Crime News

ಜೀಪು ಅಪಘಾತ

ಮಡಿಕೇರಿ ತಾಲೋಕು ಪದಕಲ್ಲು ಗ್ರಾಮದ ದಲ್ಲಿವಾಸವಾಗಿರುವ ಉದಯಕುಮಾರ್‍ ಎಂಬವರಿಗೆ ಸೇರಿದ ಮಹೇಂದ್ರ ಜೀಪನ್ನು ಅದರ ಚಾಲಕ ಪಿ.ಆರ್. ಪುಷ್ಟರಾಜ್ ಎಂಬವರು ದಿನಾಂಕ 15-04-2020 ರಂದು ಚಾಲನೆ ಮಾಡಿಕೊಂಡು ಭಾಗಮಂಡಲ ಪಟ್ಟಣದಲ್ಲಿರುವ  ಪೆಟ್ರೋಲ್‍ ಬಂಕ್‍ ಕಡೆಗೆ ಹೋಗುತ್ತಿದ್ದಾಗ ತಾವೂರು ಗ್ರಾಮದ ಹೊಸೂರು ಸತೀಶ್ ರವರ ಬಸ್ಸ್ ಶೆಡ್ಡಿನ ಹತ್ತಿರ ತಲುಪಿದಾಗ ಚಾಲಕ ವಾಹನದ  ನಿಯಂತ್ರಣ  ಕಳೆದುಕೊಂಡ ಪರಿಣಾಮ ರಸ್ತೆಯ ಬಲಬದಿಗೆ ಮಗುಚಿ ಬಿದ್ದು ಜೀಪು ಸಂಪೂರ್ಣ ಜಖಂ ಗೊಂಡಿದ್ದು, ಈ ಸಂಬಂಧ ಉದಯಕುಮಾರ್‍ ರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ವಿರಾಜಪೇಟೆ ತಾಲೋಕು ಕುಟ್ಟಂದಿ ಗ್ರಾಮದ ನಿವಾಸಿ ಕಳ್ಳಿಚಂಡ ಎಸ್‍ ಮಂದಣ್ಣ ಎಂಬವರು ದಿನಾಂಕ 16-4-2020 ರಂದು ತಮ್ಮ ಮನೆಯ ಅಂಗಳದಲ್ಲಿರುವ ತೆಂಗಿನ ಮರದಿಂದ ತೆಂದಿನ ಕಾಯಿಗಳನ್ನು ಕೀಳುವ ಉದ್ದೇಶದಿಂದ  ತೆಂಗಿನ ಮರವೇರಿದ  ಸಂದರ್ಭದಲ್ಲಿ ಸದರಿಯವರು ಆಕಸ್ಮಿಕ ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಈ ಸಂಬಂಧ ಮೃತರ ಸಂಬಂಧಿ ಕಳ್ಳಿಚಂಡ ಎಂ.ಸಂಪತ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಕಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.