Crime News

ಮನುಷ್ಯ ಕಾಣೆ

ಸೋಮವಾರಪೇಟೆ ಠಾಣಾ ಸರಹದ್ದಿನ ಕೆಂಚಮ್ಮನ ಬಾಣೆ ಕುಸುಬೂರು ಗ್ರಾಮದ ನಿವಾಸಿ ಶ್ರೀಮತಿ ಮಂಜುಳ ಎಂಬವರ ಪತಿ ಹೆಚ್.ವಿ. ಮಂಜುನಾಥ ಎಂಬವರು ದಿನಾಂಕ 19-5-2020 ರಂದು ತಮ್ಮ ಮನೆಯಿಂದ ಹೋಗಿ ಮತ್ತೆ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಶ್ರೀಮತಿ ಮಂಜುಳರವರು ನೀಡಿದ ದೂರಿನನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ನಡೆಸಿ ಕೊಲೆಗೆ ಯತ್ನ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಪಾರ್ವತಿ ಎಂಬವರು ದಿನಾಂಕ 22-5-2020 ರಂದು ತಮ್ಮ ಮನೆಯಲ್ಲಿರುವಾಗ್ಗೆ ಆಕೆಯ ತಂಗಿಯ ಗಂಡ ಸುಬ್ರಮಣಿ ಹಾಗು ಆತನ ಮಗ ಸಂದೀಪ್ ರವರುಗಳು ಮನೆಗೆ ಬಂದು ಪಾರ್ವತಿಯವರ ಮೇಲೆ ಕಬ್ಬಿಣದ ರಾಡಿನಿಂದ ಹಾಗು ಕತ್ತಿಯಿಂದ  ಹಲ್ಲೆ ಮಾಡಿದ್ದು ತಡೆಯಲು ಹೋದ ಪುಷ್ಪಾರವರ ಮೇಲೂ ಸಹ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಾಗದ ವಿಚಾರದಲ್ಲಿ ಜಗಳ

ಸೋಮವಾರಪೇಟೆ ತಾಲೋಕು ಮುಳ್ಳೂರು ಗ್ರಾಮದ ದಿನೇಶ ಎಂಬವರು ದಿನಾಂಕ 15-5-2020 ರಂದು ಮನೆಯಲ್ಲಿರುವಾಗ  ಅದೇ ಗ್ರಾಮದ ಲವ ಹಾಗು ಇತರೆ 5 ಜನರು ಸೇರಿ ದಿನೇಶರವರ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಉಚಿತ ಪಡಿತರ ಅಕ್ರಮ ಮಾರಾಟ

ನ್ಯಾಯಬೆಲೆ ಅಂಗಡಿಯ ಮೂಲಕ ಕಾರ್ಡ್ ದಾರರಿಗೆ ಉಚಿತವಾಗಿ ಹಂಚಿಕೆ ಮಾಡುವ ಅಕ್ಕಿಯನ್ನು ಬೆಮ್ಮತ್ತಿ ಗ್ರಾಮದ ನಿವಾಸಿ ಆಸೀಫ್ ಎಂಬವರು ಅಕ್ರಮವಾಗಿ ತಮ್ಮ ಕಾರಿನಲ್ಲಿ ಸಾಗಾಟ ಮಾಡಿ ಗೋಣಿಕೊಪ್ಪದಲ್ಲಿರುವ ಸಿಹೆಚ್ ಸೂಪರ್ ಮಾರ್ಟೆಟ್ ಮಾಲೀಕರಾದ ಶಮೀರ್ ರವರಿಗೆ ಮಾರಾಟ ಮಾಡಿದ್ದನ್ನು ವಿರಾಜಪೇಟೆ ತಾಲೋಕು ಆಹಾರ ನಿರೀಕ್ಷಕರಾದ ಎಸ್. ಚಂದ್ರನಾಯಕ್ ರವರು ದಿನಾಂಕ 22-5-2020 ರಂದು ಪತ್ತೆ ಹಚ್ಚಿ 60 ಕೆ.ಜಿ. ಅಕ್ಕಿ ಹಾಗು ವಾಹನವನ್ನು ವಶಕ್ಕೆ ಪಡೆದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಷೇದಾಜ್ಞೆ ಉಲ್ಲಂಘಿನೆ ಪ್ರಕರಣ ದಾಖಲು

ಕೋವಿಡ್-19 ಸಂಬಂಧ ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಸಹ ದಿನಾಂಕ 22-5-2020 ರಂದು ಯಾವುದೇ ಅನುಮತಿ ಪಡೆಯದೆ ನಿಷೇದಾಜ್ಞೆಯನ್ನು ಉಲ್ಲಂಘಿಸಿ ತಮಿಳುನಾಡಿನಿಂದ  ಅಕ್ರಮವಾಗಿ ಕಣ್ಣನ್, ಚಿನ್ನ ತಂಬಿ, ಅಂಜಲಿ ಹಾಗು ಸತೀಶ್ ಎಂಬವರು ಗೋಣಿಕೊಪ್ಪ ಅತ್ತೂರು ಗ್ರಾಮದ ನಲ್ಲುಕೋಟೆ ಟಾಟಾ ಎಸ್ಟೇಟಿಗೆ ಬಂದಿದ್ದನ್ನು ಹಾತೂರು ಗ್ರಾಮದ ಪಂಚಾಯ್ತಿ ಅಧಿಕಾರಿಯವರು ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.