Crime News

ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ, ಆರೋಪಿಗಳ ಬಂಧನ:

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ವಿರಾಜಪೇಟೆ ವೃತ್ತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ ಸುಮಾರು 9 ಕೆ.ಜಿ. ಗಾಂಜಾ ಮತ್ತು ಹಣವನ್ನು ವಶಪಡಿಸಿಕೊಂಡು ಸುಮಾರು 12 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

        ಜಿಲ್ಲಾ ಅಪರಾಧ ಪತ್ತೆ ದಳವು ವಿರಾಜಪೇಟೆ ವ್ಯಾಪ್ತಿಯಲ್ಲಿ ನಿಸಾರ್ ಹಾಗೂ ಸಾಧಿಕ್ ಎಂಬವರು ಹಾಗೂ ಇತರರು ಅಕ್ರಮ ಗಾಂಜಾ ಮಾರಾಟ ಚಟುವಟಿಕೆಗಳಲ್ಲಿ ತೊಡಗಿರುವ  ಬಗ್ಗೆ ಮಾಹಿತಿಯನ್ನು ಹೊಂದಿದ್ದು ಅವರುಗಳ ಮೇಲೆ ನಿರಂತರ ನಿಗಾವಹಿಸಲಾಗಿತ್ತು. ಅದರಂತೆ ದಿನಾಂಕ 19-05-2020ರಂದು ನಿಸಾರ್ ಹಾಗೂ ಸಾಧಿಕ್ ಎಂಬವರು ಅಕ್ರಮವಾಗಿ ಗಾಂಜಾವನ್ನು ಹೊಂದಿದ್ದು ಅದನ್ನು ತನ್ನ ಸಹಚರರಿಗೆ ಸುಂಕದ ಕಟ್ಟೆಯ ಸಮೀಪದ ಮೈದಾನದಲ್ಲಿ ಹಂಚಲು ಹಾಗೂ ಮಾರಾಟಮಾಡಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ವಿರಾಜಪೇಟೆ ನಗರದ ಸುಂಕದ ಕಟ್ಟೆಯ ಸಮೀಪ ಪಂಪಿನಕೆರೆ ಮೈದಾನದಲ್ಲಿ ದಿನಾಂಕ 19-05-2020ರಂದು ಗಾಂಜಾ ಮಾರಾಟಮಾಡುತ್ತಿದ್ದ  ಮುಖ್ಯ ವ್ಯಕ್ತಿಗಳಾದ ವಿರಾಜಪೇಟೆ ಸುಂಕದ ಕಟ್ಟೆ ನಿವಾಸಿ ನಿಸಾರ್ ಆಹಮ್ಮದ್ ಹಾಗೂ ವಿರಾಜಪೇಟೆ ಸೆಲ್ವ ನಗರದ ಸಾಧಿಕ್  ಸೇರಿದಂತೆ 10 ಜನರನ್ನು  ವಾಹನಗಳ ಸಮೇತ ವಿರಾಜಪೇಟೆ ತಾಲೂಕು ದಂಡಾಧಿಕಾರಿ ನಂದೀಶ್, ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸಿ.ಟಿ ಜಯಕುಮಾರ್ ಹಾಗೂ ವಿರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೇಗೌಡ ಇವರ ನೇತೃತ್ವದಲ್ಲಿ ವಿರಾಜಪೇಟೆ ನಗರ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪ್ರಭಾರ ನಿರೀಕ್ಷಕ  ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು  ಪತ್ತೆ ಹಚ್ಚಿ ಸುಮಾರು 9 ಕೆ.ಜಿ.ಗಳಷ್ಟು ಗಾಂಜಾ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ ಹಣ ರೂ. 1,99,670/-   ಮತ್ತು ಐದು ನಾಲ್ಕು ಚಕ್ರದ ವಾಹನ, ಒಂದು ಆಟೋ ರಿಕ್ಷಾ ಮತ್ತು ಒಂದು ಸ್ಕೂಟರ್ ಹಾಗೂ 11 ಮೊಬೈಲ್ ಗಳನ್ನು  ವಶಪಡಿಸಿಕೊಂಡಿದ್ದು ವಿರಾಜಪೇಟೆ ನಗರ ಠಾಣೆ ಮೊ.ಸಂ. 40/2020 ಕಲಂ:20(ಬಿ)   ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

