News

ಹಸಿದ ಹೊಟ್ಟೆಗೆ – ತಣಿವು ಪೆಟ್ಟಿಗೆಗೆ ಹರಿದುಬಂದ ಪಡಿತರ.

ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲಾಡಳಿತ ವತಿಯಿಂದ ತೆರೆದಿರುವ “ಹಸಿದ ಹೊಟ್ಟೆಗೆ – ತಣಿವು ಪೆಟ್ಟಿಗೆ” ಗೆ ಟಾಟಾ ಕಾಫಿ ಲಿಮಿಟೆಡ್ ವತಿಯಿಂದ 1.50 ಲಕ್ಷ ಮೌಲ್ಯದ 2 ಸಾವಿರ ಕೆ ಜಿ ಅಕ್ಕಿ, 1 ಸಾವಿರ ಕೆ ಜಿ ತೊಗರಿ ಬೇಳೆಯನ್ನು ನೀಡಲಾಯಿತು. ಪಡಿತರವನ್ನು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪನ್ನೇಕರ್ ಸ್ವೀಕರಿಸಿದರು. ಈ ಸಂದರ್ಭ ಮಡಿಕೇರಿ ತಹಶಿಲ್ದಾರ್ ಮಹೇಶ್, ಇಓ ಲಕ್ಷ್ಮಿ, ಡಿವೈಎಸ್ಪಿ ದಿನೇಶ್, ಸಿಪಿಐ ಅನೂಪ್ ಮಾದಪ್ಪ, ಟಾಟಾ ಕಾಫಿ ಲಿಮಿಟೆಡ್‌ನ ಸೀನಿಯರ್ ಜನರಲ್ ಮ್ಯಾನೇಜರ್ ಎಂ ಬಿ ಗಣಪತಿ, ಲೀಗಲ್ ಮ್ಯಾಜೇಜರ್ ವಿಜಯ್ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

ಲಾಕ್‌ಡೌನ್ ನಡುವೆ ರಂಜಾನ್ ಆಚರಣೆ – ಸಾಮಾಜಿಕ ಅಂತರ ಕಾಯ್ದುಕೊಳ್ಳಿ. visit https://twitter.com/KodaguSp?s=08

#COVID2019india
#KodaguFightsCorona
#StayHomeStaySafe
#KodaguPolice

ರಂಜಾನ್ ಮಾಸಾಚರಣೆ – ಶಾಂತಿ ಸಭೆ

ರಂಜಾನ್ ಮಾಸಾಚರಣೆ ಹಿನ್ನಲೆ ರಂಜಾನ್ ಶಾಂತಿ ಸಮಿತಿಯ ಸಭೆ ಕೊಡಗು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪನ್ನೇಕರ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಧರ್ಮದ ಮುಖಂಡರು, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಲಾಕ್‌ಡೌನ್ ನಡುವೆ ರಂಜಾನ್ ಆಚರಣೆ ಕುರಿತು ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

Swamy Vivekananda Youth Movement, ಮೈಸೂರು ವತಿಯಿಂದ ಕೊರೋನಾ‌ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ಮಾಸ್ಕ್ ಮತ್ತು PPE ಕಿಟ್ ಗಳನ್ನು ಉಚಿತವಾಗಿ ನೀಡಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ. ಸಮನ್ ಡಿ.ಪಿ, ಐ.ಪಿ.ಎಸ್ ರವರು ಕಿಟ್ ಗಳನ್ನು ಸ್ವೀಕರಿಸಿ ಇಲಾಖೆ ಪರವಾಗಿ ಸಂಸ್ಥೆಯವರಿಗೆ ಧನ್ಯವಾದ ತಿಳಿಸಿರುತ್ತಾರೆ.  

