Crime News

ಕಾರು-ಟಿಪ್ಪರ್ ಲಾರಿ ನಡುವೆ ಅಪಘಾತ

ದಿನಾಂಕ 13-6-2020 ರಂದು ಸಿದ್ದಾಪುರ ಠಾಣಾ ಸರಹದ್ದಿನ ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ಎಸ್ಟೇಟಿನ ಸಮೀಪ ಪುಲಿಯೇರಿ ಗ್ರಾಮದ ಎಂ.ಸಿ. ಶಫೀರ್ ಎಂಬವರು ತಮ್ಮ ಇನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿ ಕಾರು ಜಖಂ ಗೊಂಡಿದ್ದು ಅಲ್ಲದೆ ಚಾಲಕ ಶಫೀರ್ ರವರು ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಸಿದ್ದಾಪುರ ಠಾಣಾ ಸರಹದ್ದಿನ ಬೈರಂಬಾಡ ಗ್ರಾಮದ ಕೊಟ್ರಾನ್ ಎಸ್ಟೇಟಿನ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಜೇನುಕುರುಬರ ಪಾರ್ವತಿ ಎಂಬವರ ಪತಿ ಕೃಷ್ಣಪ್ಪ ಎಂಬವರು ದಿನಾಂಕ 26-5-2020 ರಂದು ವಿಷ ಸೇವಿಸಿ ಅಸ್ವಸ್ಥರಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 12-6-2020 ರಂದು ಮೃತಪಟ್ಟಿದ್ದು, ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ

ನಾಪೋಕ್ಲು ಠಾಣಾ ವ್ಯಾಪ್ತಿಯ ಇಂದಿರಾನಗರದ ನಿವಾಸಿ ಮೊಹಮ್ಮದ್ ಹನೀಫ್ ಎಂಬವರು ದಿನಾಂಕ 13-6-2020 ರಂದು ಪಕ್ಕದಲ್ಲಿರುವ ಕುರೇಶಿ ಎಂಬವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕುರೇಶಿರವರ ವೈಯಕ್ತಿಕ ವಿಚಾರವನ್ನು ಬೇರೆಯವರಿಗೆ ತಿಳಿಸಿದ ವಿಚಾರದಲ್ಲಿ ಜಗಳವಾಗಿ ಕುರೇಶಿ ಹಾಗು ಅಸ್ಗರ್ ರವರು ಸೇರಿ ಮೊಹಮ್ಮದ್ ಹನೀಫ್ ರವರ ಮೇಲೆ ಹಲ್ಲೆ ಮಾಡಿದ್ದು ಅವರ ಪತ್ನಿ ರಶೀಧರವರನ್ನು ಎಳೆದಾಡಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು  ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 13-6-2020 ರಂದು ನಾಪೋಕ್ಲು ಠಾಣಾ ಸರಹದ್ದಿನ ಇಂದಿರಾ ನಗರದ ಎಂ.ಎ. ಅಸ್ಗರ್ ರವರು ಅವರ ಪಕ್ಕದ ಮನೆಯ ಮೊಹಮ್ಮದ್ ರವರಲ್ಲಿ ಕೋವಿಡ್-19  ಸಮಯದಲ್ಲಿ ಬೇರೆಯವರನ್ನು ಮನೆಗೆ ಸೇರಿಸುವ ವಿಚಾರದಲ್ಲಿ ಇಬ್ಬರಿಗೆ ಜಗಳವಾಗಿದ್ದು ಮೊಹಮ್ಮದ್ ಹಾಗು ಅವರ ಪತ್ನಿ ರಶೀಧರವರು ಸೇರಿ ಅಸ್ಗರ್ ರವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಿಗಳ ಪತ್ತೆಹಚ್ಚಲು ಅಳವಡಿಸಿದ ಕ್ಯಾಮೇರಾ ಕಳವು:

