Crime News

ಮರ ಬಿದ್ದು ಮಹಿಳೆ ಸಾವು

ದಿನಾಂಕ 12/06/2020 ರಂದು ಸೋಮವಾರಪೇಟೆ ಬಳಿಯ ಗರ್ವಾಲೆ ಗ್ರಾಮದ ಪಾಸುರ ಕುಂಞಪ್ಪ ಎಂಬವರ ತೋಟದಲ್ಲಿ ಮಾದಾಪುರದ ಕಾರೆಕಾಡು ನಿವಾಶಿ ಪಾರ್ವತಿ ಎಂಬವರು ಕೆಲಸ ಮಾಡಿಕೊಂಡಿರುವಾಗ ಪಕ್ಕದ ತೊಟದಿಂದ ಬಸರಿ ಮರವೊಂದು ಮಳೆಯಿಂದಾಗಿ ಕೆಳಗೆ ಬಿದ್ದು ಕೆಲಸ ಮಾಡಿಕೊಂಡಿರುವ ಪಾರ್ವತಿರವರಿಗೆ ತೀವ್ರತರದ ಗಾಯಗಳಾಗಿ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರಳು ಕಳವು ಪ್ರಕರಣ

ದಿನಾಂಕ 12/06/2020ರಂದು ಕೊಡ್ಲಿಪೇಟೆ ಬಳಿಯ ಹಂಪಾಪುರ ಗ್ರಾಮದಲ್ಲಿ ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳನ್ನು ಕದ್ದು ಸಾಗಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಶನಿವಾರಸಂತೆ ಠಾಣೆಯ ಎಎಸ್‌ಐ ಹೆಚ್‌.ಎಂ.ಗೋವಿಂದರವರು ಸಿಬ್ಬಂದಿಗಳೊಂದಿಗೆ ಹೇಮಾವತಿ ನದಿ ತೀರಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಕೆಎ-45-ಟಿಎ-5358ರ ಟ್ರಯಾಕ್ಟರ್ ಒಂದರಲ್ಲಿ ಓರ್ವ ವ್ಯಕ್ತಿಯು ಮರಳು ತುಂಬಿಕೊಂಡು ಬರುತ್ತಿದ್ದು ಪೊಲೀಸರನ್ನು ಕಂಡು ಟ್ರ್ಯಾಕ್ಟರನ್ನು ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಎಎಸ್‌ಐ ಹೆಚ್‌.ಎಂ. ಗೋವಿಂದರವರು ಟ್ರ್ಯಾಕ್ಟರ್ ಮತ್ತು ಮರಳನ್ನು ಅಮಾನತ್ತುಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಾಯಾಳು ಸಾವು

ದಿನಾಂಕ 08/06/2020ರಂದು ಶನಿವಾರಸಂತೆ ಬಳಿಯ ಹಿರಿಕರ ನಿವಾಸಿ ತಮ್ಮಯ್ಯ ಎಂಬವರು ಗೌಡಳ್ಳಿ ಗ್ರಾಮದ ಕೊಮಾರ ಎಂಬವರ ಮನೆಯ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಆಕಸ್ಮಿಕವಾಗಿ ಕಾಳು ಜಾರಿ ಕೆಳಗೆ ಬಿದ್ದು ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12/06/2020 ರಂದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಸಾಗಾಟ ಇಬ್ಬರ ಬಂಧನ

ದಿನಾಂಕ 12/06/2020ರಂದು ವಿರಾಜಪೇಟೆ ನಗರದ ಷಂಷುದ್ದೀನ್ ಮತ್ತು ರಫೀಕ್ ಗುಂಡಿಗೆರೆ ಎಂಬವರಿಬ್ಬರು ಎರಡು ಬೈಕುಗಳಲ್ಲಿ ಪೆರುಂಬಾಡಿ ಕಡೆಯಿಂದ ವಿರಾಜಪೇಟೆ ನಗರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ವಿರಾಜಪೇಟೆ ನಗರ ಠಾಣೆಯ ಪಿಎಸ್‌ಐ ಹೆಚ್‌.ಎಸ್.ಭೋಜಪ್ಪರವರು ಪತ್ತೆ ಹಚ್ಚಿ ಇಬ್ಬರೂ ಆರೋಪಿಗಳನ್ನು ಬಂಧಿಸಿ ಸುಮಾರು 850 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೆಂಕಿ ಆಕಸ್ಮಿಕ ವ್ಯಕ್ತಿ ಸಾವು

ದಿನಾಂಕ 10.06/2020ರಂದು ವಿರಾಜಪೇಟೆ ನಗರದ ಶಿವಕೇರಿ ನಿವಾಸಿ ಹೆಚ್‌.ಎಲ್. ಹನುಮ ಎಂಬವರು ಮನೆಯಲ್ಲಿ ಅಡುಗೆ ಕೋಣೆಯ ಒಲೆಯ ಮುಂದೆ ಬೆಂಕಿ ಕಾಯಿಸುತ್ತಾ ಕುಳಿತಿರುವಾಗ ಆಕಸ್ಮಿಕವಾಗಿ ಪಂಚೆಗೆ ಬೆಂಕಿ ತಗುಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12/06/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/06/2020ರಂದು ಅಮ್ಮತ್ತಿ ಬಳಿಯ ಪುಲಿಯೇರಿ ನಿವಾಸಿ ಟಿ.ಎಂ.ಹೆನ್ರಿ ಎಂಬವರು ವಿರಾಜಪೇಟೆ ನಗರದ ಕೈರಾಸ್ ಎಸ್ಟೇಟಿನ ಗೇಟಿನ ಬಳಿ ಕೆಎ-12-ಪಿ-658 ರ ಕ್ರೇನಿನ ಮೂಲಕ ಮರದ ದಿಮ್ಮಿಗಳನ್ನು ಲಾರಿಗೆ ಲೋಡ್‌ ಮಾಡುತ್ತಿರುವಾಗ ಕ್ರೇನ್ ಚಾಲಕ ಮಂಜು ಎಂಬಾತನು ಅಜಾಗರೂಕತೆಯಿಂದ ಕ್ರೇನ್‌ ಅನ್ನು ಚಾಲಿಸಿ ಕೆಲಸ ಮಾಡುತ್ತಿದ್ದ ಹೆನ್ರಿರವರ ಪಾದದ ಮೇಲೆ ಹತ್ತಿಸಿದ ಪರಿಣಾಮ ಹೆನ್ರಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.