Crime News

ಕೊಲೆ ಪ್ರಕರಣ

            ವಿರಾಜಪೇಟೆ ತಾಲ್ಲೂಕು ಗುಹ್ಯ ಗ್ರಾಮದ ಲಾಲು ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯದ ಕಾರ್ಟಿಕುಳಂ ನಿವಾಸಿಗಳಾದ ರವಿ ಮತ್ತು ಚಂದ್ರ ಎಂಬುವವರು ಮಹಮ್ಮದ್ ಎಂಬುವವರು ಲೀಸ್ ಗೆ ಜಮೀನು ಪಡೆದು ನಡೆಸುತ್ತಿದ್ದ ಶುಂಠಿ ಕೃಷಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ: 07-05-2020 ರಂದು ರವಿ ಮತ್ತು ಚಂದ್ರ ರವರು ಕೆಲಸ ಮಾಡಲು ಬರದೇ ಇದ್ದುದರಿಂದ ಮಹಮ್ಮದ್ ರವರು ಲೈನ್ ಮನೆಯ ಬಳಿ ಹೋಗಿ ನೋಡಿದಾಗ ಮನೆಯ ಒಳಗೆ ರಕ್ತದ ಕಲೆಗಳು ಕಂಡುಬಂದಿರುತ್ತದೆ. ನಂತರ ಸಮೀಪದ ಕಾಲುವೆಯಲ್ಲಿ ಚಂದ್ರ ಎಂಬುವವರು ಮೃತ ದೇಹ ಬಿದ್ದಿದ್ದು ದೇಹದ ಕುತ್ತಿಗೆಯಲ್ಲಿ ಗಾಯವಿರುವುದು ಕಂಡುಬಂದಿದ್ದು, ರವಿ ಮತ್ತು ಚಂದ್ರ ರವರು ಆಗಿದ್ದಾಂಗ್ಗೆ ಹಣದ ವಿಚಾರದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದು ಇದೇ ವಿಚಾರದಲ್ಲಿ ಚಂದ್ರರವರನ್ನು ರವಿ ಕತ್ತಿಯಿಂದ ಕಡಿದು ಕೊಲೆ ಮಾಡಿ ಮೃತ ದೇಹವನ್ನು ಕಾಲುವೆಗೆ ತೆಗೆದುಕೊಂಡು ಹೋಗಿ ಹಾಕಿದ್ದು ಈ ಬಗ್ಗೆ ಮಹಮ್ಮದ್ ರವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 07-05-2020 ರಂದು ಸಿದ್ದಾಪುರ ಠಾಣಾ ಪಿ.ಎಸ್.ಐ ಮೋಹನ್ ರಾಜ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆ ಸಿಬ್ಬಂದಿಯವರೊಂದಿಗೆ ತೆರಳಿ ನೆಲ್ಯಹುದಿಕೇರಿ ಗ್ರಾಮದ ಭರಡಿ ಕಾಲೋನಿ ನಿವಾಸಿ ನಾರಾಯಣ ಎಂಬುವವರು ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಕಳ್ಳಭಟ್ಟಿ ಮದ್ಯ ತಯಾರಿಸುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ  ಪ್ರಕರಣ:

            ದಿನಾಂಕ: 04-05-2020 ರಂದು ಮಡಿಕೇರಿ ತಾಲ್ಲೂಕು ಗಾಳಿಬೀಡು ಗ್ರಾಮದ ನಿವಾಸಿ ರಾಜೇಶ್ ಎಂಬುವವರು ಅವರ ಮನೆಯಿಂದ ಮಡಿಕೇರಿ ಕಡೆಗೆ ಹೋದವರು ವಾಪಾಸ್ಸು ಮನೆಗೆ ಬರದೇ ಕಾಣೆಯಾಗಿದ್ದು ಈ ಬಗ್ಗೆ ಜನಾರ್ಧನ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 06-05-2020 ರಂದು ಸಂಜೆ ಮಡಿಕೇರಿ ನಗರದ ಕಾನ್ವೆಂಟ್ ರಸ್ತೆಯಲ್ಲಿ ಮೆಕ್ಯಾನಿಕ್ ಶಾಪ್ ಇಟ್ಟುಕೊಂಡಿರುವ ರಮೇಶ್ ಎಂಬುವವರಿಗೆ ಮಡಿಕೇರಿ ನಿವಾಸಿಗಳಾದ ಭರತ್ ಮತ್ತು ಗುರು ಎಂಬುವವರು ಬೈಕ್ ರಿಪೇರಿ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ರಮೇಶ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ; 04-05-2020 ರಂದು ಸೋಮವಾರಪೇಟೆ ತಾಲ್ಲೂಕು7 ನೇ ಹೊಸಕೋಟೆ ಗ್ರಾಮದ ತೊಂಡೂರು ರಸ್ತೆಯಲ್ಲಿ ಕೆಎ-12-ಜೆ-6780 ರ ಬೈಕನ್ನು ಅದರ ಸವಾರ ಕಬೀರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎ-7007 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಸುಧೀರ್ ಎಂಬುವವರು ಗಾಯಗೊಂಡಿದ್ದು ಬೈಕನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ಮಹೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಡಿಕ್ಕಿ, ಪಾದಚಾರಿಗೆ ಗಾಯ:

            ದಿನಾಂಕ: 06-05-2020 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಕೊಪ್ಪ ಗೇಟ್ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-02-ಎಂಇ-5106 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜು ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ಮಗ ಭಾಸ್ಕರ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಡಿಕ್ಕಿ, ಪಾದಚಾರಿಗೆ ಗಾಯ.

            ದಿನಾಂಕ: 07-05-2020 ರಂದು ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-19-ಇಎ-4888 ರ ಸ್ಕೂಟರನ್ನು ಅದರ ಸವಾರ ಮೊಹಮ್ಮದ್ ಶಾಹಿರ್ ಖಾನ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೀತಾರಾಮು ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

            ದಿನಾಂಕ: 06-05-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದ ದಿನೇಶ್ ಎಂಬುವವರ ಮನೆಯ ಅಂಗಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಪ್ರಕರಣ ವನ್ನು ಕುಟ್ಟ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ  ಪತ್ತೆ ಮಾಡಿ ಜೂಜಾಟ ಕ್ಕೆ ಬಳಸಿದ್ದ 39,630 ರೂ ನಗದು ಹಣ , ಮೊಬೈಲ್ ಮತ್ತು ವಾಹನಗಳನ್ನು ವಶಕ್ಕೆ ಪಡೆದು ದಿನೇಶ್ ಪೂವಯ್ಯ, ರವಿ, ಬಾಲಕೃಷ್ಣ, ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.