Crime News

ಹಲ್ಲೆ ಪ್ರಕರಣ

            ದಿನಾಂಕ: 11-05-2020 ರಂದು ಸೋಮವಾರಪೇಟೆ ತಾಲ್ಲೂಕು ಅಭ್ಯತ್ ಮಂಗಲ ಗ್ರಾಮದ ಜ್ಯೋತಿನಗರ ನಿವಾಸಿ ಕೊಳಂದೆ ಏಸು ಎಂಬುವವರಿಗೆ ಅವರ ಪಕ್ಕದ ಮನೆಯ ವಾಸಿಗಳಾದ ಚಂದ್ರಿಕಾ ಮತ್ತು ಅವರ ಮಗ  ಅರ್ಜುನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೆದರಿಕೆ ಪ್ರಕರಣ

            ದಿನಾಂಕ: 10.05-2020 ರಂದು ಮಡಿಕೇರಿ ತಾಲ್ಲೂಕು ಮುಕ್ಕೋಡ್ಲು ಗ್ರಾಮದ ನಿವಾಸಿ ಶ್ರೀಮತಿ ರುಕ್ಮಿಣಿ ಮತ್ತು ಅವರ ಮಗನೊಂದಿಗೆ ಮನೆಯಲ್ಲಿರುವಾಗ ಅವರ ಪಕ್ಕದ ಮನೆಯ ನಿವಾಸಿ ಪಳಂಗಪ್ಪ ಎಂಬುವವರು ಆಸ್ತಿ ವಿಚಾರದಲ್ಲಿ ವೈಷಮ್ಯದಿಂದ ಕತ್ತಿಯೊಂದಿಗೆ ಅಕ್ರಮವಾಗಿ ಮನೆಗೆ ಪ್ರವೇಶಿಸಿ ಅವಾಚ್ಯ ಪದಗಳಿಂದ ಬೈದು ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 11-05-2020 ರಂದು ಮಡಿಕೇರಿ ಕಡಗದಾಳ ಗ್ರಾಮದ ನೀರುಕೊಲ್ಲಿ ಬಳಿ ಮುಖಱಯ ರಸ್ತೆಯಲ್ಲಿ ಕೆಎ-12-ಜೆಡ್-7789 ರ ಜೀಪನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎಸ್-4892 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಜಾವಿದ್ ಅಹಮ್ಮದ್ ಎಂಬುವವರು ಬಿದ್ದು ಗಾಯಗೊಂಡಿರುತ್ತಾರೆ. ಬೈಕ್ ಗೆ ಡಿಕ್ಕಿಪಡಿಸಿ ಜೀಪು ಚಾಲಕ ಜೀಪನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಡಿಕ್ಕಿ ಪಾದಚಾರಿಗೆ ಗಾಯ

            ದಿನಾಂಕ: 11-05-2020 ರಂದು ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎನ್-2601 ರ ಕಾರನ್ನು ಅದರ ಚಾಲಕ ವಿಠಲ ತಿಮ್ಮಯ್ಯ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಮೀನಾಕ್ಷಿ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.