        ವಿರಾಜಪೇಟೆಯ ನಿಸಾರ್ , ಸಾಧಿಕ್ ಹಾಗೂ ಇತರರು ಅಕ್ರಮ ಗಾಂಜಾ ಮಾರಾಟ ಚಟುವಟಿಕೆಗಳಲ್ಲಿ ಒಂದು ಗುಂಪಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು ನಿಸಾರ್ ಹಾಗೂ ಸಾಧಿಕ್ ರವರು ಈ ಗುಂಪಿಗೆ ಮುಖ್ಯವಾಗಿ ಗಾಂಜಾವನ್ನು ತರಿಸಿ ತಮ್ಮ ಗುಂಪಿನ ಮುಖಾಂತರ ಹಂಚಿಕೆ ಮಾಡಿ ವಿರಾಜಪೇಟೆ ಹಾಗೂ ಮಡಿಕೇರಿಯ ಕೆಲವು ಕಡೆಗಳಲ್ಲಿ ಗಾಂಜಾ ಮಾರಾಟವನ್ನು ಮಾಡುತ್ತಿರುತ್ತಾರೆ. ಇವರುಗಳು ವಿರಾಜಪೇಟೆಯ ಸುಂಕದ ಕಟ್ಟೆ, ಮೊಗರ ಗಲ್ಲಿ ಬಸ್ಸು ನಿಲ್ದಾಣ, ಮಡಿಕೇರಿಯ ಬಸ್ಸು ನಿಲ್ದಾಣ, ಮಾರುಕಟ್ಟೆ, ಚೈನ್ ಗೇಟ್ ಮತ್ತು ಆಟೋರಿಕ್ಷಾ ನಿಲ್ದಾಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.

ದಸ್ತಗಿರಿಯಾದ ವ್ಯಕ್ತಿಗಳ ವಿವರ .

1)       ನಿಸಾರ್ ಆಹಮ್ಮದ್ ತಂದೆ ಲೇಟ್ ಚಾಂದ್ ಪಾಷಾ, ಪ್ರಾಯ 34ವರ್ಷ, ತರಕಾರಿ ವ್ಯಾಪಾರ ವೃತ್ತಿ ವಾಸ   ಸುಂಕದಕಟ್ಟೆ ವಿರಾಜಪೇಟೆ ನಗರ .

2)      ಎ.ಎಸ್ ಸಾಧಿಕ್ ತಂದೆ ಎಜಾಸ್ಸ್  ಪ್ರಾಯ 31ವರ್ಷ ,ಮೆಕಾನಿಕ್ ಕೆಲಸ ವಾಸ ಬಂಗಾಳ ಬೀದಿ. ವಿರಾಜಪೇಟೆ ನಗರ.

3)      ಬೌತೇಶ್ ಡಿಸೋಜಾ@ ಅನಿಲ್  ತಂದೆ ಅಗಸ್ಟೀನ್  ಪ್ರಾಯ 33ವರ್ಷ , ಚಾಲಕ ವೃತ್ತಿ , ರಾಘವೇಂದ್ರ ದೇವಸ್ಥಾನದ ಹತ್ತಿರ ಗೌಡಸಮಾಜದ ಬಳಿ ಮಡಿಕೇರಿ .

4)      ಎಂ.ಹೆಚ್ ರಫೀಕ್ ತಂದೆ ಹನೀಪ್ ಪ್ರಾಯ 35ವರ್ಷ, ಆಟೋ ಚಾಲಕ ವೃತ್ತಿ ವಾಸ ರಾಘವೇಂದ್ರ ದೇವಸ್ಥಾನದ ಹತ್ತಿರ ಗೌಡಸಮಾಜದ ಬಳಿ ಮಡಿಕೇರಿ .

5)      ಕರಣ್ ಕುಮಾರ್ @ ಶರತ್ ತಂದೆ ಗಣೇಶ್ , ಪ್ರಾಯ 24ವರ್ಷ , ಕೂಲಿಕೆಲಸ , ವಾಸ ತೊಂಬತ್ತುಮನೆ ಹಾಕತ್ತೂರು  ಮಡಿಕೇರಿ

6)      ಆರೀಸ್ ತಂದೆ ತಾಜುದ್ದೀನ್ , ಪ್ರಾಯ 33ವರ್ಷ , ಗಾರೆ ಕೆಲಸ ವಾಸ ತ್ಯಾಗರಾಜ ಕಾಲೋನಿ ಮಡಿಕೇರಿ.

