Crime News

ವ್ಯಕ್ತಿಯ ಸಾವು, ಪ್ರಕರಣ ದಾಖಲು

ಗೋಣಿಕೊಪ್ಪ ಠಾಣಾ ಸರಹದ್ದಿನ ತಿತಿಮತಿ ಗ್ರಾಮದ ಬಿಸಿಕೆ ಎಸ್ಟೇಟ್‍ ನಲ್ಲಿ ವಾಸವಾಗಿದ್ದ 45 ವರ್ಷದ ಕೂಲಿ ಕಾರ್ಮಿಕ ಮಾರ ಎಂಬವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ದಿನಾಂಕ 30-4-2020 ರಂದು ರಾತ್ರಿ  ತಾನು ಮಲಗುವ ಕೋಣೆಯಲ್ಲಿ ಟೈಲ್ಸ್ ಹಾಕಿದ ನೆಲದ ಮೇಲೆ ಬಿದ್ದು ಗಾಯಗೊಂಡು ಮೃತಟ್ಟಿದ್ದು, ಮೃತರ ಮಗಳು ವೈ.ಎಂ.ಕವಿತ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆಮ್ಲ ಸೇವಿಸಿ ವ್ಯಕ್ತಿ ಸಾವು

ಮಡಿಕೇರಿ ತಾಲೋಕು ಸಂಪಾಜೆ ಗ್ರಾಮದ ನಿವಾಸಿ ಹರಿಪ್ರಸಾದ್ ಎಂಬವರ ತಂದೆ ಎಲ್ಯಣ್ಣ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 1-5-2020 ರಂದು ರಬ್ಬರ್ ಕೃಷಿಗೆ ಇಟ್ಟಿದ್ದ ಆಮ್ಲವನ್ನು ಸೇವಿಸಿ ಅಸ್ವಸ್ಥಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಸದರಿ ಎಲ್ಯಣ್ಣರವರು ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು

ದಿನಾಂಕ 1-5-2020 ರಂದು ಮಡಿಕೇರಿ ತಾಲೋಕು ಪಾಲೂರು ಉಪ ಕೇಂದ್ರದ ಆಶಾ ಕಾರ್ಯಕರ್ತೆ ಹೆಚ್‍.ಆರ್‍. ಲತಾ ರವರು ಆರೋಗ್ಯಸಹಾಯಕರ ಜೊತೆ ಗ್ರಾಮದಲ್ಲಿ ವಾಸಿಸುತ್ತಿರುವ ಕುಟುಂಬಗಳ ಬಗ್ಗೆ ಮಾಹಿತಿ ಪಡೆಯುವ ಕರ್ತವ್ಯಕ್ಕೆ ಸದರಿ ಗ್ರಾಮದ ಬೋಪಯ್ಯ ಎಂಬವರ ಮನೆಗೆ  ಹೋಗಿದ್ದಾಗ ಸದರಿ ಬೋಪಯ್ಯನವರು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯಶಬ್ದಗಳಿಂದ ಬೈದಿರುವ ಬಗ್ಗೆ ಹೆಚ್.ಆರ್.ಲತಾರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಇಬ್ಬರು ವ್ಯಕ್ತಿಗಳ ದುರ್ಮರಣ

ದಿನಾಂಕ 1-5-2020 ರಂದು ಕೊಡ್ಲಿಪೇಟೆ  ಹೋಬಳಿಯ ಕಟ್ಟೆಪುರ ಗ್ರಾಮದ ರತನ್, ಲೋಕೇಶ ಮತ್ತು ಲತೇಶ್ ರವರುಗಳು  ಹೇಮಾವತಿ ಹಿನ್ನೀರಿನಲ್ಲಿ ಈಜಲು ಹೋಗಿ ಹಿನ್ನೀರಿನಲ್ಲಿ ಈಜುತ್ತಿರುವ ಸಂದರ್ಭದಲ್ಲಿ ಲೋಕೇಶ್ ಹಾಗು ಲತೇಶ್‍ರವರುಗಳು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲಾರಿಗೆ ಬೈಕ್‍ ಡಿಕ್ಕಿ

ದಿನಾಂಕ 01-05-2020 ರಂದು ಹೊಸಕೋಟೆ ಗ್ರಾಮದ ಲೂಯಿಸ್ ಎಸ್. ಎಂಬವರು ಟಿಪ್ಪರ್ ಲಾರಿಯಲ್ಲಿ ಜೆಲ್ಲಿಯನ್ನು ತುಂಬಿಸಿಕೊಂಡು ಕೆದಕಲ್ ಗ್ರಾಮದ ಭದ್ರಕಾಳಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕೂಡಿಗೆ ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ಜಂಕ್ಷನ್‍ ನಲ್ಲಿ ಲಾರಿಯ ಹಿಂದಿನಿಂದ ಆಶಿಕ್ ಮಿಶ್ರಾ ಎಂಬವರು ನೋಂದಣಿಯಾಗದ ಹೊಸ ಮೋಟಾರ್‍ಸೈಕಲಿನಲ್ಲಿ ಬಂದು ಲಾರಿಗೆ ಡಿಕ್ಕಿಪಡಿಸಿ ಗಾಯಗೊಂಡಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.