Crime News

ಮರ ಬಿದ್ದು ವ್ಯಕ್ತಿಯ ಸಾವು

ವ್ಯಕ್ತಿಯ ಮೇಲೆ ಮರ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ. ಸಿದ್ದಾಪುರದ ನಿವಾಸಿ ಅಹಮ್ಮದ್ ಕುಟ್ಟಿ ಹಾಜಿ ಎಂಬುವವರು ದಿನಾಂಕ 09-06-2018 ರಂದು ನೆಲ್ಲಿಹುದಿಕೇರಿಯಲ್ಲಿರುವ ತಮ್ಮ ತೋಟಕ್ಕೆ ಹೋಗಿದ್ದಾಗ ಮಳೆಗಾಳಿ ಜಾಸ್ತಿ ಇದ್ದ ಕಾರಣ ತಲೆಯ ಮೇಲೆ ಮರ ಬಿದ್ದು ಗಾಯಗೊಂಡವರು ಮೃತಪಟ್ಟಿದ್ದು ಈ ಬಗ್ಗೆ ಮಗ ಅಶ್ರಫ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 09-06-2018 ರಂದು ಶಶಿಕುಮಾರ್ ಮತ್ತು ಶಿವಕುಮಾರ್ ರವರು ಎಂಬುವವರು ಮಡಿಕೇರಿ ನಗರದ ಮೈತ್ರಿ ಜಂಕ್ಷನ್ ಹತ್ತಿರ ಗಾಳಿಬೀಡು ರಸ್ತೆಯಲ್ಲಿ ನಿಂತಿರುವಾಗ ದೀಪು, ಶಿರಾಜ್ ಮತ್ತು ಕಿರಣ್ ರವರು ಕಾರನ್ನು ಮಾರಾಟ ಮಾಡಿದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಶಶಿಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 09-06-2018 ರಂದು ಕುಶಾಲನಗರ ನಿವಾಸಿ ಸಾಜನ್ ಅಹಮ್ಮದ್ ರವರು ಸ್ನೇಹಿತ ಜಮಾಲ್ ರವರೊಂದಿಗೆ  ಕಾರಿನಲ್ಲಿ ಕುಶಾಲನಗರ ಪಟ್ಟಣದ ಕೋಣ ಮಾರಿಯಮ್ಮ ದೇವಸ್ಥಾನದ ಪಕ್ಕ ಹೋಗುತ್ತಿರುವಾಗ ಎದುರುಗಡೆಯಿಂದ ಜಿತೇಂದ್ರ ಎಂಬುವವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

ದಿನಾಂಕ 29-05-2018 ರಂದು ಕುಶಾಲನಗರ ನಿವಾಸಿ ತಾರಾಬಾಯಿಯವರ ಪತಿ 63 ವರ್ಷ ಪ್ರಾಯದ ಸುಭಾಷ್ ಎಂಬುವವರು ವಿರಾಜಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿರುವ ತಮ್ಮ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಪತ್ನಿ ತಾರಾಬಾಯಿಯವರು ದಿನಾಂಕ 09-06-2018 ರಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.