Crime News

ಕೊಲೆ ಪ್ರಕರಣ

            ವಿರಾಜಪೇಟೆ ತಾಲ್ಲೂಕು ಬಿ.ಶೆಟ್ಟಿಗೇರಿ ಗ್ರಾಮದ ಕಾಳೇಂಗಡ ಪ್ರಭು ಅಚ್ಚಯ್ಯ ಎಂಬುವವರ ಕಾಫಿ ತೋಟದಲ್ಲಿ ರಾಜು ಎಂಬುವವರು ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ದಿನಾಂಕ: 08-05-2020 ರಂದು ಪ್ರತಿದಿನ ತೋಟಕ್ಕೆ ಕೆಲಸದ ಆಳುಗಳನ್ನು ಕರೆದುಕೊಂಡು ಹೋಗುವ ನಾಗೇಶ್ ಎಂಬುವರು ರಾಜು ರವರನ್ನು ಕರೆದುಕೊಂಡು ಹೋಗಲು ಲೈನ್ ಮನೆಯ ಬಳಿ ಹೋಗಿ ನೋಡಿದಾಗ ರಾಜು ಕಾಣದೇ ಇದ್ದು ಮನೆಯ ಅಂಗಳದಲ್ಲಿ ರಕ್ತದ ಕಲೆಗಳು ಕಂಡುಬಂದಿರುತ್ತದೆ. ನಂತರ ಸಮೀಪದ ಕರೆಯ ಬಳಿ ರಾಜು ರವರ ಮೃತ ದೇಹ ಬಿದ್ದಿದ್ದು ದೇಹದ ಕುತ್ತಿಗೆಯ ಭಾಗಕ್ಕೆ  ಯಾರೋ ಕತ್ತಿಯಿಂದ ಕಡಿದು ಕೊಲೆ ಮಾಡಿ ಮೃತ ದೇಹವನ್ನು ಕೆರೆಯ ಬಳಿಗೆ ತೆಗೆದುಕೊಂಡು ಹೋಗಿ ಹಾಕಿದ್ದು ಈ ಬಗ್ಗೆ ಪ್ರಭು ಅಚ್ಚಯ್ಯ ರವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 04-05-2020 ರಂದು ಮಡಿಕೇರಿ ತಾಲ್ಲೂಕು ಅಯ್ಯಂಗೇರಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-14-ಜೆ-3284 ರ ಬೈಕನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-01-ಎಂಸಿ-5418 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಅರುಣ ಮತ್ತು ಹಿಂಬದಿ ಕುಳಿತಿದ್ದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕಾರಿನ ಚಾಲಕ ಅಬ್ದುಲ್ ಉರೈಸ್ ಎಂಬುವವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.