Crime News

ಬೈಕ್ ಕಳವು ಪ್ರಕರಣ, ಆರೋಪಿಗಳ ಬಂಧನ.

            ಕೊಡಗು ಜಿಲ್ಲೆಯ ವಿವಿದೆಡೆ ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಕಳುವಾದ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಮಡಿಕೇರಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

            ದಿನಾಂಕ: 16-01-2020 ರಂದು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯ ವಸತಿ ಗೃಹದ ಆವರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಯವರ ಹೀರೋ ಹೋಂಡಾ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

            ಮಡಿಕೇರಿ ನಗರ ವೃತ್ತ ನಿರೀಕ್ಷಕರವರ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾ ತಂಡವು ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳಾದ ಮೂರ್ನಾಡು ನಿವಾಸಿ ಅರುಣ ಕೆ.ಬಿ, 2ನೇ ಮೊಣ್ಣಂಗೇರಿ ನಿವಾಸಿ ಸಚಿನ್ ಎಂ, ಮೂರ್ನಾಡು ಗ್ರಾಮದ ಕಾರ್ತಿಕ್ @ ಕೀರ್ತಿ, ಐಕೊಳ ಗ್ರಾಮದ ವಾಸು ಕೆ.ಆರ್ ಎಂಬುವವರನ್ನು ದಿನಾಂಕ: 18-05-2020 ರಂದು ದಸ್ತಗಿರಿ ಮಾಡಿ ಜಿಲ್ಲೆಯ ವಿವಿದೆಡೆ ಕಳವು ಮಾಡಿದ್ದ 5 ಬೈಕ್ ಹಾಗೂ ಒಂದು ರಿವಾಲ್ವರ್ ವಶಪಡಿಕೊಂಡಿರುತ್ತಾರೆ.

            ಮಡಿಕೇರಿ ನಗರ ವೃತ್ತದ ಸಿ.ಪಿ.ಐ ಅನೂಪ್ ಮಾದಪ್ಪ, ಮಡಿಕೇರಿ ನಗರ ಠಾಣೆ ಪಿ.ಎಸ್.ಐ ಅಂತಿಮ ಎಂ.ಟಿ, ಎ.ಎಸ್.ಐ ಹೊನ್ನಪ್ಪ, ಸಿಬ್ಬಂದಿಯವರಾದ ಕಿರಣ್ , ಚರ್ಮಣ, ದಿನೇಶ್, ಶ್ರೀನಿವಾಸ, ಪ್ರವೀಣ್, ನಾಗರಾಜ್ ಕೆ, ಅರುಣ್ ಕುಮಾರ್, ಉತ್ತಪ್ಪ, ಸುನಿಲ್, ನಂದಕುಮಾರ್, ಓಮನ, ಭವಾನಿ, ಸೌಮ್ಯ, ಗಿರೀಶ್, ರಾಜೇಶ್ ರವರುಗಳು ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಹಲ್ಲೆ ಪ್ರಕರಣ         

            ದಿನಾಂಕ: 17-05-2020 ರಂದು ಮಡಿಕೇರಿ ತಾಲ್ಲೂಕು ಪೆರಾಜೆ ಗ್ರಾಮದ ನಿವಾಸಿ ಲೋಕೇಶ್ ಎಂಬುವವರಿಗೆ  ಅವರ ಸಹೋದರ ಕೇಶವ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಲೋಕೇಶ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸುಳ್ಳು ಮಾಹಿತಿ ನೀಡಿ ಜಿಲ್ಲೆಗೆ ಆಗಮನ, ಪ್ರಕರಣ ದಾಖಲು.

