Crime News

ಅಕ್ರಮ ಮರಳು ಸಾಗಾಟ ಪ್ರಕರಣ

            ದಿನಾಂಕ: 20-05-2020 ರಂದು ಪೊನ್ನಂಪೇಟೆ ಠಾಣೆ ಪಿಎಸ್ಐ ಡಿ.ಕುಮಾರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆ ಸಿಬ್ಬಂದಿಯವರೊಂದಿಗೆ ಬೇಗೂರು ಗ್ರಾಮಕ್ಕೆ ತೆರಳಿ ಕೆಎಲ್-21-ಎಫ್-4111 ರ ಟಿಪ್ಪರ್ ಲಾರಿಯಲ್ಲಿ ಅಕ್ರಮಾವಾಗಿ  ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವೈಷಮ್ಯ, ವ್ಯಕ್ತಿಯ ಕೊಲೆ.

            ದಿನಾಂಕ: 20-05-2020 ರಂದು ವಿರಾಜಪೇಟೆ ತಾಲ್ಲೂಕು ಬಿಳುಗುಂದ ಗ್ರಾಮದ ನಿವಾಸಿ ಸುರೇಶ್ ಎಂಬುವವರನ್ನು ಅದೇ ಗ್ರಾಮದ ನಿವಾಸಿ ಕುಮಾರ ಎಂಬುವವರು ಕುಟುಂಬದ ಆಸ್ತಿ ವಿಚಾರದಲ್ಲಿ ವೈಷಮ್ಯದಿಂದ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡಿದ್ದು ಈ ಬಗ್ಗೆ ಮೃತರ ಮಗ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.