Crime News

ಸುಲಿಗೆ ಪ್ರಕರಣ, ಆರೋಪಿಗಳ ಬಂಧನ

ಇತ್ತೀಚೆಗೆ ನಡೆದ ಸುಲಿಗೆ ಪ್ರಕರಣವೊಂದರಲ್ಲಿ ಯಾವುದೇ ರೀತಿಯ ಸುಳಿವು ಸಿಗದಿದ್ದರೂ ಅತ್ಯಂತ ವೃತ್ತಿಪರತೆ ಹಾಗೂ ಚಾಣಾಕ್ಷತೆಯಿಂದ ಕೃತ್ಯ ನಡೆದ ಕೇವಲ ಹತ್ತು ದಿನಗಳಲ್ಲೇ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಪತ್ತೆಹಚ್ಚುವುದಲ್ಲದೆ ಸುಲಿಗೆ ನಡೆಸಿದ ಹಣವನ್ನೂ ಸಹ ವಶಪಡಿಸಿಕೊಳ್ಳುವುದರಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರ ತಂಡ ಹಾಗು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ದಿನಾಂಕ 02/05/2020ರಂದು ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಗುಂಡುಕುಟ್ಟಿ ಎಸ್ಟೇಟಿನ ಕಾರ್ಮಿಕರಿಗೆ ಹಣವನ್ನು ಬಟವಾಡೆ ಮಾಡಲು ಹಣ ತರುತ್ತಿದ್ದ ತೋಟದ ರೈಟರ್ ವಿಜಯಕುಮಾರ್‌ರವರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇದ್ದ 5,18,000/- ನಗದನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಉಪಾಧೀಕ್ಷಕರಾದ ಹೆಚ್‌.ಎಂ. ಶೈಲೇಂದ್ರರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ.ಮಹೇಶ್‌ರವರ ನೇತೃತ್ವದ ತಂಡ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಹಣ ಸುಲಿಗೆ ಮಾಡಿದ ಆರೋಪಿಗಳಾದ ಮೈಸೂರು ಜಿಲ್ಲೆಯ ಪಿರಿಯಾಪಟ್ನ ತಾಲೂಕಿನ ಕೊಪ್ಪದ ನಿವಾಸಿ ಟಿ.ವಿ.ಹರೀಶ್, ಮೂಲತಃ ಸುಂಟಿಕೊಪ್ಪದ ನಿವಾಸಿ ಹಾಲಿ ಮೈಸೂರಿನ ವಿಜಯನಗರದಲ್ಲಿ ವಾಸವಿರುವ ಕುಮಾರೇಶ್ ಯು.ಬಿ. ಮತ್ತು ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದ ನಿವಾಸಿ ಜಗ್ಗಾರಂಡ ಕಾವೇರಪ್ಪ ಎಂಬವರನ್ನು ಬಂಧಿಸಿ ಅವರಿಂದ ಸುಲಿಗೆ ಮಾಡಿದ ಹಣದಲ್ಲಿ ರೂ. 5,02,000/- ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಹೆಚ್.ಎಂ.ಶೈಲೇಂದ್ರರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ. ಮಹೇಶ್ ರವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಹೆಚ್‌.ವಿ., ಸುಂಟಿಕೊಪ್ಪ ಠಾಣಾ ಪಿಎಸ್‌ಐ ತಿಮ್ಮಪ್ಪ ಹಾಗೂ ಸಿಬ್ಬಂದಿಯವರಾದ ಕೆ.ಎ. ಹಮೀದ್ ಎಎಸ್ಐ, ವಿ.ಜಿ. ವೆಂಕಟೇಶ್, ಯೋಗೇಶ್ ಕುಮಾರ್ ಬಿ.ಎಲ್., ಎಂ.ಎನ್. ನಿರಂಜನ್, ಕೆ.ಆರ್. ವಸಂತ್, ಶರತ್ ರೈ ಬಿ.ಜೆ.,ಕೆ.ಎಸ್. ಅನಿಲ್ ಕುಮಾರ್, ಟಿ.ಎಸ್. ಸಜಿ, ಬಿ.ಎಸ್. ದಯಾನಂದ,ಎನ್‌.ವಿ. ಪ್ರಕಾಶ್, ಸಂದೇಶ್, ಬಿ.ಪಿ. ಸಂಪತ್ ರೈ, ಲೋಕೇಶ್, ಚಾಲಕರಾದ ಗಣೇಶ, ಶಶಿಕುಮಾರ್ ಹಾಗೂ ಸಿ.ಡಿ.ಆರ್. ಸೆಲ್ ನ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ. ಮತ್ತು ಎಂ.ಎ.ಗಿರೀಶ್ ರವರ ಪರಿಶ್ರಮದಿಂದ ಪ್ರಕರಣವನ್ನು ಬೇಧಿಸಿದ್ದು ತಂಡದ ಕಾರ್ಯ ತತ್ಪರತೆ ಹಾಗೂ ವೃತ್ತಿಪರತೆಯನ್ನು ಶ್ಲಾಘಿಸಲಾಗಿದೆ.

