Crime News

ಲಾಕ್‍ಡೌನ್ ಉಲ್ಲಂಘಿಸಿ ಕಾರ್ಮಿಕರ ಸಾಗಾಟಕ್ಕೆ ಯತ್ನ

ಲಾಕ್‍ಡೌನ್ ಉಲ್ಲಂಘಿಸಿ ಕಂಟೈನರ್‍ ವಾಹನದಲ್ಲಿ ಸುಮಾರು 38 ಜನ ಕಾರ್ಮಿಕರನ್ನು ಸಾಗಾಟ ಮಾಡುತ್ತಿದ್ದ  ವ್ಯಕ್ತಿಗಳ ಮೇಲೆ ಕುಶಾಲನಗರ ಪಟ್ಟಣ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 22-4-2020 ರಂದು 02-00 ಗಂಟೆ ಸಮಯದಲ್ಲಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕುಶಾಲನಗರ ವ್ಯಾಪ್ತಿಯ ಕೊಪ್ಪ ಚೆಕ್‍ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಸಹಿಸುತ್ತಿದ್ದ ಸಮಯದಲ್ಲಿ ಕುಶಾಲನಗರ ಕಡೆಯಿಂದ ಮೈಸೂರು ಕಡೆಗೆ ಕಂಟೈನರ್‍ ಲಾರಿಯೊಂದು ಹೋಗುತ್ತಿದ್ದುದನ್ನು ತಡೆದು ಪರಿಶೀಲಿಸಿದ ಸಂದರ್ಭದಲ್ಲಿ ಸದರಿ ಕಂಟೈನರ್‍ ಲಾರಿಯಲ್ಲಿ  18 ಮಂದಿ ಗಂಡಸರು, 16 ಮಂದಿ ಹೆಂಗಸರು ಮತ್ತು 4 ಮಂದಿ ಮಕ್ಕಳು ಸೇರಿ ಒಟ್ಟು 38  ಜನರನ್ನು ತುಂಬಿಸಿಕೊಂಡು ತಮಿಳುನಾಡಿಗೆ  ಪ್ರಯಾಣಿಸುತ್ತಿದ್ದುದು ಪತ್ತೆಯಾಗಿರುತ್ತದೆ.  ಸದರಿ ಕಾರ್ಮಿಕರನ್ನು ಸೋಮವಾರಪೇಟೆ ತಾಲೋಕಿನ ಎಡವಾರೆ ಗ್ರಾಮದ ತಂಗವಳ್ಳಿ ಎಸ್ಟೇಟ್‍ ನಿಂದ  ಮ್ಯನೇಜರ್‍ ಯು.ಬಿ. ಸುರೇಶರವರ ಅನುಮತಿಯ ಮೇರೆ  ತಮಿಳುನಾಡು  ನೋಂದಣಿಯ ಕಂಟೈನರ್‍ನಲ್ಲಿ ತುಂಬಿಕೊಂಡು ಕುಶಾಲನಗರ-ಮೈಸೂರು ಮಾರ್ಗವಾಗಿ ತಮಿಳುನಾಡಿಗೆ ಹೋಗುತ್ತಿರುವುದು ತಿಳಿದು ಬಂದಿದ್ದು, ಲಾಕ್‍ಡೌನ್‍ ಜಾರಿಯಲ್ಲಿದ್ದ ಸಂದರ್ಭದಲ್ಲಿ  ಲಾಕ್‍ಡೌನ್‍ ನಿಯಮಗಳನ್ನು ಉಲ್ಲಂಘಿಸಿ ಕಾರ್ಮಿಕರನ್ನು ಜಿಲ್ಲೆಯಿಂದ ತಮಿಳುನಾಡಿಗೆ ಸಾಗಿಸುತ್ತಿದ್ದ ಲಾರಿ ಚಾಲಕ ತಮಿಳುನಾಡಿನ ಮೂಲದ ಹುಸೈನ್‍ ಹಾಗು ಲಾರಿ ಕ್ಲೀನರ್‍ ಪಿ.ಬಾಲಚಂದ್ರ ಎಂಬವರ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲು

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗುಡ್ಡೆಹೊಸೂರು-ಬೊಳ್ಳೂರು ಗ್ರಾಮದ ನಿವಾಸಿ ಪ್ರಶಾಂತ್ ಎಂಬವರು ಲಾಕ್‍ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ  ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿಯನ್ನು  ತಮ್ಮ ವಶದಲ್ಲಿ  ಇಟ್ಟುಕೊಂಡು ಮಾಟಾಟ ಮಾಡುತ್ತಿದ್ದನ್ನು ಪತ್ತೆಹಚ್ಚಿದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್‍ ಹಾಗು ಸಿಬ್ಬಂದಿಗಳು ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಜೂಜು ಆರೋಪಿಗಳ ಬಂಧನ