ವಿರಾಜಪೇಟೆ ತಾಲೋಕು ಹುದಿಕೇರಿ ಶಾಖೆಯ ಉಪ ವಲಯ  ಅರಣ್ಯಾಧಿಕಾರಿಯವರು ಹುಲಿಯ ಇರುವಿಕೆಯ ಬಗ್ಗೆ ಪತ್ತೆ ಹಚ್ಚಲು  ಹರಿಹರ ಗ್ರಾಮದ ಸುಬ್ರಮಣ್ಯ ದೇವರ ಕಾಡಿನಲ್ಲಿ ಒಟ್ಟು 5 ಕ್ಯಾಮರಗಳು ಹಾಗು ಶ್ರೀ ಬಿ.ಎಸ್ ಸುರಕ್ಷಕರವರ ಕಾಫಿ ತೋಟದ ಪಕ್ಕದ  ಪಾಳು ಬಿಟ್ಟ ಕಾಡು  ಜಾಗದಲ್ಲಿ ಒಟ್ಟು 4 ಕ್ಯಾಮರಗಳನ್ನು ಆಳವಡಿಸಿದ್ದು,  ದಿನಾಂಕ 17-05-2020 ರಂದು ಪೂರ್ವಹ್ನ 09:30 ಗಂಟೆಯ ಸಮಯದಲ್ಲಿ ಸಿಬ್ಬಂದಿಗಳು ಕ್ಯಾಮರಗಳನ್ನು ಪರಿಶೀಲಿಸಿದಾಗ ಸದರಿ  ಹರಿಹರ ಗ್ರಾಮದ ಸುಬ್ರಮಣ್ಯ ದೇವರ ಕಾಡಿನಲ್ಲಿ ಅಳವಡಿಸಿದ 5 ಕ್ಯಾಮರಗಳ ಪೈಕಿ 3 ಕ್ಯಾಮರಗಳು ಹಾಗು ಹರಿಹರ ಗ್ರಾಮದ ಶ್ರೀ ಬಿ.ಎಸ್ ಸುರಕ್ಷರವರ ಕಾಫಿ ತೋಟದ ಪಕ್ಕದ  ಪಾಳು ಬಿಟ್ಟ ಕಾಡು ಜಾಗದಲ್ಲಿ ಅಳವಡಿಸಿದ 4  ಕ್ಯಾಮರಗಳ ಪೈಕಿ 2 ಕ್ಯಾಮರಗಳನ್ನು ಒಟ್ಟು 5 ಕ್ಯಾಮರಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡುಬಂದಿದ್ದು ಕಳುವಾದ ಸ್ವತ್ತಿನ ಒಟ್ಟು ಮೌಲ್ಯ 87,500/-ರೂ.ಗಳಾಗಿದ್ದು, ಈ ಸಂಬಂಧ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ಅಕ್ರಮ ಪ್ರವೇಶ ಹಲ್ಲೆಗೆ ಯತ್ನ:

ಸೋಮವಾರಪೇಟೆ ತಾಲೋಕು ಚೌಡ್ಲು ಗ್ರಾಮದ ಸಿ.ಕೆ. ವೀರಪ್ಪ ಎಂಬವರು ದಿನಾಂಕ 12-6-2020 ರಂದು ತಮ್ಮ ಮನೆಯಲ್ಲಿರುವಾಗ್ಗೆ ಅವರ ಅಣ್ಣನ ಮಗನಾದ ದರ್ಶನ್ ಎಂಬ ವ್ಯಕ್ತಿ  ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಏಕಾಏಕಿ ತೋಟದಲ್ಲಿ ಸಿಲ್ವರ್ ಮರ ಕಡಿದಿರುವ ವಿಚಾರವಾಗಿ ಜಗಳ ಮಾಡಿ ಅವಾಷ್ಯ ಶಬ್ದಗಳಿಂದ ಬೈದು  ಕತ್ತಿಯಿಂದ ಹಲ್ಲೆಗೆ ಯತ್ನಿಸಿದ್ದು ಅಲ್ಲದೆ ಮನೆಯ ಕಿಟಕಿಯ ಗಾಜನ್ನು ಒಡೆದು ಹಾಕಿದ್ದು ಅಲ್ಲದೆ  ಕೊಲೆ ಮಾಡುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಶನಿವಾರಸಂತೆ ಠಾಣಾ ಸರಹದ್ದಿನ ನಿಡ್ತ ಗ್ರಾಮದ ನಿವಾಸಿ ಸಣ್ಣಪ್ಪ ಎಂಬವರು ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 13-6-2020 ರಂದು ನಿಡ್ತಾಗ್ರಾಮದಲ್ಲಿ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,  ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.