ಆಕಸ್ಮಿಕವಾಗಿ ಮರದಿಂದ ಬಿದ್ದು ವ್ಯಕ್ತಿ ಸಾವು

            ದಿನಾಂಕ: 12-05-2020 ರಂದು ರಾತ್ರಿ ಮಡಿಕೇರಿ ತಾಲ್ಲೂಕು ತಣ್ಣಿಮಾನಿ ಗ್ರಾಮದ ನಿವಾಸಿ ಪುಟ್ಟ ಎಂಬುವವರು ಐವತ್ತೊಕ್ಲು ಗ್ರಾಮದ ರಮೇಶ್ ಎಂಬುವರು ತೋಟದ ಮರದಲ್ಲಿದ್ದು ಜೇನನ್ನು ಸಂಗ್ರಹಿಸುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಗಾಯಗೊಂಡಿದ್ದವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದ  ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ         

            ದಿನಾಂಕ: 13-05-2020 ರಂದು ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ನಿವಾಸಿ ರಾಕೇಶ್ ಎಂಬುವವರಿಗೆ ಅದೇ ಬಡಾವಣೆಯ ನಿವಾಸಿ ಪ್ರಮೋದ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗ ರಾಕೇಶ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಸಾಗಾಟ ಪ್ರಕರಣ

            ದಿನಾಂಕ: 13-05-2020 ರಂದು ವಿರಾಜಪೇಟೆ ತಾಲ್ಲೂಕು ಪೊಜೆಕಲ್ಲು ಗ್ರಾಮದ ನಿವಾಸಿ ಮುಕ್ಕಾಟಿರ ಬೋಪಣ್ಣ ಎಂಬುವವರು ಅವರ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದು  ಕಟಾವು ಮಾಡಿ ಮಾರಾಟ ಮಾಡುವ ಸಲುವಾಗಿ ಕುಟ್ಟ ಗ್ರಾಮದ ನಿವಾಸಿ ನಿಸಾರ್ ಎಂಬುವವರು ಸಾಗಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆ ಕುಟ್ಟ ಠಾಣೆ ಪಿಎಸ್ಐ ಹೆಚ್.ಜೆ ಚಂದ್ರಪ್ಪ ಮತ್ತು ಸಿಬ್ಬಂದಿಯವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 13-05-2020 ರಂದು ವಿರಾಜಪೇಟೆ ತಾಲ್ಲೂಕು ಕಡಂಗ ಮರೂರು ಗ್ರಾಮದ ನಿವಾಸಿ ಕೈಪಂಗಡ ಬಿ ಸುರೇಶ್ ಎಂಬುವವರು ಅವರ ಮನೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್ಐ ವೀಣಾ ನಾಯಕ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.