Crime News

ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ ವಂಚನೆ:

            ದಿನಾಂಕ: 25-04-2020 ರಂದು ಮಡಿಕೇರಿ ತಾಲ್ಲೂಕು ಕುಂಬಳದಾಳು ಗ್ರಾಮದ ತೀರ್ಥಕುಮಾರ ಎಂಬುವವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡಿ ಸಿಂಡಿಕೇಟ್ ಬ್ಯಾಂಕ್ ಮೇನೇಜರ್ ಎಂದು ಪರಿಚಯ ಮಾಡಿಕೊಂಡು ಬ್ಯಾಂಕ್ ಎಟಿಎಂ ಕಾರ್ಡ್ ರಿನೀವಲ್ ಮಾಡವುದಾಗಿ ಹೇಳಿ ಎಟಿಎಂ ಕಾರ್ಡ್ ವಿವರ ಮತ್ತು ಒಟಿಪಿ ಸಂಖ್ಯೆಯನ್ನು ಪಡೆದು ಬ್ಯಾಂಖ್ ಉಳಿತಾಯ ಖಾತೆಯಿಂದ 52,167 ರೂ ಹಣವನ್ನು ತೆಗೆದು ವಂನೆ ಮಾಡಿದ್ದು ಈ ಬಗ್ಗೆ ದಿನಾಂಕ; 28-04-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 28-04-2020 ರಂದು ಸೋಮವಾರಪೇಟೆ ತಾಲ್ಲೂಕು ಗಣಗೂರು ಗ್ರಾಮದ ನಿವಾಸಿ ಅಭಿಲಾಷ್ ಎಂಬುವವರಿಗೆ ಅವರ ಸಹೋದರ ಮಣಿಕಂಠ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

                ದಿನಾಂಕ: 28-04-2020 ರಂದು ಸೋಮವಾರಪೇಟೆ ತಾಲ್ಲೂಕು ಹಳೆಕೋಟೆ ನಿವಾಸಿ ಹೆಚ್.ಎಸ್ ದಿನೇಶ್ ಎಂಬುವವರು ಯಾವುದೋ ವಿಚಾರದಲ್ಲಿ ಬೇಸರ ಮಾಡಿಕೊಂಡು ಇದ್ದವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದ ಕಾರಣ ತಿಳದುಕೊಳ್ಳುವ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.