Crime News

ಮೋಟಾರ್‍ ಸೈಕಲಿಗೆ ಪಿಕ್‍ಅಪ್ ವಾಹನ ಡಿಕ್ಕಿ

ಕುಟ್ಟ ಠಾಣಾ ಸರಹದ್ದಿನ ನಾಣಚಿ ಗ್ರಾಮದ ನಿವಾಸಿ ಪಣಿಎರವರ ಅಯ್ಯಪ್ಪ ಎಂಬವರು ದಿನಾಂಕ 29-4-2020 ರಂದು ಮನು ಎಂಬವರ ಮೋಟಾರ್‍ ಸೈಕಲಿನಲ್ಲಿ ಗೋಣಿಕೊಪ್ಪದಿಂದ  ನಾಣಚಿ ಗ್ರಾಮಕ್ಕೆ ಹೋಗುತ್ತಿದ್ದಾಗ ಚೂರಿಕಾಡು ಎಂಬಲ್ಲಿ ಎದುರುಗಡೆಯಿಂದ ಬಂದ ಪಿಕ್‍ಅಪ್‍ ವಾಹನ ಡಿಕ್ಕಿಯಾಗಿ ಮೋಟಾರ್‍ ಸೈಕಲಿನಲ್ಲಿ ಹೋಗುತ್ತಿದ್ದ ಅಯ್ಯಪ್ಪ ಹಾಗು ಮನುರವರು ಗಾಯಗೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾರೋಗ್ಯದ ಕಾರಣ ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ ತಾಲೋಕು ಐಗೂರು ಗ್ರಾಮದ  ಕೆ.ವಿ. ಸುರೇಶ ಎಂಬವರ ತಮ್ಮ ಕೆ.ವಿ. ಸುನಿಲ್‍ ಎಂಬವರು ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಮನನೊಂದು ಕೆ.ವಿ.ಸುನಿಲ್ ರವರು ದಿನಾಂಕ 28-04-2020 ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.