Crime News

ರಬ್ಬರ್ ಕಳವು ಪ್ರಕರಣದ ಆರೋಪಿಗಳ ಬಂಧನ,

ರಬ್ಬರ್ ಶೀಟ್ ಮತ್ತು ಸ್ಕ್ರಾಪ್ ಕಳವು ಮಾಡಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ತಾಲ್ಲೂಕು ಪಿ.ಪೆರಾಜೆ ಗ್ರಾಮದ ನಿವಾಸಿ ಆರ್.ಎ ಶರತ್ ಎಂಬುವವರು ಅವರ ರಬ್ಬರ್ ತೋಟದಿಂದ ಟ್ಯಾಪಿಂಗ್ ಮಾಡಿ ಸಂಗ್ರಹಿಸಿ ಇಟ್ಟಿದ್ದ 2,10,000 ರೂ ಬೆಲೆಬಾಳುವ 1300 ಕೆ.ಜಿ ರಬ್ಬರ್ ಶೀಟ್ ಮತ್ತು 900 ಕೆಜಿಯಷ್ಟು ರಬ್ಬರ್ ಸ್ಕ್ರ್ಯಾಪ್ ನ್ನು ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರು  ದಿನಾಂಕ: 21-05-2020 ರಂದು ರಾತ್ರಿ ಕಳವು ಮಾಡಿ ಒಂದು ಪಿಕ್ ಅಪ್ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 24-05-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡು ದಿನಾಂಕ: 24-05-2020 ರಂದು ಆರೋಪಿಗಳಾದ ಕೇರಳ ರಾಜ್ಯದ ಕೊಟ್ಟಪಾಡ ಗ್ರಾಮದ ಚೋಲಾಯಿಲ್ ಹೌಸ್ ನಿವಾಸಿ ಸಿ. ರಜನೀಶ್, ತೊಟ್ಟತ್ತೀಲ್ ಹೌಸ್ ನಿವಾಸಿ ಟಿ.ಕೆ ಅರುಣ್ ಕುಮಾರ್ ಮತ್ತು ಲಾಲಂ ಗ್ರಾಮದ ನಿವಾಸಿ ಸಿರಿಯಾಕ್ ಕುರಿಯನ್ ಎಂಬುವವರನ್ನು ದಸ್ತಗಿರಿ ಮಾಡಿ ಕಳವು ಮಾಡಿ ಸಾಗಾಟ ಮಾಡುತ್ತಿದ್ದ ರಬ್ಬರ್ ಶೀಟ್ ಮತ್ತು ಸ್ಕ್ರ್ಯಾಪ್ ನ್ನು ಕೃತ್ಯಕ್ಕೆ ಬಳಸಿದ ಕೆಎ-21-ಎ-9114 ರ ಪಿಕ್ ಅಪ್ ವಾಹನದೊಂದಿಗೆ ಅಮಾನತ್ತುಪಡಿಸಿಕೊಂಡಿರುತ್ತಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ಸಿ.ಪಿ.ಐ ರವರಾದ ದಿವಾಕರ್ ಸಿ.ಎನ್, ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್ ಹೆಚ್.ವಿ, ಸಿಬ್ಬಂದಿಯವರಾದ ತೀರ್ಥಕುಮಾರ್ ಎ.ಬಿ, ಪ್ರೇಮ್ ಕುಮಾರ್ ಎಸ್.ಜಿ, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್, ಸೊಮಶೇಖರ, ಅನಿಲ್, ಪ್ರವೀಣ್ ಕುಮಾರ್ ಮತ್ತು ನಾಗರಾಜ್ ರವರು ಪಾಲ್ಗೊಂಡಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಕಳವು ಪ್ರಕರಣ, ಆರೋಪಿ ಬಂಧನ:

ಮಡಿಕೇರಿ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ಮನೆಯೊಂದರಲ್ಲಿ  ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ: 15-03-2020 ರಂದು ಮಡಿಕೇರಿ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ನಿವಾಸಿ ಶಶಿಧರ ಎಂಬುವವರು ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ಮನೆಯಲ್ಲಿದ್ದ ಲಾಕರ್ ನಲ್ಲಿ ಇಟ್ಟಿದ್ದರು. ನಂತರ ದಿನಾಂಕ: 13-05-2020 ರಂದು ಲಾಕರ್ ತೆಗೆದು ನೋಡಿದಾಗ ಅದರಲ್ಲಿದ್ದ 73,500 ಬೆಲೆಬಾಳುವ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡು ಪ್ರಕರಣದ ಆರೋಪಿ ಇಬ್ನಿವಳವಾಡಿ ಗ್ರಾಮದ ನಿವಾಸಿ ಮೋನಿಶ್ ಎಂಬಾತನನ್ನು ದಸ್ತಗಿರಿ ಮಾಡಿ ಬಂಧಿತನಿಂದ ಕಳ್ಳತನ ಮಾಡಿದ್ದ 96,500 ರೂ ಮೌಲ್ಯದ ಚಿನ್ನಾಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

          ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ಸಿ.ಪಿ.ಐ ರವರಾದ ದಿವಾಕರ್ ಸಿ.ಎನ್, ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್ ಹೆಚ್.ವಿ, ಸಿಬ್ಬಂದಿಯವರಾದ ತೀರ್ಥಕುಮಾರ್ ಎ.ಬಿ, ಪ್ರೇಮ್ ಕುಮಾರ್ ಎಸ್.ಜಿ, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್, ಪ್ರವೀಣ್ ಕುಮಾರ್ ಮತ್ತು ನಾಗರಾಜ್ ರವರು ಪಾಲ್ಗೊಂಡಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಅಕ್ರಮ ಮಾರಾಟಕ್ಕಾಗಿ ಮದ್ಯ ಸಾಗಾಟ ಪ್ರಕರಣ; ಆರೋಪಿಗಳ ಬಂಧನ.

ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ವಾಹನ ಹಾಗೂ ಅಕ್ರಮ ಮದ್ಯ ಸಮೇತ ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರ ತಂಡ ಯಶಸ್ವಿಯಾಗಿದೆ.
ದಿನಾಂಕ: 25-05-2020 ರಂದು ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕೆಎ-12-ಎನ್-3026 ರ ಕಾರಿನಲ್ಲಿ ಸೋಮವಾರಪೇಟೆ ತಾಲ್ಲೂಕು ಗರಗಂದೂರು ಗ್ರಾಮದ ಅಂಬೇಡ್ಕರ್ ಕಾಲೋನಿಗೆ ಸಾಗಿಸುತ್ತಿದ್ದ ಗರಗಂದೂರು ಗ್ರಾಮದ ನಿವಾಸಿ ಹೆಚ್.ಕೆ ಲವ, ಕಾರು ಚಾಲಕ ಮಡಿಕೇರಿ ನಿವಾಸಿ ಫ್ರಾನ್ಸಿಸ್, ಮಡಿಕೇರಿ ಕಾವೇರಿ ವೈನ್ಸ್ ಕ್ಯಾಷಿಯರ್ ಸುರೇಶ್ ಎಂಬುವವರನ್ನು ದಸ್ತಗಿಸಿ ಮಾಡಿ 42,000 ರೂ ಮೌಲ್ಯದ ಸುಮಾರು 106 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.


ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ.ಮಹೇಶ್ ರವರ ನೇತೃತ್ವದಲ್ಲಿ ಸುಂಟಿಕೊಪ್ಪ ಠಾಣೆ ಪಿಎಸ್ಐ ತಿಮ್ಮಪ್ಪ, ಸಿಬ್ಬಂದಿಯವರಾದ ಪ್ರಕಾಶ್, ಸಂಪತ್ ರೈ, ಲೋಕೇಶ್, ದಯಾನಂದ, ಉಮೇಶ್, ಜಿ.ಸಿ ಸಂಪತ್ ರವರು ಪಾಲ್ಗೊಂಡಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಹಲ್ಲೆ ಪ್ರಕರಣ

ದಿನಾಂಕ: 24-05-2020 ರಂದು ಮಡಿಕೇರಿ ತಾಲ್ಲೂಕು ಮಕ್ಕಂದೂರು ಗ್ರಾಮದ ನಿವಾಸಿ ವಿ.ಎನ್ ಸುಬ್ಬಯ್ಯ,ಚಂಗಪ್ಪ, ಕಾವೇರಪ್ಪ ಮತ್ತು ಅದೇ ಗ್ರಾಮದ ನಿವಾಸಿಗಳಾದ ವಿನಯ್, ವಿಕಾಸ್ ಎಂಬುವವರು ಹಳೆ ವೈಷಮ್ಯದಿಂದ ಪರಸ್ಪರ ದೊಣ್ಣೆಯಿಂದ ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 25-05-2020 ರಂದು ಶ್ರೀಮಂಗಲ ಠಾಣೆ ಪಿಎಸ್ಐ ದಿನೇಶ್ ಕುಮಾರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ವಿರಾಜಪೇಟೆ ತಾಲ್ಲೂಕು ಬಾಡಗರಕೇರಿ ಗ್ರಾಮಕ್ಕೆ ತೆರಳಿ ಅಣ್ಣೀರ ಪ್ರದೀಪ್ ಎಂಬುವವರು ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 24-05-2020 ರಂದು ವಿರಾಜಪೇಟೆ ಪಟ್ಟಣದ ಅಯ್ಯಪ್ಪಬೆಟ್ಟ ನಿವಾಸಿಗಳಾದ ಮಣಿಕಂಠ, ಸಜೀವ ಮತ್ತು ಜಯರಾಮ್, ಅನೀಶ್, ಮೊಹಮ್ಮದ್ ಎಂಬುವವರು ಹಳೆ ವೈಷಮ್ಯದಿಂದ ಪರಸ್ಪರ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.