Crime News

ವಂಚನೆ ಪ್ರಕರಣ

              ಚೇರಂಬಾಣೆ ಬಳಿಯ ಬೇಂಗೂರು ನಿವಾಸಿ ಕೆ.ಪಿ.ಬಾಪೂಜಿ ಎಂಬವರಿಗೆ ಅವರ ಜಾಗದ ದಾಖಲಾತಿಗಳನ್ನು ಮಾಡಿಕೊಡುವುದಾಗಿ ಬೇಂಗೂರಿನ ನಿವಾಸಿ  ಕಂದಾಯ ಇಲಾಖೆಯ ತಾತ್ಕಾಲಿಕ ನೌಕರ ಹೆಚ್‌.ಕೆ.ಗಣೇಶ ಎಂಬಾತನು ನಂಬಿಸಿ ಹಣ ಪಡೆದುಕೊಂಡು ಬಾಪೂಜಿರವರಿಗೆ ಮೋಸಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ

             ದಿನಾಂಕ 09/06/2018ರಂದು ಮಡಿಕೇರಿ ನಗರದ ಕುಂದುರುಮೊಟ್ಟೆ ದೇವಾಲಯದ ನಿವಾಸಿ ಚಾಮಿ ಎಂಬವರು ಸುಳ್ಯದಿಂದ ಬರುತ್ತಿರುವಾಗ ಮಡಿಕೇರಿ ನಗರದ ನಿವಾಸಿ ಪವನ್ ಎಂಬಾತನು ಚಾಮಿಯವರನ್ನು ಓಂಕಾರೇಶ್ವರ ದೇವಸ್ಥಾನದ ಬಳಿ ಬರುವಂತೆ ತಿಳಿಸಿ ಅಲ್ಲಿಗೆ ಹೋದ ಚಾಮಿಯವರಿಗೆ ರವಿ ಎಂಬವರಿಂದ ಹಣ ಪಡೆದಿರುವ ಬಗ್ಗೆ ಜಗಳವಾಡಿ ಇಬ್ಬರೂ ಸೇರಿ ಚಾಮಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಅಸ್ವಾಭಾವಿಕ ಸಾವು

                  ಮಡಿಕೇರಿ ನಗರದ ಬ್ರಾಹ್ಮಣರ ಬೀದಿಯ ಬಳಿಯ ಪಾಳು ಮನೆಯೊಂದರ ಮುಂಭಾಗದ ಕೋಣೆಯಲ್ಲಿ ನಗರದ ಪುಟಾಣಿ ನಗರ ನಿವಾಸಿ ಧರ್ಮರಾಜು ಎಂಬವರು ಅಸ್ವಾಭಾವಿಕವಾಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕೊಲೆ ಬೆದರಿಕೆ ಪ್ರಕರಣ

                  ದಿನಾಂಕ 08/06/2018ರಂದು ಮಾದಾಪುರ ಬಳಿಯ ಇಗ್ಗೋಡ್ಲು ನಿವಾಸಿ ಪೂವಯ್ಯ ಎಂಬವರ ತೋಟಕ್ಕೆ ಅವರ ಅಣ್ಣ ರಾಮಪ್ಪನವರು ಅಕ್ರಮವಾಗಿ ಪ್ರವೇಶಿಸಿ ಸಿಮೆಂಟ್ ಕಂಬ ಮತ್ತು ತಂತಿ ಬೇಲಿಯನ್ನು ತುಂಡರಿಸಿ ನಷ್ಟಪಡಿಸಿದ ಬಗ್ಗೆ ದಿನಾಂಕ 09/06/2018ರಂದು ಪೂವಯ್ಯನವರು ರಾಮಪ್ಪನವರನ್ನು ಕೇಳಿದಾಗ ರಾಮಪ್ಪನವರು ಪೂವಯ್ಯನವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

                    ದಿನಾಂಕ 09/06/2018ರಂದು ಸಂಜೆ ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ನಿವಾಸಿ ಸಿ.ಎಂ.ಮುಸ್ತಫಾ ಎಂಬವರು ಸಂಜೆ ವೇಳೆ ಅವರ ಅಕ್ಕನ ಮನೆಗೆ ಕುಟುಂಬ ಸಮೇತ ಹೋಗಿ ಮಾರನೆ ದಿನ 10/06/2018ರಂದು ಮುಸ್ತಫಾರವರು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಅವರ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ನಗದು ರೂ.22,000/- ಸೇರಿದಂತೆ ಒಟ್ಟು ರೂ.65,000/- ಬೆಲೆಯ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಡಿಕ್ಕಿ; ಹಸುಗಳ ಸಾವು

                 ದಿನಾಂಕ 10/06/2018ರಂದು ತಿತಿಮತಿ ಬಳಿಯ ಮಜ್ಜಿಗೆ ಹಳ್ಳ ಫಾರಂ ನಿವಾಸಿ ಮಹೇಶ್‌ ಎಂಬವರ ಜಾನುವಾರುಗಳನ್ನು ಜೋಗಿ ಎಂಬವರು ಆನೆಚೌಕೂರು ಗೇಟಿಗೆ ಹೋಗುವ ರಸ್ತೆಯಲ್ಲಿ ಮೇಯಿಸಿಕೊಂಡಿರುವಾಗ ತಿತಿಮತಿ ಕಡೆಯಿಂದ ಕೆಎ-12-ಜೆಡ್-4184ರ ಕಾರನ್ನು ಅದರ ಚಾಲಕ ಗ್ಲೇನ್ ಸೋಮಣ್ಣ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಾನುವಾರುಗಳಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡು ಹಸುಗಳು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.