Crime News

ಮಹಿಳೆ ಮೇಲ್ ದೌರ್ಜನ್ಯ

ಸೋಮವಾರಪೇಟೆ ತಾಲೋಕು ಹಿರಿಕರ ಗ್ರಾಮದ ನಿವಾಸಿಯಾದ ಶ್ರೀಮತಿ ಡಿ.ಪಿ. ಸೂಕ್ತಿ ಎಂಬವರಿಗೆ  ಆಕೆಯ ಗಂಡ ಮೋಹನ್ ಕುಮಾರ್, ಮೈದುನ ಧನಂಜಯ ಮತ್ತು ಅತ್ತೆ ಶ್ರೀಮತಿ ರಾಣಿರವರು ಸೇರಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು ದಿನಾಂಕ 19-4-2020 ರಂದು  ಮೋಹನ್ ಕುಮಾರ್‍ ರವರು ವಿನಾಕಾರಣ ಪತ್ನಿ ಸೂಕ್ತಿಯೊಂದಿಗೆ ಜಗಳ ಮಾಡಿ ದೈಹಿಕ ಹಲ್ಲೆ ನಡೆಸಿದ್ದು ಅಲ್ಲದೆ ಆಕೆಯ ಮೈದುನ ಧನಂಜನ ಮತ್ತು ಅತ್ತೆ ಸೇರಿ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಸಂಬಂಧ ಶ್ರೀಮತಿ ಸೂಕ್ತಿಯವರು ನೀಡಿದ ದೂರಿನ ಮೇರೆಗೆ ಸೋಮಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿ ದುರ್ಮರಣ

ಸೋಮವಾರಪೇಟೆ ತಾಲೋಕು ಕುಂಬೂರು ಗ್ರಾಮದ ನಿವಾಸಿ ಕೆ.ಜೆ. ಲೋಕನಾಥ ಎಂಬವರ ತಂದೆ ಕೆ.ವಿ. ಜತ್ತಪ್ಪ ಎಂಬವರು ದಿನಾಂಕ 2-4-2020 ರಂದು ಬಿಳಿಗೇರಿ ಗ್ರಾಮದ ಅಲ್ಪೋನ್ ಸಿಕ್ವೇರಾ ರವರ ತೋಟದಲ್ಲಿ ಮರ ಹತ್ತಿ ಕೊಂಬೆಗಳನ್ನು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಮರದಿಂದ ಬಿದ್ದು ಸಾವನಪ್ಪಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‍ ಅಪಘಾತ ಇಬ್ಬರಿಗೆ ಗಾಯ

ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕುಟ್ಟ ಪ್ರಾಥಮಿಕ ಶಾಲೆಯ ಹತ್ತಿರ ದಿನಾಂಕ 19-4-2020 ರಂದು ಕುಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾಯವರು ರೋಗಿಯೊಬ್ಬರನ್ನು ಪರೀಕ್ಷಿಸಲು ಕುಟ್ಟ ಠಾಣಾ ಸಿಬ್ಬಂದಿ  ಮೋಹನ್ ಕುಮಾರ್‍ರವರೊಂದಿಗೆ ಸ್ಕೂಟರ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಕೂಟರ್‍ ಅಪಘಾತಕ್ಕೀಡಾಗಿ  ಇಬ್ಬರಿಗೂ ಗಾಯಗಳಾಗಿದ್ದು, ಈ ಸಂಬಂದ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ

ದಿನಾಂಕ 20-4-2020 ರಂದು ಶ್ರೀಮಂಗಲ ಠಾಣಾಧಿಕಾರಿ ವಸಂತ್ ಕುಮಾರ್ ಹಾಗು ಸಿಬ್ಬಂದಿಯವರು ಹೈಸೊಡ್ಲೂರು ಗ್ರಾಮದಲ್ಲಿ ತೀತಿರ ಮಾದಪ್ಪ ಎಂಬವರು ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದುದರ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓಎಲ್‍ಎಕ್ಸ್ ಮೂಲಕ ಹಣ ವಂಚನೆ

ವಿರಾಜಪೇಟೆ ತಾಲೋಕು ಕೆ.ಬಾಡಗ ಗ್ರಾಮದ ನಿವಾಸಿ ಎ.ಎಂ.ಪೊನ್ನಣ್ಣ ಎಂಬವರಿಂದ  ಶ್ರೀಕಾಂತ್ ವರ್ಮಾ ಎಂಬ ಹೆಸರಿನ ವ್ಯಕ್ತಿಯೋರ್ವ ಓಎಲ್‍ಎಕ್ಸ್‍ ಮೂಲಕ ಟಿ.ವಿ.ಯನ್ನು ಕೊಂಡುಕೊಳ್ಳುವುದಾಗಿ ನಂಬಿಸಿ  ಗೂಗಲ್‍ ಪೇ ಮೂಲಕ ಸುಮಾರು 59,000/-ರೂ.ಗಳನ್ನು ಪಡೆದುಕೊಂಡು ವಂಚಿಸಿದ್ದು, ಈ ಸಂಬಂಧ ಕೊಡಗು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.