7)      ಸಾಯಿ ಲಾಲ್ , ಎ.ಸಿ ತಂದೆ ಚಂದ್ರ ಪ್ರಾಯ 22ವರ್ಷ , ಅಲ್ಯೂಮಿನಿಯಂ ಪ್ಯಾಬ್ರೀಕೇಷನ್ & ಹಣ್ಣು ವ್ಯಾಪಾರ ಕೆಲಸ , ವಾಸ  ಸುಣ್ಣದ ಬೀದಿ ವಿರಾಜಪೇಟೆ.

8)      ರಿಜ್ವಾನ್  ತಂದೆ ಸಿದ್ದಿಕ್ ಪ್ರಾಯ 23ವರ್ಷ , ಮೆಕಾನಿಕ್ ಕೆಲಸ ವಾಸ ಮೊಗರಗಲ್ಲಿ ವಿರಾಜಪೇಟೆ

9)      ಮೊಹಮ್ಮದ್ ಹ್ಯಾರಿಸ್ ,ಎ ತಂದೆ ಪಿ .ಜೆ  ಅಬೂಬಕರ್ ಪ್ರಾಯ 37ವರ್ಷ ವಯರಿಂಗ್ ಕೆಲಸ ವಾಸ ಅಜಾದ್ ನಗರ ಮಡಿಕೇರಿ.

10)     ಸಿ.ಟಿ ದಿನೇಶ್ ತಂದೆ ಲೇಟ್ ತಂಗಪ್ಪ , ಪ್ರಾಯ 37ವರ್ಷ, ಕಾಪರ್ೆಂಟರ್ ಕೆಲಸ ವಾಸ ಉಕ್ಕುಡ ಕರ್ಣಂಗೇರಿ ಗ್ರಾಮ, ಮಡಿಕೇರಿ

11)      ನೆರವಂಡ ಪಿ , ಅಯ್ಯ ಪ್ಪ  ತಂದೆ ಪೆಮ್ಮಯ್ಯ , ಪ್ರಾಯ 34ವರ್ಷ , ವ್ಯವಸಾಯ ವೃತ್ತಿ, ವಾಸ ಎಫ್ಎಂಕೆಎಂಸಿ ಕಾಲೇಜು  ಹತ್ತಿರ ಮಡಿಕೇರಿ.

12)     ಮಿಲನ್  ಎಂ.ಜಿ ,ತಂದೆ ಗಿರಿ ಗಣೇಶ್ ಎಂ.ಕೆ ಪ್ರಾಯ 26ವéರ್ಷ , ಆಟೋ ಚಾಲಕ ವೃತ್ತಿ, ವಾಸ ಚೈನ್ ಗೇಟ್ ಹತ್ತಿರ ಮಡಿಕೇರಿ,

ಬಂಧಿತ ಆರೋಪಿಗಳ ಪೈಕಿ;

  • ನಿಸಾರ್ ಅಹಮದ್, ತಂದೆ ಚಾಂದ್ ಪಾಷಾ ಈತನನ್ನು ವಿರಾಜಪೇಟೆ ನಗರ ಪೊಲಿಸ್ ಠಾಣೆ ಮೊ.ಸಂ 147/2007 ಕಲಂ 8(ಸಿ), 2 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ಈ ಪ್ರಕರಣದಲ್ಲಿ ದಸ್ತಗಿರಿ ಮಾಡಲಾಗಿರುತ್ತದೆ ಪ್ರಸ್ತುತ ಸದರಿ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.
  • ಎ.ಎಸ್.ಸಾದಿಕ್, ತಂದೆ ಏಜಾಸ್ ಈತನು ವಿರಾಜಪೇಟೆ ನಗರ ಪೊಲಿಸ್ ಠಾಣೆ ಮೊ.ಸಂ 105/2015 ಕಲಂ 341,143,188,353 ರೆ/ವಿ 34 ಐ.ಪಿ.ಸಿ ಪ್ರಕಣದಲ್ಲಿ ಆರೋಪಿಯಾಗಿರುತ್ತಾನೆ ಸದರಿ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

