Crime News

ಅಕ್ರಮ ಜೂಜಾಟ, ಬಂಧನ

ದಿನಾಂಕ 30/04/2020ರಂದು ಸಿದ್ದಾಪುರ ಠಾಣಾ ವ್ಯಾಫ್ತಿಯ ಕಳತ್ಮಾಡು ಗ್ರಾಮದ ಗೊಟ್ಟಡ ಕಾಲೋನಿಯ ಬಳಿ ಹಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸಿದ್ದಾಪುರ ಪಿಎಸ್‌ಐ ಮೋಹನ್‌ ರಾಜುರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಸ್ಪೀಟೆಲೆಗಳ ಮೂಲಕ ಜೂಜಾಡುತ್ತಿದ್ದ ಕಳತ್ಮಾಡು ಗ್ರಾಮದ ವಿ.ಟಿ.ಗಣೇಶ, ಬಿ.ಜಿ.ವಿವೇಕ್, ಅಶೋಕ ಮತ್ತು ಕೆ.ಸಿ.ರಾಜ ಎಂಬವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ರೂ.4270/- ಹಣವನ್ನು ವಶಪಡಿಸಿಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ

ದಿನಾಂಕ 30/04/2020ರಂದು ಶನಿವಾರಸಂತೆ ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಬಳಿ ಅಭಿಷೇಕ್ ಮತ್ತು ಆಸಿಫ್ ಎಂಬವರು ಕೆಎ-35-ಎ-6246ರ ಲಾರಿಯಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದುದನ್ನು ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡರವರು ಪತ್ತೆ ಹಚ್ಚಿ ಆರೋಪಿಗಳು ಮತ್ತು ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.