Crime News

ರಸ್ತೆ ಅಪಘಾತ

ದಿನಾಂಕ 17/04/2020ರ ಬೆಳಗಿನ ಜಾವ ಕುಶಾಲನಗರ ಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಒಂದು ಗೂಡ್ಸ್ ರಿಕ್ಷಾವನ್ನು ಅದರ ಚಾಲಕ ಮಡಿಕೇರಿಯ ಕುಮಾರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಸವನಹಳ್ಳಿ ನಿವಾಸಿ ಎಂ.ಡಿ.ಪವನ್ ಕುಮಾರ್ ಎಂಬವರು ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣ

ಕೋವಿಡ್ – 19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಕೊಡಗು ಜಿಲ್ಲೆ ಸೇರಿದಂತೆ ದೇಶದಾದ್ಯಂತ ಲಾಕ್‌ಡೌನ್ ವಿಧಿಸಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಸಹಾ ನಿಷೇಧಾಜ್ಞೆ ವಿಧಿಸಿದ್ದು ಈ ಸಂದರ್ಬದಲ್ಲಿ ವಿರಾಜಪೇಟೆಯ ತೆಲುಗರ ಬೀದಿ ನಿವಾಸಿ ಟಿ.ಕೆ.ಶ್ರೀನಿವಾಸ್ ಎಂಬವರು ದಿನಾಂಕ 13/04/2020ರಂದು ಅವರ ಮಗಳು ಗರ್ಭಿಣಿಯಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಬೇಕೆಂದು ಅರ್ಜಿ ಬರೆದು ವೈದ್ಯಕೀಯ ಕಾರಣದ ವಾಹನ ಪಾಸನ್ನು ವಿರಾಜಪೇಟೆ ಉಪ ಅಧೀಕ್ಷಕರಿಂದ ಪಡೆದುಕೊಂಡು ಅದನ್ನು ದಿನಾಂಕ 14/04/2020ರಂದು ಅವರ ಕಾರಿನ ಚಾಲಕ ದರ್ಶನ್ ಎಂಬಾತನಿಗೆ ಕೊಟ್ಟು ಆತನನನ್ಉ ಬೆಂಗಳೂರಿಗೆ ಕಳಿಸಿ ಬೆಂಗಳೂರಿನಲ್ಲಿದ್ದ ಸುಮನ್, ಆಕೆಯ ಪತಿ ವಿಷ್ಣು ಮೌಲೀಸ್ ಸುಮನ್‌ರವರ  ಮಗಳು ಮಿಲನ ಮತ್ತು ಬೆಂಗಳೂರಿನ ಕೆಂಗೇರಿಯಿಂದ ಶ್ರೀಷ್ಮಾ ಎಂಬವರನ್ನು ಕರೆದುಕೊಂಡು ಮರಳಿ ವಿರಾಜಪೇಟೆಗೆ ಬಂದಿದ್ದು ವೈದ್ಯಕೀಯ ಕಾರಣಗಳಿಗೆ ಷರತ್ತುಗಳೊಂದಿಗೆ ನೀಡಲಾಗಿದ್ದ ವಾಹನ ಅನುಮತಿ ಪತ್ರವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.