Crime News

ಹಲ್ಲೆ ಪ್ರಕರಣ

            ದಿನಾಂಕ: 17-05-2020 ರಂದು ಮಡಿಕೇರಿ ತಾಲ್ಲೂಕು ಮದೆ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-09-ಡಿ-5760 ರ ಲಾರಿಯನ್ನು ಜನಾರ್ಧನ ಎಂಬುವವರು ಮಂಗಳೂರು ನಿಂದ ಮೈಸೂರು ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ವಾಹನಗಳು ದಾರಿ ಕೊಡಲು ಹಾರನ್ ಮಾಡಿ ಸೂಚನೆ ನೀಡಿದಾಗ ಮುಂದೆ ಹೋಗುತ್ತಿದ್ದ ಕೆಎ-01-ಎಎ-8322 ರ ಲಾರಿ ಮತ್ತು ಕೆಎ-19-ಎ-1038 ರ ಮಿನಿ ಗೂಡ್ಸ್ ಚಾಲಕರುಗಳು ಜನಾರ್ಧನ ರವರ ಲಾರಿಯನ್ನು ತಡೆದು ನಿಲ್ಲಿಸಿ ಏಕಾಏಕಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿರುವುದಾಗಿ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 17-05-2020 ರಂದು ಸೋಮವಾರಪೇಟೆ ತಾಲ್ಲೂಕು ತಾಕೇರಿ ಗ್ರಾಮದ ನಿವಾಸಿ ಪೂಣಚ್ಚ ಎಂಬುವವರಿಗೆ ಅವರ ಅತ್ತಿಗೆಯ ತಮ್ಮ ನಿತಿನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಪೂಣಚ್ಚ ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ 16-05-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡ್ಲೂರು ಗ್ರಾಮದ ನಿವಾಸಿ ವಿಷಕಂಠ ಮತ್ತು ರವಿ ಎಂಬುವವರಿಗೆ ಸಂತೋಷ್ ಕುಮಾರ್ ಎಂಬುವವರು ಕೂಲಿ ಕೆಲಸದ ಹಣ ನೀಡುವ ವಿಚಾರದಲ್ಲಿ ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 16-05-2020 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕತ್ತೂರು ಗ್ರಾಮದ ನಿವಾಸಿ ಸಿ.ಎಸ್ ಕುಮಾರ ಎಂಬುವವರ ಮನೆಯ ಮುಂದೆ ಮದ್ಯಪಾನ ಮಾಡಿಕೊಂಡು ಜೋರಾಗಿ ಗಲಾಟೆ ಮಾಡುತ್ತಿದ್ದುದನ್ನು ಕೇಳಿದಾಗ ಅದೇ ಗ್ರಾಮದ ನಿವಾಸಿಗಳಾದ ಅನುಕುಮಾರ್, ರಜಿತ, ಅಭಿಷೇಕ್ ಎಂಬುವವರು ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.