Crime News

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 08-06-2020 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ಶ್ರೀನಿಧಿ ಬಡಾವಣೆ ನಿವಾಸಿ ಕೌಶಿಕ್ ಎಂಬುವವರು ಅವರ ಕೆಎ-12-ಇಎ-5521 ರ ಬೈಕ್ ನಲ್ಲಿ ಬಜಾಜ್ ಆಟೋ ಶೋರೂಂ ನಲ್ಲಿ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ವಾಪಾಸ್ಸು ಮನೆಗೂ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ಕುಮಾರಸ್ವಾಮಿ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 09-06-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡುಮಂಗಳೂರು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-55-ಎಸ್-1935 ರ ಬೈಕ್ ಸವಾರ ಶ್ರೀನಿವಾಸ, ಎಂಬುವವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎಲ್-5928 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಅನಿಲ್, ನಿಖಿಲ್ ಎಂಬುವವರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಪ್ರಚೋದನೆ ಪ್ರಕರಣ

ದಿನಾಂಕ: 07-06-2020 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ಓಂಕಾರ್ ಬಡಾವಣೆ ನಿವಾಸಿ ಪಿ.ಸಿ ಕೃಷ್ ಎಂಬುವವರು ಮಡಿಕೇರಿ ನಗರದ ಗೌಳಿಬೀದಿಯಲ್ಲಿ ವಾಸವಿರುವ ಅವರ ತಂಗಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ದಿನಾಂಕ: 08-06-2020 ರಂದು ಮನೆಯಲ್ಲಿ ಒಂದು ಕವರ್ ನಲ್ಲಿ ಕೃಷ್ಣರವರು ಬರೆದಿದ್ದ ಪತ್ರ ಸಿಕ್ಕಿದ್ದು ಪತ್ರದಲ್ಲಿ ಕೃಷ್ಣ ರವರು ಅವರ ಸಾವಿಗೆ ಪಿ.ಸಿ ಮಧುರಯ್ಯ ಹಾಗೂ ಇತರ 16 ಜನರ ಕಾರಣರಾಗಿರುವ ವಿವರ ಬರೆದಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 07-06-2020 ರಂದು ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮದ ವಾಟೆಕಾಡು ನಿವಾಸಿ ಸುಬೈದ ಮತ್ತು ಅವರ ಮಗಳಿಗೆ ಅದೇ ಗ್ರಾಮದ ನಿವಾಸಿಗಳಾದ ಮಹಮ್ಮದ್ ಕುಂಞಿ ಮತ್ತು ಮಜೀಬ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಮನೆಯ ಬಳಿ ಬಂದು ಅವಾಚ್ಯ ಪದಗಳಿಂದ ಬೈದು ಕಾಲಿನಿಂದ ಒದ್ದು ನೋವುಪಡಿಸಿದ್ದು ಈ ಬಗ್ಗೆ ದಿನಾಂಕ: 09-06-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 09-06-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡಗರಹಳ್ಳಿ ನಿವಾಸಿಗಳಾದ ಇಬ್ರಾಹಿಂ, ಜುನೈದ್, ಇರ್ಷಾದ್, ರಫೀಕ್, ಮತ್ತು ಹಂಸ, ಶರತ್, ಅಪ್ಪುಣಿ ಎಂಬುವವರ ನಡುವೆ ಕ್ರಿಕೆಟ್ ಆಟವಾಡುವ ಸಮಯದಲ್ಲಿ ನಡೆದ ಜಗಳದ ವೈಷಮ್ಯದಿಂದ ಪರಸ್ಪರ ಬ್ಯಾಟ್ ಮತ್ತು ದೊಣ್ಣೆಗಳಿಂದ ಹೊಡೆದಾಡಿಕೊಂಡು ಕೊಲೆಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.