Crime News

ಕಾಳು ಮೆಣಸು ಕಳವು ಪ್ರಕರಣ

ದಿನಾಂಕ:23-05-2020 ರಂದು ಮಡಿಕೇರಿ ತಾಲ್ಲೂಕು ಹೊದವಾಡ ಗ್ರಾಮದ ನಿವಾಸಿ ವರ್ಗೀಸ್ ಜಾನ್ ಎಂಬುವವರು ಮನೆಯ ಪಕ್ಕದಲ್ಲಿದ್ದ ಗೋದಾಮಿಗೆ ಬೀಗ ಹಾಕಿ ಗೋಣಿಕೊಪ್ಪಕ್ಕೆ ಹೋಗಿ ವಾಪಾಸ್ಸು ದಿನಾಂಕ: 28-05-2020 ರಂದು ಮನೆಗೆ ಬಂದು ನೋಡಿದಾಗ ಗೋದಾಮಿನ ಬೀಗವನ್ನು ಯಾರೋ ಕಳ್ಳರು ಮುರಿದು ಗೋದಾಮಿನಲ್ಲಿ ಇಟ್ಟಿದ್ದ 23,000 ರೂ ಮೌಲ್ಯದ ಸುಮಾರು 75 ಕೆಜಿಯಷ್ಟು ಕಾಳು ಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 28-05-2020 ರಂದು ಮಡಿಕೇರಿ ತಾಲ್ಲೂಕು ಮರಗೋಡು ಬಕ್ಕ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-09-ಇಜೆಡ್-0924 ರ ಬೈಕನ್ನು ಅದರ ಸವಾರ ಪ್ರಸಾದ್ ಎಂಬುವವರು ಮುಂದೆ ಹೋಗುತ್ತಿದ್ದ ವಾಹನವೊಂದನ್ನು ಹಿಂದಿಕ್ಕುವಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಪಿ-6614 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕಾರು ಚಾಲಕ ಸತೀಶ್ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 28-05-2020 ರಂದು ಅರೆಕಾಡು ಗ್ರಾಮದ ನೇತಾಜಿ ನಗರ ನಿವಾಸಿ ಶ್ರೀಮತಿ ಆಸ್ಮ ಎಂಬುವವರ ಮನೆಗೆ ಅದೇ ಗ್ರಾಮದ ನಿವಾಸಿಗಳಾದ ಜಮೀಲ, ಅದ್ರಮಾನ್, ಹಕೀಂ, ಮೊಹಮ್ಮದ್ ಎಂಬುವವರು ಹಳೆ ವೈಷಮ್ಯದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಆಸ್ಮ, ಮತ್ತು ಅವರ ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿ ನೋಪಡಿಸಿರುವುದಾಗಿ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.