Crime News

ಲಾಕ್ ಡೌನ್ ನಿಯುಮ ಉಲ್ಲಂಘನೆ  ಪ್ರಕರಣ

ದಿನಾಂಕ: 27-05-2020 ರಂದು ಮಡಿಕೇರಿ ತಾಲ್ಲೂಕು ಬೇತು ಗ್ರಾಮದ ಚೆರಿಯಪರಂಬು ರಸ್ತೆ ಜಂಕ್ಷನ್ ಬಳಿ ಬೆಂಗಳೂರು ನಿವಾಸಿಗಳಾದ ಕೆ.ಸಿ ಉಮೇಶ್, ನವೀನ್ ಕುಮಾರ್, ಪ್ರಕಾಶ್, ಬಾಬು, ಭೀಮಾಶಂಕರ್, ಅಮರನಾಥ್, ಲೀಲಾ ಪ್ರಸಾದ್  ಎಂಬುವವರು ಬೆಂಗಳೂರಿನಿಂದ ವಾಹನಗಳಲ್ಲಿ ಬಂದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮುಖಕ್ಕೆ ಮಾಸ್ಕ್ ಧರಿಸದೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ತರರಿಗೆ ಹರಡುವ ಸಂಭವವಿದ್ದರೂ ಸಹಾ ನಿರ್ಲಕ್ಷತೆ ವಹಿಸಿದ್ದು ವಿನಾ ಕಾರಣ ಜಿಲ್ಲೆಗೆ ಬಂದು ಕೋವಿಡ್-19 ಲಾಕ್ ಡೌನ್ ನಿಯಮ ಉಲ್ಲಂಘಿಸಿರುವ ಬಗ್ಗೆ ನೀಡಿದ ನಾಪೋಕ್ಲು ಪಂಚಾಯಿತಿ ಪಿ.ಡಿ.ಒ ರವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 27-05-2020 ರಂದು ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆ ಸಿಬ್ಬಂದಿಯವರೊಂದಿಗೆ ಮಡಿಕೇರಿ ತಾಲ್ಲೂಕು ಮಕ್ಕಂದೂರು ಗ್ರಾಮಕ್ಕೆ ತೆರಳಿ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ತಮ್ಮಯ್ಯ ಮತ್ತು ಇತರರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 26-05-2020 ರಂದು ವಿರಾಜಪೇಟೆ ತಾಲ್ಲೂಕು ಭದ್ರಗೊಳ ಗ್ರಾಮದ ನೆಹರು ಕಾಲೋನಿ ನಿವಾಸಿ ಸುಜೀನ್ ಮತ್ತು ಅವರ ತಾಯಿಗೆ ಅದೇ ಗ್ರಾಮದ ನಿವಾಸಿಗಳಾದ ಉಮೇಶ, ಅರುಣ, ಮಂಜು, ಪ್ರಜ್ವಲ್, ರಘು,ಮಹೇಶ್ ಎಂಬುವವರು ಹಳೆ ವೈಷಮ್ಯದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 27-05-2020 ರಂದು ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ನಿವಾಸಿ ಎಂ.ಎನ್ ಸುದೀರ್ ಎಂಬುವವರು ಅವರ ವಾಸದ ಮನೆಯ ಪಕ್ಕದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕುಟ್ಟ ಠಾಣೆ ಪಿಎಸ್ಐ ಹೆಚ್.ಜೆ ಚಂದ್ರಪ್ಪ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 27-05-2020 ರಂದು ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದ ಬೊಮ್ಮಾಡು ಪೈಸಾರಿ ನಿವಾಸಿ ಕೃಷ್ಣ ಎಂಬುವವರು ಅವರ ಮನೆಯ ಮುಂದಿನ ರಸ್ತೆಯಲ್ಲಿ ನಿಂತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಬೋಜಪ್ಪ ಮತ್ತು ಕುಮಾರ ಎಂಬುವವರು ವಿನಾ ಕಾರಣ ಜಗಳ ಮಾಡಿ ಕೈಯಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಿಟಾಚಿ ಮಗುಚಿ ಬಿದ್ದು ವ್ಯಕ್ತಿ ಸಾವು

ದಿನಾಂಕ: 27-05-2020 ರಂದು ಸೋಮವಾರಪೇಟೆ ತಾಲ್ಲೂಕು ಮೋರಿಕಲ್ಲು ಗ್ರಾಮದ ಯೂನಿಸ್ ಎಂಬುವವರು ನಡೆಸುತ್ತಿರುವ ಬೆಳ್ಯಪ್ಪ ರವರಿಗೆ ಸೇರಿದ ಕಲ್ಲುಕೋರೆಯಲ್ಲಿ ಹಿಟಾಚಿ ಚಾಲಕನಾಗಿರುವ ಜಾರ್ಕಂಡ್ ಮೂಲದ ಚಂದ್ರಕುಮಾರ್ ಎಂಬುವವರು ಹಿಟಾಚಿಯನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಹಿಟಾಚಿಯ ಪಕ್ಕದಲ್ಲಿ ನಿಂತಿದ್ದ ಅಜಯ್ ಎಂಬುವವರ ಮೇಲೆ ಬಿದ್ದ ಪರಿಣಾಮ ಅಜಯ್ ರವರು ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 27-05-2020 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ಮಧ್ಯಪೇಟೆ ನಿವಾಸಿ ಶ್ರೀಮತಿ ಜವಾರಿ ಬಾನು ಎಂಬುವವರಿಗೆ ಅವರ ಸಹೋದರ ಮನ್ಸೂರ್ ಪಾಷಾ ಮತ್ತು ಆತನ ಮಗ ಅದ್ನಾನ್ ಪಾಷಾ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.