Crime News

ಲಾಕ್ ಡೌನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

            ಕೋವಿಡ್-19 ಸಂಬಂದ ದೇಶಾದ್ಯಂತ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದು ಕೋವಿಡ್ ಸೋಂಕು ಹರಡುವ ಸಂಭವವಿದ್ದರೂ ಸಹಾ ದಿನಾಂಕ: 20-04-2020 ರಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಚಿಕ್ಕತ್ತೂರು ಗ್ರಾಮದ ಸ್ನೇಹಿತರೊಬ್ಬರ ಮನೆಯಲ್ಲಿದ್ದ ತನ್ನ ಮಗನನ್ನು ಕರೆದಕೊಂಡು ಹೋಗಲು ತಮಿಳುನಾಡು ರಾಜ್ಯದ ಹೊಸೂರು ನಿವಾಸಿ ಪ್ರಭಾಕರ್ ಎಂಬುವವರು ಬೆಂಗಳೂರು ನಗರದ ನಿವಾಸಿಗಳಾದ ಆಸೀಫ್ ಪಾಷಾ ಮತ್ತು ಆರೀಫ್ ಉಲ್ಲಾ ಶರೀಫ್ ಎಂಬುವವರೊಂದಿಗೆ ಆಂಬುಲೆನ್ಸ್ ನಲ್ಲಿ ರೋಗಿಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ರೀತಿದಲ್ಲಿ ಯೋಜನೆ ಮಾಡಿಕೊಂಡು ಕುಶಾಲನಗರಕ್ಕೆ ಹೋಗುತ್ತಿದ್ದಾಗ ಕೊಡಗು ಮೈಸೂರು ಗಡಿಯ ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಕುಶಾಲನಗರ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ನೀಡಿದ ವರದಿ ಮೇರೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ:

            ದಿನಾಂಕ: 21-04-2020 ರಂದು ಸೋಮವಾರಪೇಟೆ ತಾಲ್ಲೂಕು 7ನೇ ಹೊಸಕೋಟೆ ಗ್ರಾಮದ ಕೂರ್ಗ್ ಕೌಂಟಿ ರೆಸಾರ್ಟ್ ಬಳಿ ಸುರೇಶ್ ಎಂಬುವವರ ಮನೆಯ  ಹೊರಭಾಗದ ಶೆಡ್ ನಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಜಿಲ್ಲಾ ಅಪರಾಧ ತನಿಖಾ ವಿಭಾದ ಪೊಲೀಸರು ಪತ್ತೆ ಮಾಡಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದ9 ವ್ಯಕ್ತಿಗಳನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಉಪಯೋಗಿಸಿದ ಒಂದು ಲಕ್ಷ ರೂ. ನಗದನ್ನು ಅಮಾನತ್ತುಪಡಿಸಿಕೊಂಡು ನೀಡಿದ ವರದಿ ಮೇರೆ ಸುಂಟಿಕೊಪ್ಪ ಪೊಲೀಸರು ಕಾನೂನು ಕ್ರಮ ಜರುಗಿಸಿರುತ್ತಾರೆ.

ಹಲ್ಲೆ ಪ್ರಕರಣ

ದಿನಾಂಕ: 21-04-2020 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು ಗ್ರಾಮದ ಗಾಂಧಿನಗರ ನಿವಾಸಿಗಳಾದ ಇಬ್ರಾಹಿಂ, ಮಹಮ್ಮದ್, ಅಬ್ದುಲ್ಲಾ ಮತ್ತು ಮಮ್ಮದ್, ಸಾಲಿನ್, ಸೌಕತ್ ಎಂಬುವವರು ಹಳೆ ವೈಷಮ್ಯದಿಂದ ಪರಸ್ಪರ ಹಲ್ಲೆ ಮಾಡಿಕೊಂಡು ಕೊಲೆ ಬೆದರಿಕ ಹಾಕಿರುವ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್, ಪ್ರಕರಣ ದಾಖಲು:

            ದಿನಾಂಕ: 20-04-2020 ರಂದು ಸೋಮವಾರಪೇಟೆ ತಾಲ್ಲೂಕು ಪೊನ್ನತ್ ಮೊಟ್ಟೆ ನಿವಾಸಿ ನಾಸಿರ್ ಎಂಬುವವರು ಅವರ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಭಾರತದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಹಿಳೆಯರ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಪೋಸ್ಟ್ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಕ್ರೈಂ ವಿಭಾಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.