            ದಿನಾಂಕ: 10-05-2020 ರಂದು ಮಡಿಕೇರಿ ತಾಲ್ಲೂಕು ಎಂ.ಬಾಡಗ ಗ್ರಾಮದ ನಿವಾಸಿಯೋರ್ವರು ಕೊಪ್ಪ ಚೆಕ್ ಪೋಸ್ಟ್ ಮುಖಾಂತರ ಬೆಂಗಳೂರಿನಿಂದ ಬಂದಿರುವುದಾಗಿ ಮಾಹಿತಿ ನೀಡಿ ಜಿಲ್ಲೆಗೆ ಅಗಮಿಸಿ ಎಂ.ಬಾಡಗ ಗ್ರಾಮದಲ್ಲಿ ವಾಸವಿದ್ದರು. ಇವರು ಮುಂಬೈನಿಂದ ಬಂದಿದ್ದು ಇವರು ಭೀಕರ ಕೋವಿಡ್-19 ಸಾಂಕ್ರಾಮಿಕ ರೋಗದ ಮುಂಜಾಗೃತಾ ಕ್ರಮವಾಗಿ ಕೊಡಗು ಜಿಲ್ಲೆ ಹಾಗು ಕರ್ನಾಟಕ ರಾಜ್ಯದಲ್ಲಿ ನಿಷೇಧಾಜ್ಞೆ ಇದ್ದರೂ ಕೂಡ ಕೋವಿಡ್-19 ಪ್ರಕರಣ ಅತಿ ಹೆಚ್ಚಾಗಿ ಹರಡಿರುವ ಮುಂಬೈ ನಿಂದ ಬಂದ ಮಾಹಿತಿಯನ್ನು ಮುಚ್ಚಿಟ್ಟು ಬೆಂಗಳೂರಿನಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿ ಬೇರೆಯವರಿಗೆ ಕಾಯಿಲೆ ಹರಡುತ್ತದೆ ಎಂದು ಗೊತ್ತಿದ್ದರೂ ಸಹ ಸುಳ್ಳು ಮಾಹಿತಿ ನೀಡಿರುವುದರಿಂದ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋವಿಡ್ ಕಾರ್ಯಪಡೆ ಕಾರ್ಯದರ್ಶಿಯಾಗಿರುವ ಕಾಂತೂರು ಮೂರ್ನಾಡು ಗ್ರಾಮ ಪಂಚಾಯತಿ ಪಿ.ಡಿ.ಒ ರವರು ದಿನಾಂಕ: 18-05-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಕಳ್ಳಭಟ್ಟಿ ಮಾರಾಟ ಪ್ರಕರಣ.

            ದಿನಾಂಕ: 18-05-2020 ರಂದು ಸಿದ್ದಾಪುರ ಠಾಣೆ ಪಿ.ಎಸ್.ಐ ಮೋಹನ್ ರಾಜ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆ ಸಿಬ್ಬಂದಿಯವರೊಂದಿಗೆ ವಿರಾಜಪೇಟೆ ತಾಲ್ಲೂಕು ಗುಹ್ಯ ಗ್ರಾಮಕ್ಕೆ ತೆರಳಿ ವಿಶ್ವನಾಥ್ @ ವಿಶು ಎಂಬುವವರು ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೊಳೆಗೆ ಸ್ನಾನಕ್ಕೆ ತೆರಳಿದ್ದು ಯುವಕನ ಆಕಸ್ಮಿಕ ಸಾವು.

            ದಿನಾಂಕ: 17-05-2020 ರಂದು ಮಡಿಕೇರಿ ತಾಲ್ಲೂಕು ಪಾಲೂರು ಗ್ರಾಮದ ನಿವಾಸಿ ನಿತಿನ್ ಎಂಬುವವರು ಸ್ನೇಹಿತರೊಂದಿಗೆ ಗ್ರಾಮದ ದರ್ಬಾಣೆ ಬಳಿ ಕಾವೇರಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 17-05-2020 ರಂದು ಸೋಮವಾರಪೇಟೆ ತಾಲ್ಲೂಕು ಬೆಟ್ಟದಳ್ಳಿ ಗ್ರಾಮದ ನಿವಾಸಿಗಳಾದ ಯೋಗೇಂದ್ರ, ಕುಮಾರಿ,ದಿನೇಶ, ಲವಕುಶ ಮತ್ತು ವಿನಯ್, ಹನುಮಯ್ಯ, ವೆಂಕಟೇಶ್, ಗೌರಮ್ಮ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕೈಗಳಿಂದ ಹಾಗೂ ಕತ್ತಿಯಿಂದ ಹಲ್ಲೆ ಮಾಡಿಕೊಂಡು ಪರಸ್ಪರ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 18-05-2020 ರಂದು ಸೋಮವಾರಪೇಟೆ ತಾಲ್ಲೂಕು ಕೂತಿ ಗ್ರಾಮದ ನಿವಾಸಿಗಳಾದ ಸಾಗರ್, ಅಶೋಕ, ಚಿರಂಜೀವಿ ಮತ್ತು ಜೋಯಪ್ಪ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕಲ್ಲಿನಿಂದ ಹಲ್ಲೆ ಮಾಡಿಕೊಂಡು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣ

            ದಿನಾಂಕ: 18-05-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಶ್ರೀಮಂಗಲ ಗ್ರಾಮದ ಸಿ.ಎ ರಘು ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲು ಕುಟುಂಬದೊಂದಿಗೆ ವಾಸವಿದ್ದ ಮುತ್ತ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವರ ಪತ್ನಿ ಶ್ರೀಮತಿ ಮಾಲಿ ಎಂಬುವವರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದು ಈ ಬಗ್ಗೆ ರಘು ರವರು ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.