ದಿನಾಂಕ 21-4-2020 ರಂದು  ಶನಿವಾರಸಂತೆ ಠಾಣಾಧಿಕಾರಿ ಕೃಷ್ಣ ನಾಯಕ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ಸಿಬ್ಬಂದಿಗಳೊಂದಿಗೆ  ಶನಿವಾರಸಂತೆ ಠಾಣಾ ವ್ಯಾಪ್ತಿಯ ಶಾಂತ್ವೇರಿ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ 7 ಮಂದಿ ಆರೋಪಿಗಳನ್ನು, ಜೂಜಾಟಕ್ಕೆ ಬಳಸಿದ 7,580/- ರೂ ಹಾಗು 2 ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಗೋಮಾಂಸ ಸಾಗಾಟ:

ದಿನಾಂಕ 22-4-2020 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ ಚೆಕ್‍ ಪೋಸ್ಟ್  ಮೂಲಕ ಹುಣಸೂರಿನಿಂದ ಸಿದ್ದಾಪುರದ ಕಡೆಗೆ ತರಕಾರಿ ಸಾಗಾಟ ಮಾಡುವ ಮಹೀಂದ್ರ ಜಿತೋ ವಾಹನದಲ್ಲಿ ತರಕಾರಿಯ ಜೊತೆಗೆ ಗೋಮಾಂಸವನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಸಿದ್ದಾಪುರ ಪೊಲೀಸರು ಆರೋಪಿ ಕೆ.ಎ. ಮುಸ್ತಫ ಎಂಬವರನ್ನು ವಾಹನ ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೈಬರ್‍ ಪ್ರಕರಣ

ಮಡಿಕೇರಿ ಎಫ್.ಎಂ.ಎಸ್. ಘಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಕೆ. ರಾಜೇಶ್ ಎಂಬವರ ಮಡಿಕೇರಿ ಶಾಖೆಯ ಎಸ್.ಬಿ. ಖಾತೆಯಿಂದ ಅವರಿಗೆ ಅರಿವಾಗದಂತೆ 10,000/- ರೂ. ಡ್ರಾ ಮಾಡಿರುವ ಘಟನೆ ನಡೆದಿದ್ದು ಈ ಸಂಬಂಧ ಕೊಡಗು ಜಿಲ್ಲಾ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊಲೆಗೆ ಯತ್ನ ಪ್ರಕರಣ ದಾಖಲು

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಮೇರಿ ಗ್ರಾಮದಲ್ಲಿ ವಾಸವಾಗಿರುವ ನಾಯಕಂಡ ಜ್ಯೋತಿ ಎಂಬವರು ದಿನಾಂಕ 22-4-2020 ರಂದು ತಮ್ಮ ವಾಸದ ಮನೆಯ ಬಾತ್ ರೂಮಿನ ನೀರು ಚೆರಂಡಿ ಮೂಲಕ ಪಕ್ಕದ ಮನೆಯ ನಿವಾಸಿ ನಾಯಕಂಡ ಸುರೇಶ್ ರವರ ತೋಟದ ಕಡೆಗೆ ಹೋಗುತ್ತಿದ್ದುದನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ನಾಯಕಂಡ ಸುರೇಶ್‍ರವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು ಕೈಗೆ ಗಾಯಪಡಿಸಿ  ಕೊಲೆಗೆ ಯತ್ನಿಸಿದ್ದು ಅಲ್ಲದೆ  ತನ್ನ ಜ್ಯೋತಿ ರವರ ಗಂಡನ ಮೇಲೂ ಹಲ್ಲೆಗೆ ಯತ್ನಸಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

ವಿರಾಜಪೇಟೆ ನಗರ ಠಾಣಾ ಸರಹದ್ದಿನ ರಾಮನಗರದಲ್ಲಿ ವಾಸವಾಗಿರುವ ಆನಂದ ರಾವ್ ಎಂಬವರ ತೋಟದಲ್ಲಿ ದಿನಾಂಕ 222-4-2020 ರಂದು ಒಣಗಿದ ಮರವನ್ನು ಸೌದೆಗಾಗಿ ಕಡಿಯುತ್ತಿದ್ದಾಗ ಮರದ ಕೊಂಬೆ ಪಿ.ಎಂ. ಶಂಕರ ಎಂಬವರ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಸದರಿ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನಪ್ಪಿದ್ದು, ಈ ಸಂಬಂದ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.