Crime News

ಕಳವು ಪ್ರಕರಣ

                ದಿನಾಂಕ: 19-05-2020 ರಂದು ಮಡಿಕೇರಿ ತಾಲ್ಲೂಕು ಯವಕಪಾಡಿ ಗ್ರಾಮದ ನಿವಾಸಿ ಶ್ರೀಮತಿ ಕರ್ತಂಡ ಮಾಚವ್ವ ಎಂಬುವವರು ಅವರ ಮನೆಗೆ ಬೀಗ ಹಾಕಿ ಅವರ ಮಗನ ಮನೆ ಗೋಣಿಕೊಪ್ಪಕ್ಕೆ ಹೋಗಿದ್ದರು. ದಿನಾಂಕ: 26-05-2020 ರಂದು ವಾಪಸ್ಸು ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳವು ಒಡೆದು ಒಳನುಗ್ಗಿ ಮನೆಯಲ್ಲಿಟ್ಟಿದ್ದ 90,000 ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣ

ದಿನಾಂಕ: 25-05-2020 ರಂದು ಮಡಿಕೇರಿ ತಾಲ್ಲೂಕು ಕಿರುಂದಾಡು ಗ್ರಾಮದ ರಾಧಾಕೃಷ್ಣ ಎಂಬುವವರ ಲೈನ್ ಮನೆಯಲ್ಲಿ ವಾಸವಿರುವ ಪುಷ್ಪ ಎಂಬುವರನ್ನು ಅವರ 2ನೇ ಗಂಡ ಸಿದ್ದು ಎಂಬುವವರು ಯಾವುದೋ ವಿಚಾರಕ್ಕೆ ಜಗಳವಾದಾಗ ಪುಷ್ಪ ರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು ಈ ಬಗ್ಗೆ ಮೃತರ ಮಗಳು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 26-05-2020 ರಂದು ಮಡಿಕೇರಿ ತಾಲ್ಲೂಕು ಚೆರಿಯಪರಂಬು ಗ್ರಾಮದ ನಿವಾಸಿ ಸಫೀಕ್ ಎಂಬುವವರಿಗೆ ಅದೇ ನಾಪೋಕ್ಲು ಗ್ರಾಮದ ಕಲ್ಲುಮೊಟ್ಟೆ ನಿವಾಸಿಗಳಾದ ಅಬ್ದುಲ್ಲ, ಜಮಾಲ್, ಮುಜಮ್ಮಿಲ್, ಶೌಕತ್, ಸಿದ್ದೀಕ್, ಜವಾದುಲ್ಲ, ಆಶಿಪ್, ಬಷೀರ್  ಮತ್ತು ಇತರರು ಬೈಕ್ ಗಳಲ್ಲಿ ಹೋಗಿ ಅಕ್ರಮ ಕೂಟ ಕಟ್ಟಿಕೊಂಡು ಮನೆಯೊಳಗೆ ನುಗ್ಗಿ ಅವಾಚ್ಯ ಪದಗಳಿಂದ ಬೈದು, ಹಲ್ಲೆ ಮಾಡಿ ಕೊಲೆ ಬೆದರಿಕೆ  ಹಾಕಿದ್ದು ಈ ಬಗ್ಗೆ ಗಾಯಾಳುವಿನ ತಾಯಿ ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 26-05-2020 ರಂದು ವಿರಾಜಪೇಟೆ ತಾಲ್ಲೂಕು ಚಾಮಿಯಾಲ ಗ್ರಾಮದ ನಿವಾಸಿ ರಶೀದ್ ಎಂಬುವವರು ಅವರ ಪತ್ನಿ ಮತ್ತು ತಮ್ಮ ರಫೀಕ್ ರವರೊಂದಿಗೆ ಅವರ ಗದ್ದೆಯ ಕಡೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ನಿಜಾಮುದ್ದೀನ್, ಅಶ್ರಫ್ ಮತ್ತು ಹಂಸ ಎಂಬುವವರು ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಕಲ್ಲಿನಿಂದ, ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ದಿನಾಂಕ: 25-05-2020 ರಂದು ಸೋಮವಾರಪೇಟೆ ತಾಲ್ಲೂಕು ಹಾರಂಗಿ ಗ್ರಾಮದ ನಿವಾಸಿ ವಿಜಯಶಂಕರ್ ಎಂಬುವವರ ಎಸ್.ಬಿ.ಐ ಬ್ಯಾಂಕ್ ಖಾಯೆಯಿಂದ  ಅವರ ಅರಿವಿಗೆ ಬಾರದಂತೆ 40,000 ರೂ ಹಣವನ್ನು ತೆಗೆದು ವಂಚನೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.