Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ಪಣಿಎರವರ ಮುತ್ತ ಎಂಬವರ ಸಹೋದರ ಪಣಿಎರವರ ಗಣೇಶ ಎಂಬವರು ದಿನಾಂಕ 31-5-2020 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೆಂಬೇರಿ-ಕರಿಕೆ ಮುಖ್ಯ ರಸ್ತೆಯಲ್ಲಿ ದಿನಾಂಕ 31-5-2020 ರಂದು ಮೋಟಾರ್ ಸೈಕಲ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಮೋಟಾರ್ ಸೈಕಲ್ ಸವಾರ ಭಾಗಮಂಡಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ್ ರವರು ಗಾಯಗೊಂಡಿದ್ದು ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿಗೆ ಬಿದ್ದು ವ್ಯಕ್ತಿ ದುರ್ಮರಣ

ವಿರಾಜಪೇಟೆ ತಾಲೋಕು ಕರಡಿಗೋಡು ಗ್ರಾಮದ ದುಬಾರೆ ಹಾಡಿಯ ನಿವಾಸಿ ಶ್ರೀಮತಿ ಜೆ.ಕೆ ರಾಧ ಎಂಬವರ ಪತಿ ಸಂದಣ್ಣ ಎಂಬವರು ದಿನಾಂಕ 31-5-2020 ರಂದು ನಂಜರಾಜಪಟ್ಟಣದಿಂದ ತಮ್ಮ ಮನೆಯ ಕಡೆಗೆ ಕಾವೇರಿ ನದಿಯ ಮೂಲಕ ಕಲ್ಲುಬಂಡೆಗಳ ಮೇಲೆ  ನಡೆದುಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ದುರ್ಮರಣಕ್ಕೀಡಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್-ಕಾರು ನಡುವೆ ಅಪಘಾತ

ಸೋಮವಾರಪೇಟೆ ಠಾಣೆ ಸರಹದ್ದಿನ ಸೋಮವಾರಪೇಟೆ ನಗರದ ಸಫಾಲಿ ಬಾರ್ ಮುಂದುಗಡೆ ದಿನಾಂಕ 31-5-2020 ರಂದು ಮೋಟಾರ್ ಸೈಕಲ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಕುಸುಬೂರು ಗ್ರಾಮದ ಕೆ.ಡಿ.ಮುತ್ತಣ್ಣ ಎಂಬವರು ಗಾಯಗೊಂಡಿದ್ದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.