Crime News

ಹಲ್ಲೆ ಪ್ರಕರಣ         

            ದಿನಾಂಕ: 06-05-2020 ರಂದು ವಿರಾಜಪೇಟೆ ಪಟ್ಟಣದ ಹರಿಕೇರಿ ಸುಣ್ಣದ ಬೀದಿ ನಿವಾಸಿ ರಾಜ ಎಂಬುವವರ ಮೊಮ್ಮಗನಿಗೆ ಅದೇ ಗ್ರಾಮದ ನಿವಾಸಿ ಈಶಾನ್ ಎಂಬುವವರು ವಿನಾಕಾರಣ ಹೊಡೆಯುತ್ತಿದ್ದುದನ್ನು ಕೇಳಿದಾಗ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ರಾಜರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ            

ದಿನಾಂಕ: 04-05-2020 ರಂದು ವಿರಾಜಪೇಟೆ ಗ್ರಾಮದ ಈಚೂರು ಗ್ರಾಮದ ನಿವಾಸಿ ಅಬ್ದುಲ್ಲಾ ಎಂಬುವವರೊಂದಿಗೆ ತೋಟದ ಕೆಲಸ ಮಾಡಿಕೊಂಡು ಜೊತೆಯಲ್ಲಿ ವಾಸವಿದ್ದ ಕೇರಳ ರಾಜ್ಯದ ಕೊಲ್ಲಂ ನಿವಾಸಿ ಬಿನು ಎಂಬುವವರು ಅಬ್ದುಲ್ಲಾ ರವರ 8500 ರೂ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.