Crime News

ಜೂಜು ಅಡ್ಡೆಮೇಲೆ ದಾಳಿ, 6 ಜನರ ಬಂಧನ:

ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿದ್ದಾರೆ.  ಖಚಿತ ವರ್ತಮಾನ ಆದಾರದ ಮೇರೆ ಕುಶಾಲನಗರ ವೃತ್ತ ನಿರೀಕಕರಾದ ಎಂ.ಮಹೇಶ್‍ ಹಾಗು ಸಿಬ್ಬಂದಿ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಸುಂದರನಗರ ಗ್ರಾಮದಲ್ಲಿರುವ ಅಗ್ನಿಶಾಮಕ ಠಾಣೆಯ ಹಿಂಭಾಗದ ಕಾಫೀಗೋಡೌನ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಮೇಲೆ ದಾಳಿ ಮಾಡಿ 6 ಜನರನ್ನು ಬಂಧಿಸಿ ಅವರಿಂದ ರೂ.12,830/- ರೂ. ಗಳನ್ನು ಹಾಗು ಜೂಟಾಟಕ್ಕೆ ಬಳಸಿದ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.

ಸ್ಕೂಟಿಗೆ ಲಾರಿ ಡಿಕ್ಕಿ:

ದಿನಾಂಕ 27-04-2020 ರಂದು ಸುಮಾರು  08.30 ಎಎಂ ವೇಳೆಗೆ ಕುಶಾಲನಗರ ಪಟ್ಟಣದ ಹಾಲಿನ ಡೈರಿ ಮುಂಭಾಗ  ರಸ್ತೆಯಲ್ಲಿ ಕುಶಾಲನಗರದ ಬೈಚನಳ್ಳಿ ನಿವಾಸಿ ಶ್ರೀಮತಿ ಶೋಭನ ಎಂಬವರು ತಮ್ಮ ಬಾಪ್ತು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ  ಹಿಂದಿನಿಂದ  ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ  ಅತಿವೇಗ & ಅಜಾಗರುಕತೆಯಿಂದ  ಚಾಲನೆ ಮಾಡಿ ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ  ಶ್ರೀಮತಿ ಶೋಭನರವರು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿ- ಬೈಕ್ ನಡುವೆ ಅಪಘಾತ:

ದಿನಾಂಕ 27-4-2020 ರಂದು ಕುಶಾಲನಗರ, ಬಸವನಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟಿ ಹಾಗು ಮೋಟಾರ್‍ ಸೈಕಲ್‍ ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟಿ ಹಾಗು ಬೈಕ್‍ ಸವಾರಿರಿಬ್ಬರೂ ಗಾಯಗೊಂಡು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.