲ್ಲಿ ಬಂದ ಇಬ್ಬರು ವಿನಾ ಕಾರಣ ಜುನೈದ್‌‌ರವರನ್ನು ನಿಂದಿಸಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 15/04/2020ರಂದು ಸೋಮವಾರಪೇಟೆಯ ಅಬಕಾರಿ ಉಪ ಅಧೀಕ್ಷಕರಾದ ಶಿವಪ್ಪ ಎಂಬವರು ಆಲೂರು ಸಿದ್ದಾಪುರ ಗ್ರಾಮದ ವೈನ್‌ ಶಾಪ್‌ ಒಂದರಲ್ಲಿ ದಾಸ್ತಾನು ಪರಿಶೀಲಿಸಲು ಕರ್ತವ್ಯದ ಮೇರೆಗೆ ಹೋಗಿದ್ದ ಸಮಯದಲ್ಲಿ ಅಲ್ಲಿಗೆ ಬಂದ ಅಬಲಾರಿ ನಿರೀಕ್ಷಕ ನಟರಾಜ್, ಚಾಲಕ ಮನೋಹರ, ಅಬಕಾರಿ ರಕ್ಷಕ ವೀರೇಶ್‌ ಮತ್ತು ಕಾಂತರಾಜುರವರು ಸೇರಿಕೊಂಡು ಶಿವಪ್ಪರವರ ವಾಹನ ಚಾಲಕ ಭುವನೇಶ್ವರ್ ಮತ್ತು ಶಿವಪ್ಪರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಆಡ್ಡಿ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.