Crime News

ಆನ್ ಲೈನ್ ವಂಚನೆ ಪ್ರಕರಣ

ದಿನಾಂಕ: 04-06-2020 ರಂದು ಮಡಿಕೇರಿ ತಾಲ್ಲೂಕು ತಲ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬುವವರು ಫೇಸ್ ಬುಕ್ ಸಾಮಾಜಿಕ ತಾಣದಲ್ಲಿ ಬೊಲೆರೋ ಜೀಪು ಮತ್ತು ಓಮ್ನಿ ವಾಹನದ ಮಾರಾಟದ ಬಗ್ಗೆ ಜಾಹಿರಾತನ್ನು ಗಮನಿಸಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ವಿಚಾರಿಸಿದಾಗ ಯೋಗೇಶ್ ಎಂಬ ವ್ಯಕ್ತಿ ಮಾತನಾಡಿ ಆರ್.ಸಿ ಬದಲಾವಣೆಗೆ 7232044983  ನಂಬರ್ ಗೆ 70,000 ರೂ ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಅದರಂತೆ  70,000 ಹಣ ಹಣವನ್ನು ಗೂಗಲ್ ಪೇ ಮೂಲಕ  ಸಂದಾಯ ಮಾಡಿರುತ್ತಾರೆ. ನಂತರ ವಾಹನದ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಕರೆ ಸ್ವೀಕರಿಸದೆ ವಾಹನಗಳನ್ನು ನೀಡದೇ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 05-06-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 05-06-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡಗರಹಳ್ಳಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಪಿ-6605 ರ ಜೀಪನ್ನು ಅದರ ಚಾಲಕ ಮಾಚಯ್ಯ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿಯಾದ್ದರಿಂದ ಜೀಪಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದು ಈ ಬಗ್ಗೆ ಶ್ರೀಮತಿ ಧರ್ಮವತಿ ಎಂಬುವವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 05-06-2020 ರಂದು ವಿರಾಜಪೇಟೆ ತಾಲ್ಲೂಕು ಮುಕ್ಕಾಟಿಕೊಪ್ಪ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಟಿ-4627 ರ ಟ್ಯ್ರಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಎ-12-ಹೆಚ್-4644 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಅಣ್ಣಪ್ಪ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಕಿಶೋರ್ ಮಲ್ಲಿಕ್ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.