Crime News

ಕೊಲೆ ಪ್ರಕರಣ, ಆರೋಪಿಗಳ ಬಂಧನ

ದಿನಾಂಕ 08/05/2020ರಂದು ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಜೇನು ಕುರುಬರ ರಾಜ ಯಾನೆ ದೇವು ಎಂಬವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಗಳಲ್ಲೇ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

     ದಿನಾಂಕ 08/05/2020 ರಂದು ಕಾಳೇಂಗಡ ಪ್ರಭು ಅಚ್ಚಯ್ಯರವರ ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಜೇನು ಕುರುಬರ ರಾಜ ಯಾನೆ ದೇವುರವರು ಕೆಲಸಕ್ಕೆ ಬಾರದೆ ಇದ್ದು, ತೋಟ ಮಾಲೀಕ ಪ್ರಭು ಅಚ್ಚಯ್ಯನವರು ಮತ್ತು ಕೆಲಸದಾಳು ನಾಗೇಶರವರು ರಾಜುರವರನ್ನು ಕೆಲಸಕ್ಕೆ ಕರೆಯಲೆಂದು ಆತನ ಲೈನ್ ಮನೆಗೆ ಹೋಗಿ ನೋಡಲಾಗಿ ಲೈನ್ ಮನೆಯಲ್ಲಿ ಇಲ್ಲದೇ ಇದ್ದು ಹುಡುಕಿದಾಗ ಪ್ರಭು ಅಚ್ಚಯ್ಯನವರ  ಕೆರೆಯ ದಡದಲ್ಲಿ ರಾಜುರವರು ಮೃತದೇಹವು ಬಿದ್ದಿದ್ದು ಆತನ ಕುತ್ತಿಗೆಯ ಭಾಗಕ್ಕೆ ಕತ್ತಿಯಂತಹ ಹರಿತವಾದ ಆಯುಧದಿಂದ ಕಡಿದು ಕೊಲೆ ಮಾಡಿರುವುದು ತಿಳಿದುಬಂದ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು

     ಪ್ರಕರಣದ ತನಿಖೆಯನ್ನು  ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ.ಸುಮನ್ ಡಿ ಪೆನ್ನೇಕರ್, ಐ.ಪಿ.ಎಸ್ ಇವರ ನಿರ್ದೇಶನದಂತೆ  ವಿರಾಜಪೇಟೆ ಪೊಲೀಸ್ ಉಪ-ಅಧೀಕ್ಷಕರಾದ ಸಿ.ಟಿ.ಜಯಕುಮಾರ್‌ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎನ್.ಎನ್.ರಾಮರೆಡ್ಡಿರವರು ಕೈಗೊಂಡು ಗೋಣಿಕೊಪ್ಪ ಠಾಣಾ ಪಿಎಸ್ಐ ಸುರೇಶ್ ಬೋಪಣ್ಣ ನೇತೃತ್ವದ ತಂಡವು ಪ್ರಕರಣದ ಆರೋಪಿಗಳಾದ ಮೂಲತಃ ಪಿರಿಯಾಪಟ್ನ ತಾಲೂಕಿನ ರಾಣಿಗೇಟ್ ನಿವಾಸಿ ಹಾಲಿ ಕುಟ್ಟಂದಿ ಗ್ರಾಮದಲ್ಲಿ ವಾಸವಿರುವ ಜೇನು ಕುರುಬರ ರವಿ ಯಾನೆ ಮಂಜು ಮತ್ತು ವಿ.ಬಾಡಗ ಗ್ರಾಮದಲ್ಲಿ ವಾಸವಿರುವ ಜೇನು ಕುರುಬರ ವಿನು ಯಾನೆ ವಿನೋದ್‌ರವರನ್ನು  ದಿನಾಂಕ 09/05/2020 ರಂದು ಬಂಧಿಸಿದ್ದಾರೆ. .

       ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎನ್.ಎನ್.ರಾಮರೆಡ್ಡಿ, ಗೋಣಿಕೊಪ್ಪ ಠಾಣಾ ಪಿಎಸ್ಐ ಸುರೇಶ್ ಬೋಪಣ್ಣ, ಎಎಸ್ಐ ಮೇದಪ್ಪ, ಸಿಬ್ಬಂದಿಗಳಾದ  ಹೆಚ್.ಕೆ.ಕೃಷ್ಣ, ಪೂವಣ್ಣ, ಅಬ್ದುಲ್ ಮಜೀದ್, ಕೃಷ್ಣಮೂರ್ತಿ, ಮಣಿಕಂಠ, ತೇಜಸ್ ರವರನ್ನೊಳಗೊಂಡ ತಂಡದ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್‌ರವರು ಶ್ಲಾಘಿಸಿದ್ದಾರೆ.

ಆಸ್ತಿ ಕಲಹ, ಹತ್ಯೆ

ಆಶ್ತಿ ವಿವಾದವೊಂದು ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ತಾಲೂಕಿನ ಪುತ್ಯ ಪೆರಾಜೆ ಗ್ರಾಮದಲ್ಲಿ ನಡೆದಿದೆ. ಪುತ್ಯ ಪೆರಾಜೆ ನಿವಾಸಿ ಉತ್ತರ ಕುಮಾರ ಮತ್ತು ಅದೇ ಗ್ರಾಮದ ತಾರಿಣಿ ಎಂಬವರಿಗೆ ಆಸ್ತಿ ವಿವಾದವಿದ್ದು ದಿನಾಂಕ ದಿನಾಂಕ 09/05/2020ರಂದು ರಾತ್ರಿ ವೇಳೆ ತಾರಿಣಿ ಹಾಗೂ ಅವರ ಧರಣಿ ಕುಮಾರ್ ಎಂಬವರು ಸೇರಿಕೊಂಡು ಅದೇ ಗ್ರಾಮದ ಭವಾನಿಶಂಕರ್ ಎಂಬವರ ತೋಟದಲ್ಲಿ ಉತ್ತರ ಕುಮಾರ್‌ರವರ ಮೇಲೆ ಕತ್ತಿಯಿಂದ ಕಡಿದು ತೀವ್ರವಾದ ಹಲ್ಲೆ ನಡೆಸಿದ್ದು ಉತ್ತರ ಕುಮಾರರವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ

ದಿನಾಂಕ 06/05/2020ರಂದು ಸಿದ್ದಾಪುರ ಬಳಿಯ ಕರಡಿಗೋಡು ನಿವಾಸಿ ಎನ್‌.ವಿ.ಒ್ರೇಮನ್ ಎಂಬವರು ಫ್ರಾನ್ಸಿಸ್ ಎಂಬವರೊಡನೆ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಫ್ರಾನ್ಸಿಸ್‌ರವರು ಸ್ಕೂಟರನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಸ್ಕೂಟರ್ ಫ್ರಾನ್ಸಿಸ್‌ರವರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಸಾಗಾಟ

ದಿನಾಂಕ 09/05/2020ರಂದು ವಿರಾಜಪೇಟೆ ಬಳಿಯ ಕಡಂಗ ಮಾರ್ಗವಾಗಿ ಬೊಳ್ಳುಮಾಡು ಗ್ರಾಮಕ್ಕೆ ಆಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ವೀಣಾ ನಾಯಕ್‌ರವರು ಕಡಂಗಮರೂರು ಗ್ರಾಮದ ಬಳಿ ಕುಂಜಿಲಗೇರಿ ನಿವಾಸಿ ಕೆ.ಸಿ.ಉತ್ತಪ್ಪ ಎಂಬವರು ಕೆಎ-04-ಜೆಡ್-3867ರ ಮಾರುತಿ ಒಮಿನಿ ವ್ಯಾನಿನಲ್ಲಿ ಸುಮಾರು ರೂ, 8,640/- ಮೌಲ್ಯದ 90 ಎಂಎಲ್‌ನ 288 ಟೆಟ್ರಾ ಪ್ಯಾಕ್‌ ಮದ್ಯವನ್ನು ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಉತ್ತಪ್ಪರವರನ್ನು ಬಂಧಿಸಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಕ್‌ಡೌನ್ ಆದೇಶ ಉಲ್ಲಂಘನೆ ಪ್ರಕರಣ

