Crime News

ದಾರಿ ತಡೆದು ಹಲ್ಲೆ, ಕೊಲೆ  ಬೆದರಿಕೆ

ಕುಶಾಲನಗರ  ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ  ಬಾಳುಗೋಡು ಗ್ರಾಮದ ನಿವಾಸಿ ಪವನ್ ಕುಮಾರ್‍ ರವರು ತಮ್ಮ ದನಗಳನ್ನು    ಅದೇ ಗ್ರಾಮದ ನಿವಾಸಿ ಶಾಂತಕುಮಾರ್‍ @ ಸುಜಾ ಎಂಬವರ ಜಾಗಕ್ಕೆ ಮೇಯಲು ಬಿಟ್ಟ ವಿಚಾರದಲ್ಲಿ  ಶಾಂತಕುಮಾರ್‍ರವರು ಪವನ್‍ ಕುಮಾರ್‍ ರವರೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೋಂಸ್ಟೇನಲ್ಲಿ ಅನಧಿಕೃತ ವಾಸ್ತವ್ಯ 6 ಮಂದಿ ವಿರುದ್ಧ ಎಫ್ಐಆರ್

ಕೋವಿಡ್-19 ಸಂಬಂಧ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು  ಸಾರ್ವಜನಿಕರಿಗೆ  ವೈದ್ಯಕೀಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿಲ್ಲ. ಆದರೆ ಈ ಸಂದರ್ಭದಲ್ಲಿ ಬೆಂಗಳೂರಿನಿಂದ ವ್ಯಕ್ತಿಯೊಬ್ಬರು ತಾಯಿಯ ಅನಾರೋಗ್ಯದ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದು ಕೊಡಗು ಜಿಲ್ಲೆಗೆ ಆಗಮಿಸಿ ಹೋಮ್ಸ್ ಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಹಾಗೂ ತುಮಕೂರು ಮೂಲದ ಐವರು ಹಾಗೂ ಹೋಮ್ಸ್ ಸ್ಟೇ ಮಾಲಿಕನ‌ ವಿರುದ್ಧ ಪ್ರಕರಣ ದಾಖಲಾಗಿದೆ.

ದಿನಾಂಕ 16-4-2020 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ  ಹೊದ್ದೂರು ಗ್ರಾಮದಲ್ಲಿರುವ ವಿನೋದ್ ಚಿಣ್ಣಪ್ಪ ಎಂಬವರ ಹೋಂಸ್ಟೇ ನಲ್ಲಿ ಬೆನಕಕುಮಾರ್‍ ಟಿ.ಕೆ. ಮತ್ತು ಸಂದೀಪ್ ಎಂಬವರ ಮುಖಾಂತರ ವಿನಯ್, ಪದ್ಮಶ್ರೀ ಹಾಗು ರಕ್ಷಿತಾ ರವರುಗಳು ತಂಗಿದ್ದು, ಇವರನ್ನು ಬೆಂಗಳೂರಿನಿಂದ ಕರೆಸಲು  ಹೋಂಸ್ಟೇ ಮಾಲಿಕ ವಿನೋದ್ ಚಿಣ್ಣಪ್ಪರವರು ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಬೆಂಗಳೂರಿನಿಂದ  ಜೌಷಧಿಯನ್ನು ತರುವ ಕಾರಣವನ್ನು ನೀಡಿ ವಾಹನ ಪಾಸ್‍ ಪಡೆದು ವಿನಯ್ ಹಾಗು ರಕ್ಷಿತಾರವರೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಬಂದು ವಿನೋದ್‍ ಚಿಣ್ಣಪ್ಪನವರ ಹೋಸ್ಟೇನಲ್ಲಿ ವಾಸ್ತವ್ಯ ಹೂಡಿರುವುದನ್ನು ಪತ್ತೆಹಚ್ಚಿದ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪಿಎಸ್‍ಐ ಚಂದ್ರಶೇಖರ್ ಹಾಗು ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

       ರಾಜ್ಯದ ಇತರೆಡೆಗಳಿಂದ ಬಂದು ಕೊಡಗಿನ ಹೋಮ್ಸ್ ಸ್ಟೇ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದು ಇದಕ್ಕೆ ಅವಕಾಶ ನೀಡುವ ಹೊಟೆಲ್, ರೆಸಾರ್ಟ್, ಹೋಮ್ಸ್ ಸ್ಟೇ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು. ಇಂತಹ ಚಟುವಟಿಕೆಗಳ ಬಗ್ಗೆ ಕೊಡಗು ಪೊಲೀಸ್ ತೀವ್ರ ನಿಗಾವಹಿಸಿದೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್‍, ಐಪಿಎಸ್ ರವರು ಎಚ್ಚರಿಸಿದ್ದಾರೆ.

ರಸ್ತೆ ಅಪಘಾತ, ವಾಹನ ಜಖಂ

ಪಿರಿಯಾಪಟ್ಟಣ ತಾಲೋಕು ರಾವಂದೂರು ಗ್ರಾಮದ ನಿವಾಸಿ ಆರ್. ಯು. ಯಶವಂತ್ ಎಂಬವರು  ತಮ್ಮ ಮಾವರವರಿಗೆ  ಪಾರ್ಶುವಾಯು ಕಾಯಿಲೆ ಚಿಕಿತ್ಸೆಯ ಸಂಬಂಧ ಕಾರವಾರಕ್ಕೆ ಹೋಗಿ ಮಡಿಕೇರಿ ಮಾರ್ಗವಾಗಿ  ಹೆಚ್.ಡಿ ಕೋಟೆಗೆ ಬರುತ್ತಿರುವಾಗ್ಗೆ  ದಿನಾಂಕ 18-04-2020 ರಂದು ಬೆಳಗಿನ ಜಾವ ಸಮಯ ಸುಮಾರು 03.30 ಗಂಟೆಗೆ ಕಾರು ಚಾಲನೆ ಮಾಡುತ್ತಿದ್ದ ಶಿವಪ್ರಸಾದ್ನು ಕಾರನ್ನು ಅತಿವೇಗ & ನಿರ್ಲಕ್ಷತನದಿಂದ ಚಾಲನೆ ಮಾಡಿದ್ದರಿಂದ  ಕಾರು ನಿಯಂತ್ರಣ ತಪ್ಪಿ  ಕುಶಾಲನಗರದ  ಆನೆಕಾಡು ಅರಣ್ಯ ಪ್ರದೇಶದಲ್ಲಿನ ಹಾದುಹೋಗಿರುವ ರಸ್ತೆ  ಬಲಭಾಗದಲ್ಲಿ ನೆಟ್ಟಿದ್ದ ರಸ್ತೆ ತಡೆಕಲ್ಲುಗಳಿಗೆ ಡಿಕ್ಕಿಯಾzÀ ಪರಿಣಾಮ ಕಾರು ಜಖಂ ಗೊಂಡಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

ಪೊನ್ನಂಪೇಟೆ ಠಾಣೆ ಸರಹದ್ದಿನ ಕೊಟ್ಟಗೇರಿ ಗ್ರಾಮದಲ್ಲಿ ದಿನಾಂಕ 18-4-2020 ರಂದು ಲಾರಿಯೊಂದರಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹೆಚ್ಚಿದ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್‍ ಮತ್ತು ಸಿಬ್ಬಂದಿಯವರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.