Crime News

ಕಳವು ಪ್ರಕರಣ

ದಿನಾಂಕ: 15-03-2020 ರಂದು ಮಡಿಕೇರಿ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ನಿವಾಸಿ ಶಶಿಧರ ಎಂಬುವವರು ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ಮನೆಯಲ್ಲಿದ್ದ ಲಾಕರ್ ನಲ್ಲಿ ಇಟ್ಟಿದ್ದರು. ನಂತರ ದಿನಾಂಕ: 13-05-2020 ರಂದು ಲಾಕರ್ ತೆಗೆದು ನೋಡಿದಾಗ ಅದರಲ್ಲಿದ್ದ 73,500 ಬೆಲಬಾಳುವ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 16-05-2020 ರಂದು ಮಡಿಕೇರಿ ತಾಲ್ಲೂಕು ಕರ್ಣಂಗೇರಿ ಗ್ರಾಮದ ರಾಜರಾಜೇಶ್ವರಿ ನಗರದ ನಿವಾಸಿ ರಾಜು ಎಂಬುವವರಿಗೆ ಅವರ ಪಕ್ಕದ ಮನೆಯ ನಿವಾಸಿ ವಿಜಯ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ರಾಜು ರವರ ಪತ್ನಿ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 16-05-2020 ರಂದು ವಿರಾಜಪೇಟೆ ತಾಲ್ಲೂಕು ಮಾಲ್ದಾರ ಗ್ರಾಮದ ಆಸ್ತಾನ ಹಾಡಿ ನಿವಾಸಿ ವಸಂತಕುಮಾರ್ @ ಸಂಜು ಎಂಬುವವರು ಅಕ್ರಮವಾಗಿ ಸಾರ್ವಜನಿಕರಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಠಾಣೆ ಪಿಎಸ್ಐ ಮೋಹನ್ ರಾಜ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿಯ ಹತ್ಯೆ ಪ್ರಕರಣ

ದಿನಾಂಕ: 14-05-2020 ರಂದು ಸೋಮವಾರಪೇಟೆ ತಾಲ್ಲೂಕು ಮಾಲಂಬಿ ಗ್ರಾಮದ ಜೇನುಕುರುಬರ ಹಾಡಿ ನಿವಾಸಿ ಕುಮಾರ ಎಂಬುವವರು ಅವರ ಪತ್ನಿ ನಾಗಮ್ಮ ಎಂಬುವವರನ್ನು ಯಾವುದೋ ವಿಚಾರದಲ್ಲಿ ಜಗಳವಾಗಿ ಕೊಲೆ ಮಾಡಿ ಹೋಗಿದ್ದು ಈ ಬಗ್ಗೆ ಆಲೂರು ಸಿದ್ದಾಪುರ ಪಿ.ಡಿ.ಒ ರವರು ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

            ದಿನಾಂಕ: 16-05-2020 ರಂದು ಸೋಮವಾರಪೇಟೆ ಠಾಣೆ ಪಿಎಸ್ಐ ಶಿವಶಂಕರ್ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆ ಸಿಬ್ಬಂದಿಯವರೊಂದಿಗೆ ಕಾಗಡಿಕಟ್ಟೆ ಗ್ರಾಮಕ್ಕೆ ತೆರಳಿ ಅಕ್ರಮವಾಗಿ ಹೊಳೆಯಿಂದ ಮರಳನ್ನು ಕಳ್ಳತನ ಮಾಡಿ ಕೆಎ-18-ಎ=9835 ರ ಪಿಕ್ ಅಪ್ ವಾಹನದಲ್ಲು ತಂಬಿಸಿಕೊಂಡು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.