Crime News

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ:

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಹಚ್ಚಿನಾಡು ಗ್ರಾಮದ ನಿವಾಸಿ ಚಿಟ್ಟಿಚ್ಚ ಎಂಬವರ ಪತ್ನಿ ಶ್ರೀಮತಿ ಸಿ.ರೂಪ ಎಂಬವರು ಕೆಲವು ಸಮಯದಿಂದ ಖಿನ್ನತೆಗೆ ಒಳಗಾಗಿದ್ದು, ದಿನಾಂಕ 10-6-2018 ರ ರಾತ್ರಿ ಅವರ ಮನೆಯ ಪಕ್ಕದ ತಿಮ್ಮಯ್ಯ ಎಂಬವರ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತರ ತಾಯಿ ಚೊಟ್ಟೆಕಾಳಪಂಡ ಎಂ. ಅಕ್ಕಮ್ಮ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಎಸ್. ಮುರಳಿ ಎಂಬವರು ದಿನಾಂಕ 9-6-2018 ರಂದು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಸಂಜೆ 7-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ನುಗ್ಗಿ ನಗದು ಮತ್ತು ಅಡಿಕೆ ಕಳವು:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕರಿಕೆ ಕಟ್ಟಡದಲ್ಲಿ ವ್ಯಾಪಾರ ಮಾಡಿಕೊಂಡಿರುವ ಅಹಮದ್ ನೂರಿಶ್ ರವರ ಅಂಗಡಿಗೆ ದಿನಾಂಕ 10-6-2018 ರಂದು ರಾತ್ರಿ ಯಾರೋ ಕಳ್ಳರು ಬೀಗ ಮುರಿದು ಒಳ ನುಗ್ಗಿ ಅಂಗಡಿಯಲ್ಲಿಟ್ಟದ್ದ ಅಂದಾಜು 36,000 ರೂ ಬೆಲೆಬಾಳುವ ಅಡಿಕೆ ಮತ್ತು 10,000/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕೊಲೆ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದಲ್ಲಿರುವ ಪರ್ಪಲ್ ಫಾರ್ಮ‍್ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿರುವ ಕೆಲಸಗಾರರಿಗೆ ಸದರಿ ರೆಸಾರ್ಟಿನ ಪಕ್ಕದಲ್ಲಿ ಇರುವ ರಾಜೀವ ಎಂಬವರ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು ಸದರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 27 ವರ್ಷ ಪ್ರಾಯದ ಚೆನ್ನಾಪ್ಪಾಜಿ ಎಂಬ ವ್ಯಕ್ತಿಯನ್ನು ದಿನಾಂಕ 11-6-2018 ರಂದು ರಾತ್ರಿ ಯಾರೋ ಕೊಲೆ ಮಾಡಿದ್ದು, ಈ ಕೊಲೆಯನ್ನು ಅದೇ ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ನಾಗರಾಜು ಎಂಬವನು ಮಾಡಿರುವ ಸಂಶಯವಿರುವುದಾಗಿ ಸದರಿ ರೆಸಾರ್ಟಿನ ಹೆ.ಆರ್. ಮೆನೇಜರ್ ಆಗಿರುವ ಕೆ.ದೇವಾನಂದನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.