ದಿನಾಂಕ 09/05/2020ರಂದು ಕುಟ್ಟ ಬಳಿಯ ಕೆ.ಬಾಡಗ ಗ್ರಾಮದ ನಿವಾಸಿ ಸಿ.ಡಿ.ಬೋಪಣ್ಣ ಎಂಬವರು ಕೋವಿಡ್‌-19 ಸಾಂಕ್ರಾಮಿಕ ರೋಗದ ಸಂಬಂಧ ಹೊರಡಿಸಲಾದ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ಕೇರಳ ರಾಜ್ಯದ ಮಟ್ಟನೈಲ್ ಅನೂಪ್ ಮತ್ತು ಕೇಕಿಯನತ್ತ್ ಸತ್ಯ ಎಂಬವರನ್ನು ಕೆಎ-18-ಎನ್-7158ರ ಕಾರಿನಲ್ಲಿ ಕರೆದುಕೊಂಡು ಅಕ್ರಮವಾಗಿ ಕೇರಳಕ್ಕೆ ಕಳುಹಿಸಿಕೊಡಲು ಯತ್ನಿಸುತ್ತಿದ್ದನ್ನು ಕುಟ್ಟ ಚೆಕ್‌ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಎಂ.ಪ್ರಭಾಕರ ಎಂಬ ಪೊಲೀಸ್‌ ಸಿಬ್ಬಂದಿ ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ

ದಿನಾಂಕ 09/05/2020ರಂದು ಶನಿವಾರಸಂತೆ ಬಳಿಯ ದೊಡ್ಡ ಭಂಡಾರ ನಿವಾಸಿ ವಿಶ್ವನಾಥ ಎಂಬವರು ಕೆಎ-12-ಎಂಎ-ಕೆಎ-12-ಎಂಎ-6743ರ ಕಾರಿನಲ್ಲಿ ಮಧು ಕುಮಾರ ಎಂಬವರೊಡನೆ ಹೋಗುತ್ತಿರುವಾಗ ಎಳನೀರು ಗುಂಡಿ ಗ್ರಾಮದ ಬಳಿ ಚಾಲಕ ಮಧುಕುಮಾರ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಯಲ್ಲಿ ಬರುತ್ತಿದ್ದ ದನವೊಂದಕ್ಕೆ ಡಿಕ್ಕಿಯಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ವಿಶ್ವನಾಥರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ

ದಿನಾಂಕ 09/05/2020ರಂದು ಶನಿವಾರಸಂತೆ ಬಳಿಯ ಕುರುಡುವಳ್ಳಿ ಗ್ರಾಮದ ಬಳಿ ಲೋಲಾಕ್ಷಿ ಮತ್ತು ಶಾಲಿನಿ ಎಂಬವರುಗಳು ನಡೆದುಕೊಂಡು ಹೋಗುತ್ತಿರುವಾಗ ಸೋಮವಾರಪೇಟೆ ಕಡೆಯಿಂದ ಕೆಎ-20-ಪಿ-2764ರ ಕಾರನ್ನು ಅದರ ಚಾಲಕ ಬಿದರೂರು ಗ್ರಾಮದ ನಿವಾಸಿ ಮೋಹನ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲೋಲಾಕ್ಷಿ ಮತ್ತು ಶಾಲಿನಿರವರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಲೋಲಾಕ್ಷಿ ಮತ್ತು ಶಾಲಿನಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 09/05/2020ರಂದು ವಿರಾಜಪೇಟೆ ಪಟ್ಟಣದ ಗಾಂದಿನಗರ ನಿವಾಸಿ ದಿಲನ್‌ ಎಂಬವರ ಮೇಲೆ ವಿರಾಜಪೇಟೆ ನಿವಾಸಿಗಳಾದ ಹೇಮಂತ್, ರಂಜು, ಅಕ್ಷಯ್ ಮತ್ತು ಮನೋಜ್‌ ಎಂಬವರುಗಳು ಸೇರಿಕೊಂಡು ಹೊಡೆದು ಹಲ್ಲೆ ಮಾಡಿದ್ದು ವಿಚಾರಿಸಲು ಬಂದ ದಿಲನ್‌ರವರ ತಾಯಿ, ತಂದೆ ಮತ್ತು ಅಕ್ಕನವರಿಗೂ ಸಹ ಕೋಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.