Crime News

ವಾಹನ ಅಪಘಾತ

ದಿನಾಂಕ 12-06-2018 ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ನಿವಾಸಿಯಾದ ಸಂಜಯ್ ಎಂಬುವವರು ಸಂಸಾರದೊಂದಿಗೆ ಮಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿಯ ಇಬ್ನಿ ರೆಸಾರ್ಟ್ ನ ಬಳಿ ತಲುಪುವಾಗ ಎದುರುಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಚಾಲಕ ರವೀಂದ್ರ ರೆಡ್ಡಿ ಎಂಬುವವರು ತಿರುವು ರಸ್ತೆಯಲ್ಲಿ ಅಜಾಗರೂಕತೆಯಿಂಧ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಪೇರೂರು ಗ್ರಾಮದಲ್ಲಿ ವರದಿಯಾಗಿದೆ. ಪೇರೂರು ಗ್ರಾಮದ ನಿವಾಸಿಯಾದ ಮಂದಣ್ಣ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 12-06-2018 ರಂದು ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಯದು ಕುಮಾರ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ಬೈಕಿಗೆ ಜೀಪು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಗೋಣಿಕೊಪ್ಪಲುವಿನ ಸೀಗೆತೋಡು ಎಂಬಲ್ಲಿ ವರದಿಯಾಗಿದೆ. ದಿನಾಂಕ 12-06-2018 ರಂದು ದೇವರಪುರ ಗ್ರಾಮದ ನಿವಾಸಿಯಾದ ಪೂಣಚ್ಚ ಎಂಬುವವರು ಗೋಣಿಕೊಪ್ಪಲುವಿನ ಕಡೆಗೆ ಹೋಗುತ್ತಿರುವಾಗ ಸೀಗೆತೋಡು ಎಂಬಲ್ಲಿಗೆ ತಲುಪುವಾಗ ಎದುರುಡೆಯಿಂಧ ಪಿಕ್ ಅಪ್ ಜೀಪನ್ನು ಚಾಲಕ ಹರೀಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಬೈಕಿಗೆ ಡಿಕ್ಕಿಪಡಿಸಿದ್ದು, ಪೂಣಚ್ಚನವರ ಕಾಲುಗಳಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ವರದಿಯಾಗಿದೆ. ಚೆನ್ನಾಪುರ ಗ್ರಾಮದ ನಿವಾಸಿಯಾದ ಶಶಿಧರ ಎಂಬುವವರು ದಿನಾಂಕ 12-06-2018 ರಂದು ತನ್ನ ತಂಧೆಯಾದ ಬಸಪ್ಪನವರೊಂದಿಗೆ ಮದ್ಯಪಾನ ಮಾಡಲು ಹಣ ಕೇಳಿದಾಗ ಜಗಳವಾಗಿ ಶಶಿಧರನು ಕತ್ತಿಯಿಂದ ತಂದೆಯ ಕಾಲಿಗೆ ಕಡಿದು ತೀವ್ರ ತರಹದ ಗಾಯವಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಮೇಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.

ಬೈಕಿಗೆ ಜೀಪು ಡಿಕ್ಕಿ

ಬೈಕಿಗೆ ಜೀಪು ಡಿಕ್ಕಿಯಾಗಿ ಬೈಕು ಚಾಲಕ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಬೈಚನಹಳ್ಳಿಯ ನಿವಾಸಿಯಾದ ಉದಯ ಎಂಬುವವರು ದಿನಾಂಕ 12-06-2018 ರಂದು ಬೈಕಿನಲ್ಲಿ ಕುಶಾಲನಗರದಲ್ಲಿರುವ ರೈತ ಭವನದ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಬೊಲೆರೋ ಜೀಪನ್ನು ಚಾಲಕ ಬೈಚನಹಳ್ಳಿಯ ನಿವಾಸಿ ಬಷೀರ್ ಎಂಬುವವರು ಅಜಾಗರೂಕತೆಯಿಂಧ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಉದಯವರ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.