          ದಾಳಿಯ ಸಮಯದಲ್ಲಿ ಒಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದು ಆತನ ಪತ್ತೆಯ ಬಗ್ಗೆ ಕ್ರಮ ಕೈಗೊಳ್ಳಲಾಗಿರುತ್ತದೆ. ಬಂಧಿತರಿಂದ  9 ಕೆ.ಜಿ 322 ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ 3 ಲಕ್ಷ, ನಗದು ಹಣ 1,99,670/- ಮತ್ತು 11 ವಿವಿಧ ಕಂಪನಿಗಳ ಮೊಬೈಲ್ ಅಂದಾಜು ಮೌಲ್ಯ 1 ಲಕ್ಷ , ಒಂದು ಮಾರುತಿ ರಿಟ್ಜ್ ಕಾರು  ( ಕೆಎ-12-ಜೆಡ್-4620, ಒಂದು ಇಟಿಯೋಸ್ ಕಾರು(ಕೆಎ-04-ಡಿ-5905, ಒಂದು ಮಾರುತಿ ಸೆಲೆರಿಯೋ ಕಾರು(ಕೆಎಲ್-58-ವಿ-9220) ,ಒಂದು ಇನ್ವೆಡರ್ ಜೀಪು(ಕೆಎ-34-ಎಂ-4850,ಒಂದು ಮಾರುತಿ ಒಮ್ನಿ  ವ್ಯಾನ್(ಕೆಎ-12-ಎಂ-7727), ಒಂದು ಆಟೋ ರಿಕ್ಷಾ(ಕೆಎ-12-ಬಿ-3752) ಮತ್ತು ಒಂದು ಹಿರೋ ಮೆಸ್ಟ್ರೋ ಸ್ಕೂಟರ್(ಕೆಎ-12-ಆರ್-6785)  ಸೇರಿದಂತೆ ಒಟ್ಟು 20ಲಕ್ಷ ಮೌಲ್ಯದ ವಾಹನಗಳು ವಶಪಡಿಸಿಕೊಂಡಿದ್ದು , ಅಮಾನತ್ತುಪಡಿಸಿಕೊಂಡ  ಮಾಲುಗಳ ಒಟ್ಟು ಮೌಲ್ಯ  ಅಂದಾಜು 26 ಲಕ್ಷಗಳಾಗಿರುತ್ತದೆ.

  (ಲಾಕ್ ಡೌನ್ ಹಿನ್ನಲೆಯಲ್ಲಿ ಮುಖ್ಯ ಆರೋಪಿ ಸುಂಕದಕಟ್ಟೆಯ ನಿಸಾರ್ ಅನಾರೋಗ್ಯ ನಿಮಿತ್ತ ಚಿಕಿತ್ಸೆಗೆಂದು ವ್ಯಕ್ತಿಯೊಬ್ಬರ ಹೆಸರಿನಲ್ಲಿ ಅನ್ ಲೈನ್ ಪಾಸ್  ಪಡೆದು ಮೈಸೂರಿನಿಂದ ಮಾದಕ ವಸ್ತು ಗಾಂಜಾವನ್ನು  ಕಾರಿನಲ್ಲಿ ತಂದು ಜಿಲ್ಲಾ ವ್ಯಾಪ್ತಿಯ ಸ್ಥಳೀಯ ಗಾಂಜಾ ಮಾರಾಟಗಾರರಿಗೆ (ಪೆಡ್ಲರ್ಸ್) ವಿತರಣೆ ಮಾಡುತ್ತಿರುವುದು ತಿಳಿದುಬಂದಿರುತ್ತದೆ) 

????????????????????????????????????

         ವಿರಾಜಪೇಟೆ ತಾಲೋಕು ತಹಶಿಲ್ದಾರ್ ನಂದೀಶ್ರವರ ಸಮಕ್ಷಮದಲ್ಲಿ ನಡೆದ ಕಾಯರ್ಾಚರಣೆಯಲ್ಲಿ ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕರಾದ ಸಿ.ಟಿ ಜಯಕುಮಾರ್ , ವಿರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೇಗೌಡ, ಜಿಲ್ಲಾ ಅಪರಾಧ ಪತ್ತೆ ದಳದ ಪ್ರಭಾರ ನಿರೀಕ್ಷಕ ಹೆಚ್.ವಿ ಚಂದ್ರಶೇಖರ್, ಉಪ ನಿರೀಕ್ಷಕರುಗಳಾದ ಮರಿಸ್ವಾಮಿ, ಬೋಜಪ್ಪ ಮತ್ತು ಡಿಸಿಐಬಿ ಸಿಬ್ಬಂದಿಗಳಾದ  ಎಎಸ್ಐ ಹಮೀದ್, ಕೆ.ಎಸ್ ಅನಿಲ್ ಕುಮಾರ್, ವಿ.ಜಿ ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್ ವಸಂತ,  ಎಂ.ಎನ್ ನಿರಂಜನ್, ಬಿ.ಜೆ ಶರತ್ ರೈ, ಶ್ರೀಮತಿ ಎಂ.ಬಿ ಸುಮತಿ, ಯು.ಎ ಮಹೇಶ್ ಹಾಗೂ ವಿರಾಜಪೇಟೆ ನಗರ ಠಾಣೆಯ ಎಎಸ್ಐ ಶ್ರೀಧರ್, ಲೊಕೇಶ್  ಚಾಲಕರಾದ  ಶಶಿಕುಮಾರ್, ಪ್ರವೀಣ್ ರವರುಗಳು ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಅಪರಾಧ ಸಿಬ್ಬಂದಿಗಳಾದ ನಾಗರಾಜ್ ಕಡಗಣ್ಣನವರ್, ದಿನೇಶ್, ಪ್ರವೀಣ್, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ಸೆಲ್ ನ ಸಿ.ಕೆ ರಾಜೇಶ್ , ಎಂ.ಎ ಗಿರೀಶ್  ರವರು ಪಾಲ್ಗೊಂಡಿದ್ದು ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

