Crime News

ಹಲ್ಲೆ ಪ್ರಕರಣ

ದಿನಾಂಕ: 06-06-2020 ರಂದು ವಿರಾಜಪೇಟೆ ತಾಲ್ಲೂಕು ಬೆಮ್ಮತ್ತಿ, ಧನುಗಾಲ ಗ್ರಾಮದ ನಿವಾಸಿಗಳಾದ ಮಹಮ್ಮದ್ ಕುಟ್ಟಿ, ಮೊಯ್ದು ಕುಟ್ಟಿ,ಅಬ್ದುಲ್ ರೆಹಮಾನ್ ಮತ್ತು ಅಬುಬಕ್ಕರ್, ರಾಫಿ, ಬಾಪು, ಜುನೈದ್, ಸಾದಿಕ್, ಆಸಿಪ್, ಸರ್ಪು ಎಂಬುವವರ ನಡುವೆ ವೈಯಕ್ತಿಕ ವಿಚಾರದಲ್ಲಿ ಜಗಳವಾಗಿ ಕೊಲೆ ಮಾಡುವ ಉದ್ದೇಶದಿಂದ ಪರಸ್ಪರ ದೊಣ್ಣೆ, ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 06-06-2020 ರಂದು ವಿರಾಜಪೇಟೆ ತಾಲ್ಲೂಕು ಸೀಗೆತೋಡು ಬಳಿ ಗೋಣಿಕೊಪ್ಪ –ಮೈಸೂರು ಮುಖ್ಯ ರಸ್ತೆಯಲ್ಲಿ ಕೆಎ-12-ಬಿ-1991 ರ ಟಿಪ್ಪರ್ ಲಾರಿಯನ್ನು ಅದರ ಚಾಲಕ ಕಟ್ಟೇರ ಜೀವನ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಕೃಷ್ಣಮೂರ್ತಿ ಎಂಬುವವರಿಗೆ ಡಿಕ್ಕಿಪಡಿಸಿದ್ದರಿಂದ ತೀವ್ರ ಗಾಯಗೊಂಡಿದ್ದು ನಂತರ ಮುಂದೆ ಚಲಿಸಿ ಪಕ್ಕದಲ್ಲಿದ್ದ ಮೀನು ಅಂಗಡಿಗೆ ಡಿಕ್ಕಿಪಡಿಸಿದ್ದರಿಂದ ಅಲ್ಲಿದ್ದ ಆರಮುಗಂ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸಸು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

ದಿನಾಂಕ: 06-06-2020 ರಂದು ವಿರಾಜಪೇಟೆ ತಾಲ್ಲೂಕು ಅಂಬಟ್ಟಿ ಬಿಟ್ಟಂಗಾಲ ಗ್ರಾಮದ ಬಳಿ ಕೆಎ-12ಎ-5516 ರ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿ.ಎಸ್.ಐ ಮಂಚಯ್ಯ ಆರ್. ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 05-06-2020 ರಂದು ಸೋಮವಾರಪೇಟೆ ತಾಲ್ಲೂಕು ದುಂಡಳ್ಳಿ ಗ್ರಾಮದ ನಿವಾಸಿ ರಂಜಿತ್ ಮತ್ತು ಅವರ ಪತ್ನಿಯವರು ಮನೆಯಲ್ಲಿರುವಾಗ ಹರಿ, ಪ್ರಸಾದ್, ಮತ್ತು ಕೌಶಿಕ್ ಎಂಬುವವರು ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 06-06-2020 ರಂದು ಸೋಮವಾರಪೇಟೆ ತಾಲ್ಲೂಕು ಅಗಳಿ ಗ್ರಾಮದ ನಿವಾಸಿ ಗಿರೀಶ್ ಎಂಬುವವರು ಅವರ ಚಿಕ್ಕಪ್ಪರವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಅದೇ ಗ್ರಾಮದ ನಿವಾಸಿಗಳಾದ ಸುಬ್ಬಯ್ಯ, ತೇಜೇಶ್,ಕವನ, ಸುನಂದ ಎಂಬುವವರು ಅಕ್ರಮ ಪ್ರವೇಶ ಮಾಡಿ ಹಳೆ ವೈಷಮ್ಯದಿಂದ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 06-06-2020 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ ಬಳಿ ಮುಖ್ಯ ರಸ್ತೆಯಲ್ಲಿ ಒಂದು ಬುಲೆಟ್ ಬೈಕನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಪ್ರೇಮ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದು , ಬೈಕ್ ಸವಾರ ಬೈಕನ್ನು ನಿಲ್ಲಿಸದೇ ಹೋಗಿರುವುದಾಗಿ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಶ್ರೀಗಂಧ ಸಾಗಾಟ ಪ್ರಕರಣ

ದಿನಾಂಕ: 06-06-2020 ರಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಬಳಿ ಕೆಎ-05-ಪಿ-2579 ರ ಕಾರಿನಲ್ಲಿ ಅಕ್ರಮವಾಗಿ ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಠಾಣೆ ಪಿ.ಎಸ್.ಐ ಮೋಹನ್ ರಾಜ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.