Crime News

ರಸ್ತೆ ಅಫಘಾತ

ದಿನಾಂಕ 23/05/2020ರಂದು ಮೂರ್ನಾಡು ಬಳಿಯ ಹೊದ್ದೂರು ಗ್ರಾಮದ ವಾಟೆಕಾಡು ಪೈಸಾರಿ ನಿವಾಸಿ ಅಬ್ಬಾಸ್ ಸಿ.ಎಂ. ಎಂಬವರ ಮಗ ಮೊಹಮ್ಮದ್ ಆದಿ ಎಂಬ ಬಾಲಕನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಾಟೆಕಾಡು ಪೈಸಾರಿ ನಿವಾಸಿ ಪಿ.ಜಿ.ಧನುಷ್ ಎಂಬವರು ಅವರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೊಹಮದ್ ಆದಿ ಗೆ ಡಿಕ್ಕಿಪಡಿಸಿದ ಪರಿಣಾಮ ಮೊಹಮದ್ ಆದಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 23/05/2020ರಂದು ಮಡಿಕೇರಿ ಬಳಿಯ ಕೆ. ಬಾಡಗ ನಿವಾಸಿ ಐ.ಎಂ.ರಮೇಶ ಎಂಬವರ ಅಣ್ಣ ತಿಮ್ಮಯ್ಯ ಎಂಬವರು ಮದ್ಯಪಾನ ಮಾಡಿಕೊಂಡು ಬಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ರಮೇಶ್‌ರವರ ಮಗನಿಗೆ ಹೊಡೆದು ಮನೆಗೆ ಕಲ್ಲು ಹೊಡೆಯುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ತಿಮ್ಮಯ್ಯನವರು ಅಶ್ಲೀಲ ಶಬ್ದಗಳಿಂದ ರಮೇಶ್‌ರವರನ್ನು ಬೈದು ಸೌದೆ ತುಂಡಿನಿಂದ ರಮೇಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ದಿನಾಂಕ 09/05/2020ರಿಂದ 23/05/2020ರ ನಡುವೆ ಕುಟ್ಟ ಬಳಿಯ ಬಾಡಗ ನಿವಾಸಿ ಕಾಳಮಂಡ ನಾಚಪ್ಪ ಎಂಬವರ ಅತ್ತಿಗೆ ಪೊನ್ನಮ್ಮ ಎಂಬವರ ಮನೆಯ ಹಿಂದಿನ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ನುಗ್ಗಿ ಮನೆಯೊಳಗೆ ಪೆಟ್ಟಿಗೆಯಲ್ಲಿಟ್ಟಿದ್ದ ಸುಮಾರು ರೂ. 4 ರಿಂದ 5 ಸಾವಿರ ಹಣವನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.