        ಮಾದಕ ವಸ್ತುಗಳ ಅಕ್ರಮಚಟುವಟಿಕೆಗಳಲ್ಲಿ ಬಾಗಿಯಾಗಿರುವವರ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯು ನಿರಂತ ನಿಗಾ ಇಟ್ಟಿದ್ದು  ಯಾವುದೇ ವ್ಯಕ್ತಿಗಳು ಮಾದಕ ವಸ್ತುಗಳ ಮಾರಾಟ, ಹೊಂದಿರುವುದು, ಹಂಚುವುದು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗಿರುವುದು ಪತ್ತೆಯಾದಲ್ಲಿ ಅಂತಹವರ ಮೇಲೆ ಕಠಿಣ ಕಾನೂನು  ಕ್ರಮವನ್ನು ಕೈಗೊಳ್ಳಲಾಗುವುದು. ಪ್ರಮುಖವಾಗಿ ಯುವಕರು ಹಾಗೂ ವಿದ್ಯಾರ್ಥಿಗಳು ಗಾಂಜಾ ಹಾಗೂ ಇನ್ನಿತರ ಮಾದಕವಸ್ತುಗಳ ಸೇವನೆಯಿಂದ ದೂರವಿರಬೇಕು ಎಂಬುದಾಗಿ ಈ ಮೂಲಕ ತಿಳಿಸಲಾಗಿದೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ, ಆರೋಪಿಗಳ ಬಂಧನ:

        ಮಡಿಕೇರಿ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಮಾಡಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

        ಮಡಿಕೇರಿ ನಗರದ ದಾಸವಾಳ ರಸ್ತೆಯಲ್ಲಿ ಕಪ್ಪು ಬಣ್ಣದ ಸ್ಯಾಂಟ್ರೋ ಕಾರಿನಲ್ಲಿ 03 ಜನ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ಸಿಕ್ಕಿದ ಮಾಹಿತಿಯ ಮೇರೆಗೆ ದಿನಾಂಕ: 19-05-2020 ರಂದು ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರ ನೇತೃತ್ವದ ತಂಡವು ದಾಳಿ ನಡೆಸಿ ಮಡಿಕೇರಿಯ ದಾಸವಾಳ ರಸ್ತೆಯಲ್ಲಿ ಪ್ರಕಾಶ್ ಎಂಬುವವರ ಮನೆಯ ಮುಂಭಾಗ ರಸ್ತೆಯಲ್ಲಿ ನಿಂತಿದ್ದ ಕೆ.ಎ.02 ಎಂ.ಪಿ. 5999 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಸ್ಯಾಂಟ್ರೋ ಕಾರಿನಲ್ಲಿ ತಪಾಸಣೆ ನಡೆಸಿ 01 ಕೆ.ಜಿ. 15 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡು ಮಡಿಕೇರಿ ನಗರದ ಮಹದೇವಪೇಟೆ ನಿವಾಸಿ ಎಂ.ಹೆಚ್.ಸಫ್ವಾನ್, ಮಡಿಕೇರಿ ಗಣಪತಿ ಬೀದಿ ನಿವಾಸಿ ಎಂ.ಎ.ಇಮ್ರಾನ್ ಮತ್ತು ಮಡಿಕೇರಿ ಶಾಸ್ತ್ರಿ ನಗರದ ನಿವಾಸಿ ಎಂ.ಹೆಚ್. ಇಮ್ರಾನ್ @ ಇಂಬಾ ಎಂಬುವವರನ್ನು ದಸ್ತಗಿರಿ ಮಾಡಿರುತ್ತಾರೆ.

????????????????????????????????????

            ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ರವರ ನೇತೃತ್ವದ ಮಡಿಕೇರಿ ನಗರ ಪೊಲೀಸ್ ಠಾಣಾ ಪಿಎಸ್ಐ ಅಂತಿಮ ಎಂ.ಟಿ, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಹೆಚ್.ಎಸ್.ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಅರುಣ್ ಕುಮಾರ್ ಬಿ.ಜಿ, ಸುನೀಲ್ ಬಿ.ಓ., ನಂದಕುಮಾರ್, ಎಲ್.ಎಸ್.ಶಶಿಕುಮಾರ್ ರವರುಗಳನ್ನು ಒಳಗೊಂಡ ತಂಡವು ಪಾಲ್ಗೊಂಡಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಹಲ್ಲೆ ಪ್ರಕರಣ

            ದಿನಾಂಕ: 16-05-2020 ರಂದು ಸೋಮವಾರಪೇಟೆ ತಾಲ್ಲೂಕು ನೀರುಗುಂದ ಗ್ರಾಮದ ನಿವಾಸಿ ವಿನೋದ್  ಎಂಬುವವರು ಕೊಡ್ಲಿಪೇಟೆ ಮುಖ್ಯ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಮಂಜು, ಪ್ರದೀಪ್, ರಾಜೇಶ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕಾರನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ವಿನೋದ್ ರವರು ದಿನಾಂಕ: 19-05-2020 ರಂದು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 19-05-2020 ರಂದು ವಿರಾಜಪೇಟೆ ತಾಲ್ಲೂಕು ಬೇಗೂರು ಗ್ರಾಮದ ನಿವಾಸಿ ಕಾಳ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಮಣಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಬೆದರಿಕೆ ಹಾಕಿರುವುದಾಗಿ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 19-05-2020 ರಂದು ಕುಟ್ಟ ಠಾಣೆ ಪಿಎಸ್ಐ ಚಂದ್ರಪ್ಪ ರವರಿಗೆ ದೊರೆತ ಖಚಿತ ಮಾಹಿತಿ ಮೇರೆ ಸಿಬ್ಬಂದಿಯವರೊಂದಿಗೆ ವಿರಾಜಪೇಟೆ ತಾಲ್ಲೂಕು ಕೆ.ಬಾಡಗ ಗ್ರಾಮಕ್ಕೆ ತೆರಳಿ ಅಯ್ಯಣ್ಣ @ ಶಂಭು ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿ ಹಾಗೂ ಮದ್ಯವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.     

ಕೊಲೆ ಯತ್ನ ಪ್ರಕರಣ

            ದಿನಾಂಕ: 19-05-2020 ರಂದು ವಿರಾಜಪೇಟೆ ಪಟ್ಟಣದ ವಿಜಯನಗರ ನಿವಾಸಿ ಯಾಕೂಬ್ ಎಂಬುವವರ ಅಂಗಡಿಯ ಮುಂದೆ ಸಜೀರ್ ಮತ್ತು ಅಪ್ಪಿ ಎಂಬುವವರು ಜಗಳಮಾಡುತ್ತಿದ್ದುದನ್ನು ತಡೆದು ಸಮಾಧಾನಪಡಿಸಿದ್ದರು. ಇದೇ ವಿಚಾರದಲ್ಲಿ ಸಜೀರ್ ನು ಇಬ್ಬರು ಸ್ನೇಹಿತರೊಂದಿಗೆ ಸಂಜೆ ಯಾಕೂಬ್ ರವರು ಮನೆಯ ಬಳಿ ಹೋಗಿ ಯಾಕೂಬ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ

            ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಎಂ.ಜಿ ಕಾಲೋನಿ ನಿವಾಸಿ ಮೋಹನ್ ಎಂಬುವವರು ಕಳೆದ 3 ತಿಂಗಳಿನಿಂದ ಕಾಣೆಯಾಗಿದ್ದು, ಸಂಬಂಧಿಕರು ಹಾಗೂಇತರ ಕಡೆಗಳಲ್ಲಿ ವಿಚಾರಿಸಿದರೂ ಇವರೆಗೂ ಪತ್ತೆಯಾಗದೇ ಇದ್ದಿ ಈ ಬಗ್ಗೆ ತಿಮ್ಮ ಎಂಬುವವರು ದಿನಾಂಕ: 19-05-2020 ರಂದು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.